/newsfirstlive-kannada/media/post_attachments/wp-content/uploads/2025/04/RCB_KOHLI.jpg)
ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ 2ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯ ಮಾಲೆ ಧರಿಸಿಕೊಂಡಿದೆ. ಹ್ಯಾಟ್ರಿಕ್ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿರುವ ಆರ್​​ಸಿಬಿ ಇಂದು ಬಲಿಷ್ಠ ಗುಜರಾತ್ ಟೈಟನ್ಸ್ ಜೊತೆ ಅಖಾಡಕ್ಕೆ ಇಳಿಯುತ್ತಿದೆ. ಆದರೆ ಎದುರಾಳಿ ತಂಡದಲ್ಲಿರುವ ಸ್ಪಿನ್ನರ್ಗಳಿಂದ ಆರ್​ಸಿಬಿಗೆ ಕೊಂಚ ನಡುಕ ಶುರುವಾದಂತೆ ಆಗಿದೆ.
ತವರಿನ ಅಂಗಳದಲ್ಲಿ ಐಪಿಎಲ್ ಪಂದ್ಯ ಆಡುತ್ತಿರುವುದರಿಂದ ಆರ್​ಸಿಬಿ ತಂಡ ಗೆದ್ದು ತನ್ನ ಲಾಯಲ್ ಫ್ಯಾನ್ಸ್​ಗೆ ಗಿಫ್ಟ್​ ನೀಡಬೇಕಿದೆ. ಬೇರೆ ಮೈದಾನಗಳಲ್ಲಿ ಗೆಲ್ಲುವುದಕ್ಕಿಂತ ಅಭಿಮಾನಿಗಳ ಎದುರು ತವರಿನ ಅಂಗಳದಲ್ಲಿ ಗೆದ್ದು ಕಾಲರ್ ಎಗರಿಸಿದ್ರೆ ಆರ್​ಸಿಬಿಯ ಆ ಖದರ್ ಬೇರೆ ಲೆವೆಲ್​ ಇರುತ್ತದೆ. ಗುಜರಾತ್ ಟೈಟನ್ಸ್​ ಸ್ಪಿನ್ನರ್​ಗಳಿಂದ ಬಲಷ್ಠವಾಗಿದ್ದು ಪಂದ್ಯವನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳುವ ಛಲದಂಕರಿದ್ದಾರೆ. ಸ್ಪಿನ್ನರ್​ಗಳಾದ ​ರವಿಶ್ರೀನಿವಾಸನ್ ಸಾಯಿ ಕಿಶೋರ್ ಹಾಗೂ ರಶೀದ್ ಖಾನ್ ಆರ್​ಸಿಬಿಗೆ ಕಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಮ್ಯಾಚ್​ ಸೋಲು, ರಿಷಭ್ ಪಂತ್ ಹಿಂದೆ ಬಿದ್ದ ಓನರ್ ಸಂಜೀವ್ ಗೋಯೆಂಕಾ.. ಮೈದಾನದಲ್ಲೇ ಫುಲ್ ಕ್ಲಾಸ್?
/newsfirstlive-kannada/media/post_attachments/wp-content/uploads/2025/04/Sai_Kishore_GT.jpg)
ಸಾಯಿ ಕಿಶೋರ್ ಅಥವಾ ರಶೀದ್ ಖಾನ್ ಒಬ್ಬರಲ್ಲ, ಒಬ್ಬರು ತಂಡಕ್ಕೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಾಯಿ ಕಿಶೋರ್ 1 ವಿಕೆಟ್ ಪಡೆದ್ರೆ, ರಶೀದ್ ಯಾವುದೇ ವಿಕೆಟ್ ಪಡೆದಿರಲಿಲ್ಲ. ಪಂಜಾಬ್ ಕಿಂಗ್ಸ್​ ಜೊತೆ ಆಡುವಾಗ ಸಾಯಿ ಕಿಶೋರ್ ಪ್ರಮುಖ ಪಾತ್ರ ವಹಿಸಿದ್ದರು. 4 ಓವರ್​ ಮಾಡಿದ್ದ ಕಿಶೋರ್ ಕೇವಲ 30 ರನ್​ ಮಾತ್ರ ನೀಡಿ 3 ಪ್ರಮುಖ ವಿಕೆಟ್​ ಕಬಳಿಸಿದ್ದರು. ಎಂ ಚಿನ್ನಸ್ವಾಮಿ ಸ್ಟೇಡಿಯಂ ಸ್ಪಿನ್ನರ್ ಸ್ನೇಹಿ ಆಗಿದ್ದರಿಂದ ಇದರ ಲಾಭ ಪಡೆಯಬಹುದು.
ಹೀಗಾಗಿ ಆರ್​ಸಿಬಿಯಲ್ಲಿ ವಿರಾಟ್​ ಕೊಹ್ಲಿ ಸೇರಿದಂತೆ ಉಳಿದ ಬ್ಯಾಟ್ಸ್​ಮನ್​ಗಳಿಗೆ ಸ್ಪಿನ್ ಬೌಲಿಂಗ್ ಎದುರಿಸುವುದು ಅಷ್ಟಕ್ಕೆ ಅಷ್ಟೇ. ಕಳೆದ ಪಂದ್ಯಗಳಂತೆ ಈ ಪಂದ್ಯದಲ್ಲೂ ಗುಜರಾತ್ ನಾಯಕ ಗಿಲ್​, ಸಾಯಿ ಕಿಶೋರ್ ಅಥವಾ ರಶೀದ್ ಖಾನ್ ಅವರನ್ನು ಕಣಕ್ಕೆ ಇಳಿಸಿದ್ರೆ ಆರ್​ಸಿಬಿ ಬ್ಯಾಟರ್​​ಗಳಿಗೆ ಥ್ರೆಟ್​ ಇದ್ದೇ ಇರುತ್ತದೆ. ಪ್ರಮುಖ ವಿಕೆಟ್ ಉರುಳಿಸಿಲ್ಲ ಎಂದರೂ ಹರಿದು ಬರೋ ರನ್​ಗೆ ಕಡಿವಾಣ ಹಾಕುವುದಂತೂ ಪಕ್ಕಾ. ಈ ಸ್ಪಿನ್ನರ್​ಗಳನ್ನ ಎದುರಿಸೋದೇ ರಾಯಲ್​ ಚಾಲೆಂಜರ್ಸ್​ಗೆ ಚಾಲೆಂಜ್ ಆಗಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us