newsfirstkannada.com

RCB ಈ ಬಾರಿ ಕಪ್ ಗೆಲ್ಲೋದು ಪಕ್ಕಾ.. ವಿಲ್​​ ಜಾಕ್ಸ್ ಸೇರಿ ಇತರೆ ಲೀಗ್​​ನಲ್ಲಿ ಬೆಂಗಳೂರು ಪ್ಲೇಯರ್ಸ್​ ಹೇಗೆ ಆಡ್ತಿದ್ದಾರೆ?

Share :

Published January 20, 2024 at 2:53pm

    ಕೆಂಪಂಗಿ ಸೈನ್ಯದ ಅಭಿಮಾನಿಗಳ ಆತ್ಮವಿಶ್ವಾಸಕ್ಕೆ ಕಾರಣವೇನು?

    ಟ್ರೋಫಿ ವನವಾಸಕ್ಕೆ ಬ್ರೇಕ್​ ಬೀಳುತ್ತಾ ಎನ್ನುವುದು ಫ್ಯಾನ್ಸ್ ಕಾತರ

    42 ಎಸೆತ ಸ್ಫೋಟಕ 101 ರನ್​ ಸಿಡಿಸಿದ ಆಫ್ರಿಕಾದ ವಿಲ್​​ ಜಾಕ್ಸ್

ಐಪಿಎಲ್ ಹಂಗಾಮಕ್ಕೆ ಇನ್ನೂ 3 ತಿಂಗಳ ಬಾಕಿ ಇದೆ. ಈ ಸಲ ಏನೇ ಆದ್ರೂ ಸೈ ಆರ್​ಸಿಬಿ ಟ್ರೋಫಿ ಎತ್ತಿ ಹಿಡಿಯುತ್ತೆ. ಹೇಟರ್ಸ್​ ಬಾಯಿ ಮುಚ್ಚಿಸ್ತೀವಿ ಅಂತ ಆರ್​ಸಿಬಿ ಫ್ಯಾನ್ಸ್ ಫುಲ್ ಕಾನ್ಫಿಡೆಂಟ್​​ನಲ್ಲಿದ್ದಾರೆ. ಅಷ್ಟಕ್ಕೂ ಕೆಂಪಂಗಿ ಸೈನ್ಯದ ಅಭಿಮಾನಿಗಳ ಆತ್ಮವಿಶ್ವಾಸಕ್ಕೆ ಕಾರಣವಾದ್ರು ಏನು?.

ಇಂಡಿಯನ್ ಪ್ರೀಮಿಯರ್ ಲೀಗ್​​​. ಕ್ರಿಕೆಟ್​​​​​ನ ಅಸಲಿ ಮಹಾಜಾತ್ರೆ ಬಂದೇ ಬಿಡ್ತು. ಮಿಲಿಯರ್ ಡಾಲರ್ ಟೂರ್ನಿಗೆ 3 ತಿಂಗಳಷ್ಟೇ ಬಾಕಿ ಇದೆ. ಆದ್ರೆ ಆರ್​ಸಿಬಿ ಅಭಿಮಾನಿಗಳನ್ನ ಈಗಿನಿಂದಲೇ ಹಿಡಿಯೋಕೆ ಆಗ್ತಿಲ್ಲ. ಈ ಸಲ ಕಪ್​ ಗೆದ್ದೇ ಗೆಲ್ತೀವಿ. ಟ್ರೋಫಿ ವನವಾಸಕ್ಕೆ ಬ್ರೇಕ್​ ಬೀಳ್ತಿ ಅನ್ನೋ ಅತೀವ ಆತ್ಮವಿಶ್ವಾಸದಲ್ಲಿದ್ದಾರೆ. ಅದಕ್ಕೆ ಕಾರಣವೂ ಇದೆ. ಅದೇನಂದ್ರೆ ಆರ್​ಸಿಬಿ ಪ್ಲೇಯರ್ಸ್​ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಆಯಾ ದೇಶ ಹಾಗೂ ಫ್ಯಾಂಟಸಿ ಲೀಗ್​ಗಳಲ್ಲಿ ರನ್​ ಹೊಳೆಯನ್ನೇ ಹರಿಸ್ತಿದ್ದಾರೆ.

ಸೌತ್ ಆಫ್ರಿಕಾ ಟ್ವೆಂಟಿ ಲೀಗ್​​ನಲ್ಲಿ ವಿಲ್​ ಜಾಕ್ಸ್​​ ವೀರಾವೇಶ..!

ಆರ್​ಸಿಬಿ ಬ್ಯಾಟಿಂಗ್​ ಆಲ್​ರೌಂಡರ್ ವಿಲ್​​ ಜಾಕ್ಸ್​​​ ಸೌತ್ ಆಫ್ರಿಕಾ 20 ಲೀಗ್​ನಲ್ಲಿ ರನ್ ಸುನಾಮಿ ಎಬ್ಬಿಸಿದ್ದಾರೆ. ಡರ್ಬನ್ಸ್​ ಸೂಪರ್​ ಜೇಂಟ್ಸ್ ವಿರುದ್ಧ 42 ಎಸೆತಗಳಲ್ಲಿ ಸ್ಫೋಟಕ 101 ರನ್​ ಗಳಿಸಿದ್ದಾರೆ. ಹಿಂದಿನ ಪಂದ್ಯದಲ್ಲೂ ಬಿರುಸಿನ ಅರ್ಧಶತಕ ಗಳಿಸಿದ್ರು. ಇದೇ ಆರ್ಭಟವನ್ನ ಜಾಕ್ಸ್​ ಐಪಿಎಲ್​ನಲ್ಲಿ ಮುಂದುವರಿಸುವ ಇರಾದೆಯಲ್ಲಿದ್ದಾರೆ.

ಸಾಲಿಡ್​ ಫಾರ್ಮ್​ನಲ್ಲಿ ರಜತ್ ಪಟಿದಾರ್​​​..!

ಇನ್ನು ಆರ್​ಸಿಬಿ ತಂಡದ ಯಂಗ್​ಗನ್​ ರಜತ್ ಪಟಿದಾರ್​ ರನ್ ಕೊಳ್ಳೆ ಹೊಡೆಯುತ್ತಿದ್ದಾರೆ. ಭಾರತ ಪರ ಆಡುತ್ತಿರುವ ರಜತ್​​ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್​ನಲ್ಲಿ ಸೆಂಚುರಿ ಸಿಡಿಸಿ ಸೈ ಅನ್ನಿಸಿಕೊಂಡಿದ್ದಾರೆ. ಅಲ್ಲದೇ ಇತ್ತೀಚೆಗೆ ಮುಗಿದ ಲಿಸ್ಟ್​ ಎ ಪಂದ್ಯಗಳಲ್ಲಿ ರನ್ ಸರಮಾಲೆಯನ್ನೆ ಕಟ್ಟಿದ್ರು.

ಸುಯಶ್​ ಪ್ರಭುದೇಸಾಯಿ ರನ್ ಪರಾಕ್ರಮ..!

26 ರ ಸುಯಶ್​​​ ಪ್ರಭುದೇಸಾಯಿ ಆರ್​ಸಿಬಿ ಪರ ಘರ್ಜಿಸಿರೋದು ನಿಮಗೆಲ್ಲರಿಗೂ ಗೊತ್ತೇ ಇದೆ. ಈಗ ಇದೇ ಗೋವಾ ಪುತ್ತರ್​​ ಕಲರ್​ಫುಲ್ ಟೂರ್ನಿಗೂ ಮುನ್ನ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ರನ್​ ಭರಾಟೆ ನಡೆಸಿದ್ದಾರೆ. ಛತ್ತೀಸ್​​​​ಗಢ್​​ ವಿರುದ್ಧ 197 ರನ್ ಸಿಡಿಸಿದ್ದು, ಐಪಿಎಲ್​ನಲ್ಲಿ ರನ್​​ ಕೊಳ್ಳೆ ಹೊಡೆಯೋ ಭರವಸೆ ಮೂಡಿಸಿದ್ದಾರೆ.

ಚುಟುಕು ದಂಗಲ್​​ನಲ್ಲಿ ರೀಸಿ ಟಾಪ್ಲಿ ಕಮಾಲ್​​​

ಬರೀ ಬ್ಯಾಟ್ಸ್​​ಮನ್​ಗಳು ಅಷ್ಟೇ ಅಲ್ಲ, ಆರ್​ಸಿಬಿ ಬೌಲರ್ಸ್​ ಕೂಡ ಬಾಲ್​ ಹಿಡಿದು ಸಖತ್ ಮೋಡಿ ಮಾಡ್ತಿದ್ದಾರೆ. ಆ ಪೈಕಿ ರೀಸಿ ಟಾಪ್ಲಿ ಟಾಪ್​​​​ ಕ್ಲಾಸ್​​​ ಆಟವಾಡ್ತಿದ್ದಾರೆ. ಸೌತ್ ಆಫ್ರಿಕಾ ಟ್ವೆಂಟಿ ಲೀಗ್​ನಲ್ಲಿ ಟಾಪ್ಲಿ ಆಡಿದ 3 ಪಂದ್ಯಗಳಲ್ಲೆ 7 ವಿಕೆಟ್ ಭೇಟೆಯಾಡಿದ್ದಾರೆ. 2 ಬಾರಿ ತಲಾ ಮೂರು 3 ವಿಕೆಟ್ ಪಡೆದಿದ್ದಾರೆ.

ಲಾಕಿ ಫರ್ಗ್ಯೂಸನ್​​​​ ​​ಆರ್ಭಟಕ್ಕೆ ಬ್ರೇಕ್​​ ಹಾಕೋರೆ ಇಲ್ಲ.!

ಶರವೇಗಿ ಲಾಕಿ ಫರ್ಗ್ಯೂಸನ್​​​ ದಾಳಿಗಿಳಿದ್ರೆ ಸಾಕು ಬ್ಯಾಟ್ಸ್​​​ಮನ್​​ ಗಾಬರಿ ಬೀಳ್ತಾರೆ. ಇಂತಹ ಟೆರರ್ ಬೌಲರ್​ ಪಾಕಿಸ್ತಾನ ವಿರುದ್ಧ ಬೆಂಕಿ ಉಗುಳಿದ್ದಾರೆ. ಎರಡು ಪಂದ್ಯದಿಂದ 3 ವಿಕೆಟ್ ಕಬಳಿಸಿ ಶೈನ್ ಆಗಿದ್ದಾರೆ. ಅಲ್ಲದೇ ಸೂಪರ್​ ಸ್ಮ್ಯಾಶ್​​ ಲೀಗ್​ನಲ್ಲಿ ಸೂಪರ್​​​ ಫರ್ಮಾಮೆನ್ಸ್​ ನೀಡಿದ್ರು.

ಸದ್ಯ ಇವರ ಸಾಲಿಡ್ ಫಾರ್ಮ್​ ನಿಂದ ಆರ್​ಸಿಬಿ ಮ್ಯಾನೇಜ್​​ಮೆಂಟ್​​ ಫುಲ್ ಖುಷ್ ಆಗಿರೋದಂತೂ ಸುಳ್ಳಲ್ಲ. ಇದೇ ಆರ್ಭಟವನ್ನ ಐಪಿಎಲ್​ ಅಖಾಡದಲ್ಲಿ ತೋರಿ, ಸುದೀರ್ಘ ವರ್ಷಗಳ ಕಪ್​ ವನವಾಸಕ್ಕೆ ಮುಕ್ತಿ ಹಾಡುವಂತಾಗಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಈ ಬಾರಿ ಕಪ್ ಗೆಲ್ಲೋದು ಪಕ್ಕಾ.. ವಿಲ್​​ ಜಾಕ್ಸ್ ಸೇರಿ ಇತರೆ ಲೀಗ್​​ನಲ್ಲಿ ಬೆಂಗಳೂರು ಪ್ಲೇಯರ್ಸ್​ ಹೇಗೆ ಆಡ್ತಿದ್ದಾರೆ?

https://newsfirstlive.com/wp-content/uploads/2024/01/RCB_PLAUER_WILL_JOCKS.jpg

Load More