newsfirstkannada.com

ಚೆನ್ನೈಯನ್ನು ಮನೆಗೆ ಕಳುಹಿಸಿದ ಬೆಂಗಳೂರು.. RCBಯ ಮುಂದಿನ ಪಂದ್ಯ ಯಾರ ಜೊತೆ?

Share :

Published May 19, 2024 at 7:29am

    ಮತ್ತೊಂದು ಹೈವೋಲ್ಟೇಜ್ ಪಂದ್ಯವನ್ನು ಆಡಲಿದೆ ಬೆಂಗಳೂರು ತಂಡ

    ಮುಂದಿನ ಮ್ಯಾಚ್ ಅನ್ನು ಯಾರ ವಿರುದ್ಧ ಆರ್​ಸಿಬಿ ತಂಡ ಆಡಲಿದೆ..?

    ಈಗಾಗಲೇ ಚೆನ್ನೈನ ಬಗ್ಗು ಬಡಿದು ಪ್ಲೇ ಆಫ್​ಗೆ ಎಂಟ್ರಿಕೊಟ್ಟ ಆರ್​ಸಿಬಿ

ನಿನ್ನೆ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ 27 ರನ್​ಗಳಿಂದ ರಾಯಲ್​ ಚಾಲೆಂಜರ್ಸ್​ ತಂಡ ಗೆದ್ದು ಬೀಗಿದೆ. ಈ ಮೂಲಕ ಪ್ಲೇ ಆಫ್​ಗೆ ರಾಯಲ್​ ಆಗಿ 4ನೇ ತಂಡವಾಗಿ ಎಂಟ್ರಿ ಕೊಟ್ಟಿದೆ. ಸಿಎಸ್​ಕೆ ಜೊತೆ ಬೆಂಗಳೂರು ತಂಡ 18 ರನ್​ಗಳು ಅಂತರದಿಂದ ಗೆಲ್ಲಬೇಕಾಗಿತ್ತು. ಆದ್ರೆ ಅದಕ್ಕಿಂತ ಹೆಚ್ಚಿನ ರನ್​ಗಳಿಂದಲೇ ಮ್ಯಾಚ್ ವಿನ್​ ಆಗಿದೆ. ಇನ್ನು ಮುಂದಿನ ಪಂದ್ಯ ಯಾರ ಜೊತೆ ಎನ್ನುವುದು ಇಂದು ರಾತ್ರಿ ವೇಳೆಗೆ ಗೊತ್ತಾಗಲಿದೆ.

ಐಪಿಎಲ್​ನ ಪಾಯಿಂಟ್​ ಪಟ್ಟಿಯಲ್ಲಿ ಈಗಾಗಲೇ ಕೋಲ್ಕತ್ತಾ ನೈಟ್​ ರೈಡರ್ಸ್​ ಟಾಪ್​ ಅಲ್ಲಿ ಸ್ಥಾನ ಪಡೆದುಕೊಂಡಿದೆ. 2ನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್​ ಇದೆ. ಸನ್​ ರೈಸರ್ಸ್​ ಹೈದ್ರಾಬಾದ್​ 3ನೇ ಸ್ಥಾನ ಪಡೆದುಕೊಂಡಿದ್ದು ಚೆನ್ನೈ ವಿರುದ್ಧ ಗೆಲ್ಲುವ ಮೂಲಕ ಆರ್​ಸಿಬಿ 4ನೇ ತಂಡವಾಗಿ ಪ್ಲೇ ಆಫ್​​ನಲ್ಲಿ ಸ್ಥಾನ ಪಡೆದುಕೊಂಡಿದೆ. ಆದ್ರೆ ಇಂದು 3:30ಕ್ಕೆ ಪಂಜಾಬ್​ ಜೊತೆ ಹೈದ್ರಾಬಾದ್​ ಟೀಮ್ ಸೆಣಸಾಟ ನಡೆಸಲಿದೆ. ಜೊತೆಗೆ 7:30ಕ್ಕೆ ರಾಜಸ್ಥಾನ ರಾಯಲ್ಸ್​ ವಿರುದ್ಧ ಕೆಕೆಆರ್​ ಪೈಪೋಟಿಗೆ ಬೀಳಲಿದೆ. ಈ ಪಂದ್ಯಗಳ ಫಲಿತಾಂಶ ಬಂದ ಮೇಲೆ ಆರ್​ಸಿಬಿಯು ಮುಂದಿನ ಪಂದ್ಯದಲ್ಲಿ​ ಯಾರ ಜೊತೆ ಅಖಾಡಕ್ಕೆ ಇಳಿಯಲಿದೆ ಎಂದು ಗೊತ್ತಾಗಲಿದೆ.

ಇದನ್ನೂ ಓದಿ: RCB ಮಾಜಿ ಪ್ಲೇಯರ್​ ಜೊತೆ ಪಂದ್ಯ ವೀಕ್ಷಿಸಿದ ಡಿವೈನ್ ಸ್ಟಾರ್​.. ಕ್ರಿಸ್​​ಗೇಲ್​ ಜೊತೆ ಕಾಣಿಸಿದ ರಿಷಬ್ ಶೆಟ್ಟಿ

ಆರ್​ಸಿಬಿ ಯಾರ ಜೊತೆ ಕಣಕ್ಕೆ ಇಳಿಯಲಿದೆ ಎನ್ನುವುದು ಗೊತ್ತಾದ ಬಳಿಕ ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ 7:30ಕ್ಕೆ ನಡೆಯಲಿದೆ. ಇದೇ ಸ್ಟೇಡಿಯಂನಲ್ಲಿ ಕೆಕೆಆರ್​ ಕೂಡ ಒಂದು ಪಂದ್ಯ ಆಡಲಿದೆ. ಆದ್ರೆ ಮುಂದಿನ ಪಂದ್ಯಗಳನ್ನು ಯಾವ ಟೀಮ್​, ಯಾರ ಜೊತೆ ಸೆಣಸಾಟ ನಡೆಯಲಿದೆ ಎನ್ನುವುದು ಇವತ್ತು ಸಂಜೆ ವೇಳೆಗೆ ಬಹುತೇಕ ಗೊತ್ತಾಗಲಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಚೆನ್ನೈಯನ್ನು ಮನೆಗೆ ಕಳುಹಿಸಿದ ಬೆಂಗಳೂರು.. RCBಯ ಮುಂದಿನ ಪಂದ್ಯ ಯಾರ ಜೊತೆ?

https://newsfirstlive.com/wp-content/uploads/2024/05/RCB_TEAM-1.jpg

Load More