ಕೆಂಪೇಗೌಡ ಏರ್​ಪೋರ್ಟ್​ನಲ್ಲಿ RCB ತಂಡಕ್ಕೆ ಭರ್ಜರಿ ಸ್ವಾಗತ.. ಫ್ಯಾನ್ಸ್​ ಇಂದ ಶಿಳ್ಳೆ, ಕೇಕೆ, ಜೈಕಾರ

author-image
Bheemappa
Updated On
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ RCB ತಂಡಕ್ಕೆ ಭರ್ಜರಿ ಸ್ವಾಗತ.. ಫ್ಯಾನ್ಸ್​ ಇಂದ ಶಿಳ್ಳೆ, ಕೇಕೆ, ಜೈಕಾರ
Advertisment
  • ಆರ್​ಸಿಬಿ ಹೊಡೆತಕ್ಕೆ ಚೆನ್ನೈ ವಿಸಲ್ ಫುಲ್ ಬಂದ್ ಆಯಿತು
  • ಅವರದ್ದೇ ನೆಲದಲ್ಲಿ ಗೆದ್ದು ಸೂಪರ್ ಕಿಂಗ್ಸ್​ಗೆ RCB ಚಮಕ್
  • ಚೆನ್ನೈ ಸೋತಿದ್ದು ಆರ್​ಸಿಬಿ ಫ್ಯಾನ್ಸ್​ ಖುಷಿ ಡಬಲ್ ಮಾಡಿದೆ

ದೇವನಹಳ್ಳಿ: ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಕೆಂಪೇಗೌಡ ಏರ್​ಪೋರ್ಟ್​ಗೆ ಆಗಮಿಸಿರುವ ಆರ್​ಸಿಬಿ ಆಟಗಾರರನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಚೆಪಾಕ್ ಸ್ಟೇಡಿಯಂನಲ್ಲಿ 17 ವರ್ಷದ ನಂತರ ಆರ್​ಸಿಬಿ ಟೀಮ್ ಇತಿಹಾಸ ಸೃಷ್ಟಿಸಿರುವುದು ಫ್ಯಾನ್ಸ್​ ಖುಷಿಯನ್ನ ಡಬಲ್ ಮಾಡಿದೆ.

ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರ್​ಸಿಬಿ ಆಟಗಾರರು ಬರುತ್ತಾರೆಂದು ಸಾವಿರಾರು ಅಭಿಮಾನಿಗಳು ಮೊದಲೇ ಸೇರಿದ್ದರು. ಆಟಗಾರರೆಲ್ಲಾ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆ ಆರ್​ಸಿಬಿ ಅಭಿಮಾನಿಗಳ ಉತ್ಸಾಹ ಹೇಳತೀರದಂತೆ ಆಗಿತ್ತು. ವಿಮಾನ ನಿಲ್ದಾಣದ ಟರ್ಮಿನಲ್- 1ಕ್ಕೆ ಆಗಮಿಸಿದ ರಜತ್ ಪಾಟಿದಾರ್ ಪಡೆಗೆ ಜೈಕಾರಗಳು ಮೊಳಗಿದವರು. ಆರ್​​ಸಿಬಿ.. ಆರ್​​ಸಿಬಿ ಚಾಂಟ್ಸ್​ ಎಲ್ಲರನ್ನು ಆಕರ್ಷಿಸಿತು. ಶಿಳ್ಳೆ, ಕೇಕೆ ವಿಮಾನ ನಿಲ್ದಾಣದಲ್ಲಿ ಕೇಳಿ ಬಂದವು.

ಇದನ್ನೂ ಓದಿ:ಡೆಲ್ಲಿ ಇಂದ ಕನ್ನಡಿಗನಿಗೆ ಸ್ಪೆಷಲ್ ಟ್ರೀಟ್​.. KL ರಾಹುಲ್​ಗಾಗಿ ಟ್ರಕ್​ನಲ್ಲಿ ಬಂದ ನಂ- 1 ಸ್ಪೆಷಲ್​ ಜೆರ್ಸಿ

publive-image

ಇನ್ನು ಆರ್​ಸಿಬಿ ಅಭಿಮಾನಿಗಳ ಸಂತಸ ಕಂಡು ಬೆರಗಾದ ಎಲ್ಲ ಆಟಗಾರರು ಪ್ಯಾನ್ಸ್​ ಕಡೆಗೆ ಕೈಬೀಸಿ ಚೀಯರ್ಸ್ ಮಾಡಿದರು. ನಗುವಿನಿಂದಲೇ ಎಲ್ಲರಿಗೂ ಪ್ಲೇಯರ್ಸ್​ ಧನ್ಯವಾದ ಅರ್ಪಿಸಿದರು. ಇನ್ನು ಆರ್​ಸಿಬಿಯ ಮುಂದಿನ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 2 ರಂದು ಗುಜರಾತ್ ಟೈಟನ್ಸ್​ ವಿರುದ್ಧ ನಡೆಯಲಿದೆ.

ರಾಯಲ್ ಚಾಲಂಜರ್ಸ್​ ಬೆಂಗಳೂರು ಟೀಮ್ 17 ವರ್ಷಗಳ ಬಳಿಕ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ತಂಡಕ್ಕೆ ಟಕ್ಕರ್ ಕೊಟ್ಟಿದೆ. ಬರೋಬ್ಬರಿ 50 ರನ್​ಗಳ ಅಂತರದಿಂದ ರಜತ್ ನೇತೃತ್ವದ ರೆಡ್ ಆರ್ಮಿ ದೊಡ್ಡ ಗೆಲುವು ಪಡೆದುಕೊಂಡಿದೆ. ಆರ್​ಸಿಬಿಯ ಬ್ಯಾಟಿಂಗ್ ಹಾಗೂ ಬೌಲಿಂಗ್​ ಮುಂದೆ ಚೆನ್ನೈ ವಿಲ ವಿಲ ಹೊದ್ದಾಡಿತು. 197 ರನ್​ಗಳ ಟಾರ್ಗೆಟ್​ ಸಮೀಪಕ್ಕೂ ಬಾರದ ಚೆನ್ನೈ ಕೇವಲ 146 ರನ್​ಗೆ ನೆಲ ಕಚ್ಚಿ, ಭಾರೀ ಮುಖಭಂಗಕ್ಕೆ ಒಳಗಾಯಿಯಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment