/newsfirstlive-kannada/media/post_attachments/wp-content/uploads/2024/01/Kohli_ABD_1.jpg)
ಹೇಗಾದ್ರೂ ಮಾಡಿ ಈ ಸಲ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಜಿದ್ದಿಗೆ ಬಿದ್ದಿದೆ. ಹಾಗಾಗಿ ಈ ಸೀಸನ್​ನಲ್ಲಿ ಆರ್​​ಸಿಬಿಯನ್ನು ಲೀಡ್​ ಮಾಡೋದು ಯಾರು? ಅನ್ನೋ ಚರ್ಚೆ ಜೋರಾಗಿತ್ತು. ಕ್ಯಾಪ್ಟನ್ಸಿ ರೇಸ್​ನಲ್ಲಿ ಸ್ಟಾರ್​ ಪ್ಲೇಯರ್​​ ವಿರಾಟ್​ ಕೊಹ್ಲಿ ಸೇರಿದಂತೆ ಹಲವರ ಹೆಸರುಗಳು ಕೇಳಿ ಬಂದಿದ್ದವು. ಈ ಎಲ್ಲಾ ಚರ್ಚೆಗಳಿಗೂ ತೆರೆ ಎಳೆದಿರೋ ಆರ್​​ಸಿಬಿ ಸ್ಟಾರ್​ ಪ್ಲೇಯರ್​​ ರಜತ್​ ಪಾಟಿದಾರ್​ ಅವರಿಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಿದೆ.
ಹೊಸ ಕ್ಯಾಪ್ಟನ್​ ಘೋಷಣೆ ಮಾಡಿರೋ ಆರ್​​ಸಿಬಿ ತಂಡ ಭವಿಷ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿರಾಟ್ ಅವರಿಗೆ ಈಗ 37 ವರ್ಷ. ರಜತ್‌ಗೆ ಕೇವಲ 31 ವರ್ಷ. ಕೊಹ್ಲಿಗಿಂತಲೂ ಹೆಚ್ಚಿನ ವರ್ಷ ರಜತ್​ ಆರ್​​ಸಿಬಿ ತಂಡವನ್ನು ಲೀಡ್​ ಮಾಡಬಹುದು. ಕೊಹ್ಲಿ ಇನ್ನೂ ಮೂರು ವರ್ಷ ಆಡಲಿದ್ದು, ಅಷ್ಟರೊಳಗೆ ರಜತ್​​ ಅವರನ್ನು ಒಳ್ಳೆಯ ಕ್ಯಾಪ್ಟನ್​ ಆಗಿ ರೆಡಿ ಮಾಡಬೇಕು ಎಂಬುದು ಆರ್​​ಸಿಬಿ ಪ್ಲಾನ್​​. ಇದರ ಮಧ್ಯೆ ಆರ್​​ಸಿಬಿ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್​ ಮಾತಿಗೆ ಆರ್​​ಸಿಬಿ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.
ಎಬಿಡಿ ಮಾತಿಗೆ ಮನ್ನಣೆ ನೀಡದ ಆರ್​​ಸಿಬಿ
ಈ ಹಿಂದೆ ಎಬಿಡಿ ಆರ್​​ಸಿಬಿಗೆ ಕ್ಯಾಪ್ಟನ್ಸಿ ವಿಚಾರದಲ್ಲಿ ದೊಡ್ಡ ಸಲಹೆ ನೀಡಿದ್ದರು. ನನ್ನ ಪ್ರಕಾರ ಆರ್‌ಸಿಬಿ ನಾಯಕತ್ವಕ್ಕೆ ವಿರಾಟ್ ಒಬ್ಬರೇ ಆಯ್ಕೆ. ಸದ್ಯ ವಿರಾಟ್ ವೃತ್ತಿ ಜೀವನದ ಕೊನೆ ಹಂತದಲ್ಲಿದ್ದಾರೆ. ಇವರು ಬೇಗ ಫಾರ್ಮ್​​ಗೆ ಬಂದು ತಂಡವನ್ನು ಗೆಲ್ಲಿಸಬೇಕು. ಇದು ಕೊಹ್ಲಿ ವೃತ್ತಿಜೀವನಕ್ಕೆ ತುಂಬ ಮಹತ್ವದಾಗಿದೆ. ಹೀಗಾಗಿ ಇವರನ್ನೇ ಕ್ಯಾಪ್ಟನ್​ ಮಾಡಬೇಕು ಎಂದಿದ್ದರು. ಆದರೀಗ, ಆರ್​​ಸಿಬಿ ಎಬಿಡಿ ಮಾತಿಗೂ ಕ್ಯಾರೇ ಎನ್ನದೆ ರಜತ್​ ಪಾಟಿದಾರ್​ಗೆ ನಾಯಕತ್ವದ ಜವಾಬ್ದಾರಿ ನೀಡಿದೆ.
ಕೊಹ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹಲವು ವರ್ಷಗಳ ಕಾಲ ಆರ್​​ಸಿಬಿಯನ್ನು ಲೀಡ್​ ಮಾಡಿದ್ದಾರೆ. ಇವರ ಕ್ಯಾಪ್ಟನ್ಸಿಯಲ್ಲಿ ಆರ್​​​ಸಿಬಿ ಹಲವು ಬಾರಿ ಫೈನಲ್​ ಪ್ರವೇಶಿಸಿದೆ. ಕೊಹ್ಲಿ ನಂತರ ಆರ್​​ಸಿಬಿಗೆ ಒಬ್ಬ ಲೀಡರ್​ ಬೇಕು. ಅದು ಯುವಕರೇ ಆಗಿರಬೇಕು. ಈ ದೃಷ್ಟಿಯಿಂದಲೇ ಆರ್​​ಸಿಬಿ ಮಹತ್ವದ ನಿರ್ಧಾರಕ್ಕೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us