ಆರ್​ಸಿಬಿಗೆ ಒಂದೇ ಒಂದು ವೀಕ್ನೆಸ್.. ವಿದೇಶಿ ಆಟಗಾರರು ವಿಲನ್ ಆಗಿಬಿಡ್ತಾರಾ..?

author-image
Ganesh
Updated On
ಆರ್​ಸಿಬಿಗೆ ಒಂದೇ ಒಂದು ವೀಕ್ನೆಸ್.. ವಿದೇಶಿ ಆಟಗಾರರು ವಿಲನ್ ಆಗಿಬಿಡ್ತಾರಾ..?
Advertisment
  • ಬಲಿಷ್ಠ ಆರ್​ಸಿಬಿಗೆ ಕಾಡಲಿದೆ ಆ ಒಂದು ವೀಕ್ನೆಸ್..!
  • ವಿದೇಶಿ ಆಟಗಾರರಿಗೆ ತವರಿನಾಚೆ ಬಿಗ್​​ ಚಾಲೆಂಜ್
  • ಮ್ಯಾಚ್ ವಿನ್ನರ್ಸ್​ ಸ್ಪಿನ್​ ಎದುರು ಆಗಿದ್ದಾರೆ ಠುಸ್

ಈ ಸಲ ಕಪ್​ ನಮ್ದೇ.. ಈ ಸಲ ಕಪ್ ನಮ್ದೇ ಎಂಬ ಅಭಿಯಾನ ಮತ್ತೆ ಶುರುವಾಗಿದೆ. ಆರ್​​ಸಿಬಿ ತಂಡ ನೋಡಿ ಕಪ್ ಗೆದ್ದೇ ಗೆಲ್ತೇವೆ ಅನ್ನೋ ಭರವಸೆಯೂ ಅಭಿಮಾನಿಗಳಲ್ಲಿ ಮೂಡಿದೆ. ಈ ವಿದೇಶಿ ಆಟಗಾರರ ಆ ಒಂದು ವೀಕ್ನೆಸ್ ಮತ್ತೆ ಆರ್​​ಸಿಬಿಗೆ ಮುಳ್ಳಾಗುತ್ತಾ ಎಂಬ ಅನುಮಾನ ಹುಟ್ಟಿದೆ.

ಸೀಸನ್-18ರ ಐಪಿಎಲ್ ಟ್ರೋಫಿಗೆ ಆರ್​ಸಿಬಿ ಬಲಿಷ್ಠ ತಂಡವನ್ನೇ ಕಟ್ಟಿದೆ. ಬಲಿಷ್ಠ ಟಾಪ್ ಆರ್ಡರ್​.. ಪವರ್ ಪ್ಯಾಕ್ಡ್​ ಮಿಡಲ್ ಆರ್ಡರ್​.. ಕ್ಷಣಾರ್ಧದಲ್ಲಿ ಪಂದ್ಯದ ಗತಿ ಬದಲಿಸುವ ಗೇಮ್ ಚೇಂಜರ್ಸ್​.. ಬುಲೆಟ್ ವೇಗದಲ್ಲಿ ಎದುರಾಳಿ ವಿಕೆಟ್​​​​​​​​​​​​​​​​​​​​​​​​​​​​​​​​​​​​​ನ ಚಿಂದಿ ಉಡಾಯಿಸುವ ಬಿಗ್ ಮ್ಯಾಚ್ ವಿನ್ನರ್ಸ್ ಆರ್​ಸಿಬಿ ಬತ್ತಳಿಕೆಯಲ್ಲಿದ್ದಾರೆ. ಇಷ್ಟು ಬಲಿಷ್ಟ ಕಾಣ್ತಿರೋ ಆರ್​ಸಿಬಿಗೆ ಒಂದು ವಿಕ್ನೇಸ್ ಕೂಡ ಇದೆ.

ಚಿನ್ನಸ್ವಾಮಿ ಸ್ಟೇಡಿಯಂ ಟಾರ್ಗೆಟ್​ ಮಾಡಿ ಕಟ್ಟಿದ್ರಾ ಟೀಮ್?​

ಆರ್​ಸಿಬಿ ದಿ ಬೆಸ್ಟ್ ಟಿ20 ಟೀಮ್ ಅನ್ನೋದ್ರಲ್ಲಿ ನೋ ಡೌಟ್.. ಪೇಪರ್ ಮೇಲೆ ಆರ್​ಸಿಬಿ ತಂಡದಲ್ಲಿರುವ ಆಟಗಾರರ ಪಡೆಯನ್ನು ನೋಡಿದ್ರೆ, ಇದನ್ನ ಯಾರಾದ್ರೂ ಹೇಳ್ತಾರೆ. ಇಂಗ್ಲೆಂಡ್​​ನ ಡಿಸ್ಟ್ರಕ್ಟೀವ್ ಓಪನರ್ ಫಿಲ್ ಸಾಲ್ಟ್​, ಲಿಯಾಮ್ ಲಿವಿಂಗ್ ಸ್ಟೋನ್​, ಆಸ್ಟ್ರೇಲಿಯಾದ ಪವರ್ ಹಿಟ್ಟರ್ ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್​ರಂಥ ಗೇಮ್ ಚೇಂಜರ್ಸ್​​​ ಇದ್ದಾರೆ. ಇದೇ ಗೇಮ್ ಚೇಂಜರ್ಸ್ ವಿಲನ್ ಆಗೋ ಚಾನ್ಸ್ ಇದೆ.

ಇದನ್ನೂ ಓದಿ: ಭೂಮಿಗೆ ವಾಪಸ್ ಬಂದ ಬಳಿಕ ಸುನೀತಾ ವಿಲಿಯಮ್ಸ್ ಭವಿಷ್ಯದಲ್ಲಿ ಏನು ಮಾಡಲಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ

publive-image

ಸ್ಪಿನ್ ಎದುರು ಆಡ್ತಾರಾ ಓವರ್​ಸೀಸ್ ಪ್ಲೇಯರ್ಸ್?

ಚಿನ್ನಸ್ವಾಮಿಯ ಬ್ಯಾಟಿಂಗ್ ಗ್ರೌಂಡ್​ನಲ್ಲಿ ಯಾವ್ದೇ ಪ್ಲೇಯರ್ ಆದ್ರೂ ರನ್ ಗಳಿಸ್ತಾರೆ. ಸಣ್ಣ ಗ್ರೌಂಡ್​ನಲ್ಲಿ ಸಿಕ್ಸರ್​ಗಳ ಮಳೆಯನ್ನು ವಿದೇಶಿ ಆಟಗಾರರು ಸುರಿಸ್ತಾರೆ. ಈ ವಿದೇಶಿ ಆಟಗಾರರಿಗೆ ಬಿಗ್ ಚಾಲೆಂಜ್ ಎದುರಾಗುವುದೇ ಚಿನ್ನಸ್ವಾಮಿ ಹೊರಗಿನ ಮ್ಯಾಚ್​​​​​​​​​​​​ಗಳಲ್ಲಿ. ಚಿನ್ನಸ್ವಾಮಿ ಸ್ಟೇಡಿಯಂ ಬಿಟ್ಟು ಉಳಿದ ಸ್ಟೇಡಿಯಂ​ಗಳು ಬಹುತೇಕ ಸ್ಪಿನ್ ಫ್ರೆಂಡ್ಲಿ. ಸ್ಪಿನ್​ ಎದುರು ಆರ್​​ಸಿಬಿಯ ಮ್ಯಾಚ್ ವಿನ್ನರ್ಸ್​ ಅನಿಸಿಕೊಂಡಿರೋ ವಿದೇಶಿ ಆಟಗಾರರು ಪರದಾಡಿದ್ದಾರೆ. ಈ ಸ್ಪಿನ್​ ವೀಕ್​ನೆಸ್​​ ದೊಡ್ಡ ತಲೆನೋವಾಗಿದೆ.

ಸ್ಪಿನ್ ಎದುರು RCB ವಿದೇಶಿ ಆಟಗಾರರು

ಟಿ20 ಕ್ರಿಕೆಟ್​ನಲ್ಲಿ 43 ಇನ್ನಿಂಗ್ಸ್​ಗಳಿಂದ ಸ್ಪಿನ್ ಎದುರು 574 ರನ್ ಸಿಡಿಸಿರುವ ಸಾಲ್ಟ್​, 19 ಬಾರಿ ಔಟ್ ಆಗಿದ್ದಾರೆ. 122.64ರ ಸ್ಟ್ರೈಕ್​​ರೇಟ್ ಹೊಂದಿದ್ದಾರೆ. ಪವರ್ ಹಿಟ್ಟರ್ ಎನಿಸಿಕೊಂಡಿರುವ ಲಿಯಾಮ್ ಲಿವಿಂಗ್​ಸ್ಟೋನ್, 67 ಇನ್ನಿಂಗ್ಸ್​ಗಳಿಂದ ಸ್ಪಿನ್ ಎದುರು 650 ರನ್ ಗಳಿಸಿದ್ದಾರೆ. ಈ ಪೈಕಿ 21 ಬಾರಿ ಔಟಾಗಿರುವ ಲಿವಿಂಗ್​ಸ್ಟೋನ್​, 100ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ವಿಂಡೀಸ್ ದೈತ್ಯ ರೊಮಾರಿಯೋ ಶೆಫರ್ಡ್​, 39 ಇನ್ನಿಂಗ್ಸ್​ಗಳಿಂದ ಸ್ಪಿನ್ನರ್​​ಗಳ ಎದುರು 304 ರನ್ ಗಳಿಸಿದ್ದಾರೆ. 18 ಬಾರಿ ಔಟಾಗಿರುವ ಶೆಫಾರ್ಡ್​, ಬ್ಯಾಟ್ ಬೀಸಿದ್ದು 104.46ರ ಸ್ಟ್ರೈಕ್​ರೇಟ್​ನಲ್ಲಿ.

ಇದನ್ನೂ ಓದಿ: ಇನ್ಮುಂದೆ ನೀರಿಲ್ಲದೆ ಕಾರ್​ ತೊಳೆಯಬಹುದು; ಬೆಂಗಳೂರಿಗರು ಓದಲೇಬೇಕಾದ ಸ್ಟೋರಿ ಇದು

publive-image

ಈ ತ್ರಿಮೂರ್ತಿ ಬ್ಯಾಟರ್​ಗಳಿಗೆ ಹೋಲಿಕೆ ಮಾಡಿದ್ರೆ ಆಸ್ಟ್ರೇಲಿಯಾದ ಪವರ್ ಹಿಟ್ಟರ್ ಟಿಮ್ ಡೇವಿಡ್ ಮಾತ್ರವೇ ಭರವಸೆ ಮೂಡಿಸಿದ್ದಾರೆ. ಸ್ಪಿನ್ನರ್​ಗಳ ಎದುರು ಟಿಮ್​ ಡೇವಿಡ್​ 142.90ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ.

ಸ್ಪಿನ್ ಎದುರು ಟಿಮ್ ಡೇವಿಡ್

42 ಇನ್ನಿಂಗ್ಸ್​ಗಳಿಂದ ಸ್ಪಿನ್ನರ್​ಗಳ ಎದುರು 473 ರನ್​ ಗಳಿಸಿರುವ ಟಿಮ್ ಡೇವಿಡ್, 473 ರನ್ ಸಿಡಿಸಿದ್ದಾರೆ. 13 ಬಾರಿ ಸ್ಪಿನ್ನರ್ಸ್​ಗೆ ವಿಕೆಟ್ ಒಪ್ಪಿಸಿರುವ ಟಿಮ್ ಡೇವಿಡ್, 142.90ರ ಬ್ಯಾಟಿಂಗ್ ಸ್ಟ್ರೈಕ್​ರೇಟ್ ಹೊಂದಿದ್ದಾರೆ.

ಬೌಲಿಂಗ್​ನಲ್ಲೂ ಸ್ಪಿನ್ ವೀಕ್ನೆಸ್

ಆರ್​ಸಿಬಿಯ ಬೌಲಿಂಗ್ ಅಟ್ಯಾಕ್ ಸಖತ್ ಸ್ಟ್ರಾಂಗ್ ಆಗಿದೆ ನಿಜ. ಪೇಸ್ ಅಟ್ಯಾಕ್​ಗೆ ಹೋಲಿಕೆ ಮಾಡಿದ್ರೆ, ಆರ್​ಸಿಬಿಯಲ್ಲಿ ಸ್ಪೆಷಲಿಸ್ಟ್​ ಸ್ಪಿನ್ನರ್ಸ್​ ಇಲ್ಲ. ಸುಯಶ್ ಶರ್ಮಾ ತಂಡದಲ್ಲಿದ್ದರೂ ನಂಬಿಕೊಳ್ಳುವಂತಿಲ್ಲ. ಐಪಿಎಲ್​ನಲ್ಲಿ 13 ಪಂದ್ಯಗಳನ್ನಾಡಿರುವ ಸುಯಶ್​​​​​​​​​​​​​​​, ಕೇವಲ 10 ವಿಕೆಟ್ ಉರುಳಿಸಿದ್ದಾರೆ. ಡೆಬ್ಯು ಮ್ಯಾಚ್​ನಲ್ಲಿ 3 ವಿಕೆಟ್ ಉರುಳಿಸಿದ್ದು ಬಿಟ್ರೆ, ಹೇಳಿಕೊಳ್ಳುವಂತಾ ಆಟವಾಡಿಲ್ಲ. ಇನ್ನು ಸ್ವಪ್ನಿಲ್ ಸಿಂಗ್, ಆಲ್​ರೌಂಡರ್ ಕೃನಾಲ್ ಪಾಂಡ್ಯ ಇದ್ದರೂ ಪರಿಣಾಮಕಾರಿ ಏನಲ್ಲ.

ಇದನ್ನೂ ಓದಿ: 9 ತಿಂಗಳುಗಳ ಬಳಿಕ ಭೂಮಿಗೆ ಬಂದ ಸುನೀತಾ ವಿಲಿಯಮ್ಸ್​.. ನುಡಿದಂತೆ ನಡೆದಿದ್ದೇವೆ ಎಂದ ವೈಟ್​ಹೌಸ್​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment