/newsfirstlive-kannada/media/post_attachments/wp-content/uploads/2024/03/Faf_Kohli_RCB.jpg)
ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ನಡೆಯಿತು. ಈ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಐಪಿಎಲ್ ತಂಡಗಳು ಭಾರೀ ಮೊತ್ತಕ್ಕೆ ಖರೀದಿ ಮಾಡಿವೆ. ಆರ್‌ಸಿಬಿ ಕೂಡ 83 ಕೋಟಿ ಜತೆಗೆ ಹರಾಜು ಅಂಗಳ ಪ್ರವೇಶಿಸಿತ್ತು. 83 ಕೋಟಿ ಇದ್ರೂ ಆರ್‌ಸಿಬಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಅಚ್ಚರಿ ಎಂದರೆ ಕ್ಯಾಪ್ಟನ್ ಆಗಬಹುದಾದ ಯಾವುದೇ ಆಟಗಾರನನ್ನು ಆರ್‌ಸಿಬಿ ಖರೀದಿ ಮಾಡಿಲ್ಲ.
ಹರಾಜಿಗೆ ಮುನ್ನವೇ ಆರ್‌ಸಿಬಿ ಫಾಫ್ ಡುಪ್ಲೇಸಿಸ್ ಅವರನ್ನು ರಿಲೀಸ್ ಮಾಡಿತ್ತು. ಹಾಗಾಗಿ ಫ್ಯಾನ್ಸ್ ಹರಾಜಿನಲ್ಲಿ ಆರ್‌ಸಿಬಿ ಹೊಸ ಕ್ಯಾಪ್ಟನ್ಗೆ ಮಣೆ ಹಾಕಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ, ಇದ್ಯಾವುದಕ್ಕೂ ಕ್ಯಾರೇ ಎನ್ನದ ಆರ್‌ಸಿಬಿ ತನ್ನದೇ ಪ್ಲಾನ್ ಪ್ರಕಾರ ಆಟಗಾರರನ್ನು ಖರೀದಿ ಮಾಡಿದೆ. ಭರವಸೆಯ ದೇಶೀ ಆಟಗಾರರಿಗೆ ಆರ್‌ಸಿಬಿ ಮಣೆ ಹಾಕಿದೆ.
ಆರ್‌ಸಿಬಿ ಕ್ಯಾಪ್ಟನ್ ಯಾರು?
ಮತ್ತೊಮ್ಮೆ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಯಾವುದೇ ಅಧಿಕೃತ ಮಾಹಿತಿ ಶೇರ್ ಮಾಡಿಲ್ಲ. RCB ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದೆ. ಈ ಪೋಸ್ಟ್ ನೋಡುತ್ತಿದ್ದಂತೆ ಆರ್‌ಸಿಬಿ ನಾಯಕನ ಲಿಸ್ಟ್ಗೆ ಮತ್ತೊಬ್ಬ ಆಟಗಾರ ಎಂಟ್ರಿ ನೀಡಿದಂತಿದೆ.
Top K is HERE! 😎🔥
Pandya's got the aura... but you already know that. 🤌 #PlayBold#ನಮ್ಮRCBpic.twitter.com/JYFSaJvErd
— Royal Challengers Bengaluru (@RCBTweets)
Top K is HERE! 😎🔥
Pandya's got the aura... but you already know that. 🤌 #PlayBold#ನಮ್ಮRCBpic.twitter.com/JYFSaJvErd— Royal Challengers Bengaluru (@RCBTweets) December 9, 2024
">December 9, 2024
ಟಾಪ್ ಕೆ ಎಂದರೇನು?
ಆರ್‌ಸಿಬಿ ಪೋಸ್ಟ್ ಮಾಡಿರೋ ಟ್ವೀಟ್ನಲ್ಲಿ ಟಾಪ್ ಕೆ ಎಂದು ಬರೆದುಕೊಂಡಿದೆ. ಕೆ ಎಂದರೆ ಆರ್‌ಸಿಬಿ ಫ್ಯಾನ್ಸ್ ತಲೆಗೆ ಮೊದಲು ಬರೋದು ಕೊಹ್ಲಿ. ಆದರೆ, ಆರ್‌ಸಿಬಿ ಈ ಪೋಸ್ಟ್ನಲ್ಲಿ ಕೃನಾಲ್ ಪಾಂಡ್ಯ ಫೋಟೋ ಹಂಚಿಕೊಂಡಿದೆ. ಸ್ಟಾರ್ ಆಲ್ರೌಂಡರ್ಗೆ ಆರ್‌ಸಿಬಿ 5.75 ಕೋಟಿ ನೀಡಿ ಖರೀದಿಸಿದೆ. ಕೃನಾಲ್ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬರೋಡ ತಂಡವನ್ನು ಮುನ್ನಡೆಸುತ್ತಿದ್ದು, ಇವರಿಗೆ ಆರ್‌ಸಿಬಿ ಲೀಡ್ ಮಾಡೋ ಅವಕಾಶ ಸಿಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ