ನ್ಯೂ RCB ಟೀಮ್ ಹೇಗಿದೆ.. ಬಲಿಷ್ಠ ತಂಡದ ಸ್ಟ್ರೆಂಥ್​​​- ವೀಕ್ನೆಸ್ ಏನೇನು ಇವೆ?

author-image
Bheemappa
Updated On
ಈ ಮೂವರು ಬೌಲರ್ಸ್ ತುಂಬಾನೇ ಡೇಂಜರ್​​.. ಬ್ಯಾಟರ್​​ಗಳು ಎಚ್ಚರದಿಂದ ಆಡಬೇಕು..!
Advertisment
  • ಆರ್​ಸಿಬಿ ನಾಯಕತ್ವ ರಜತ್ ಪಾಟಿದಾರ್ ಮೇಲೆ ಪ್ರಭಾವ ಬೀರುತ್ತಾ?
  • ಬೆಸ್ಟ್ ಕಾಂಬಿನೇಷನ್ ಪಿಕ್ ಮಾಡುವುದೇ ಬೆಂಗಳೂರಿಗೆ ಚಾಲೆಂಜ್
  • ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್ ಫೀವರ್ ಶುರುವಾಗಿದೆ. ಆರ್​ಸಿಬಿ ಕಪ್ ಗೆಲ್ಲುವ ಜಪವೂ ಸ್ಟಾರ್ಟ್ ಆಯಿತು. ತೆರೆ ಹಿಂದಿನ ಸ್ಟ್ರಾಟರ್ಜಿ, ಗೆಲುವು ಸೋಲಿನ ಲೆಕ್ಕಾಚಾರವೂ ಜೋರಾಗಿದೆ. ಹಾಗಾದ್ರೆ, ಕಪ್ ಗೆಲುವಿನ ಕನವರಿಕೆಯಲ್ಲಿರುವ ಆರ್​ಸಿಬಿ ತಂಡದ ಬಲವೇನು?. ಕಪ್ ಕನಸು ಭಗ್ನಗೊಳಿಸಬಲ್ಲ ಆ ವಿಕ್ನೇಸ್ ಏನು?.

ಕ್ರಿಕೆಟ್ ಲೋಕದ ಮಹಾ ಜಾತ್ರೆ ಕೌಂಟ್​ಡೌನ್ ಶುರುವಾಗಿದೆ. ಸೀಸನ್​​​-18ರ ಐಪಿಎಲ್​ನ ರಾಯಲ್ ಆಗಿ ಆರಂಭಿಸಲು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಸಿದ್ಧತೆ ನಡೆಸ್ತಿದೆ. ಒಮ್ಮೆಯೂ ಟ್ರೋಫಿ ಗೆಲ್ಲದ ಆರ್​ಸಿಬಿ ಹೊಸ ನಾಯಕ ಅಡಿಯಲ್ಲಿ, ಮತ್ತೆ ಕಪ್ ಗೆಲ್ಲುವ ​ ಮಂತ್ರ ಜಪಿಸ್ತಿದೆ.

publive-image

ಅಷ್ಟೇ ಅಲ್ಲ, ಕಳೆದ 17 ಸೀಸನ್​ಗಳಿಗಿಂತ ಡಿಫರೆಂಟ್ ಆಗಿ ಕಾಣಿಸ್ತಿರುವ ಆರ್​ಸಿಬಿ, ಹೊಸ ನಾಯಕ ಅಡಿ ಹೊಸ ಚರಿತ್ರೆ ಸೃಷ್ಟಿಸುವ ಇರಾದೆ ಹೊಂದಿದೆ. ಈ ನಿಟ್ಟಿನಲ್ಲಿ ಕೆಲವರು ಡಿಬೇಟ್​ಗಳೂ ಜೋರಾಗಿ ನಡೀತಿದೆ. ಹಾಗಾದ್ರೆ, ಟೂರ್ನಿ ಶುರುವಿಗೂ ಮುನ್ನ ಆರ್​ಸಿಬಿ ತಂಡದ ಸ್ಟ್ರೆಂಥ್​​​ ಹಾಗೂ ವೀಕ್ನೆಸ್ ಏನು?

ಆರ್​​ಸಿಬಿ ಸ್ಟ್ರೆಂಥ್​ ಏನು..?

  • ಬಲಿಷ್ಠ ಬ್ಯಾಟಿಂಗ್ & ಡೇಂಜರಸ್ ಟಾಪ್ ಆರ್ಡರ್​
  • ಪವರ್​ ಪ್ಯಾಕ್ಡ್​​ ಮಿಡಲ್​ ಆರ್ಡರ್​ ಬಿಗ್ ಹಿಟ್ಟರ್ಸ್​
  • ಗೇಮ್ ಫಿನಿಶರ್ಸ್, ದೈತ್ಯ ಆಲ್​ರೌಂಡರ್​ಗಳ ಬಲ​
  • ಅನುಭವಿಗಳನ್ನ ಒಳಗೊಂಡ​ ಬೌಲಿಂಗ್ ಅಟ್ಯಾಕ್
  • ಪ್ರತಿಭಾವಂತ ಯುವ ಆಟಗಾರರ ಪಡೆ
  • ಸ್ಟ್ರಾಂಗ್ ಆ್ಯಂಡ್ ಬ್ಯಾಲೆನ್ಸಿಂಗ್ ಟೀಮ್

ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿಕ್ನೇಸ್ ಕೂಡ ಇದೆ. ಈ ವಿಕ್ನೇಸ್​ಗಳೇ ಆರ್​ಸಿಬಿಗೆ ಮುಳುವಾಗುವ ಸಾಧ್ಯತೆ ಇದೆ.

ಆರ್​​ಸಿಬಿ ವೀಕ್ನೆಸ್ ಏನು.?

ದೇಶಿ ಕ್ರಿಕೆಟ್​ನಲ್ಲಿ ಯಶಸ್ಸು ಕಂಡಿರುವ ರಜತ್ ಪಾಟಿದಾರ್, ಮೊದಲ ಬಾರಿಗೆ ಐಪಿಎಲ್ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದು ಬ್ಯಾಕ್ ಫೈರ್ ಆದರೂ ಅಚ್ಚರಿ ಇಲ್ಲ. ಪ್ರತಿ ತಂಡದ ಸಕ್ಸಸ್​ನಲ್ಲಿ ಕೋರ್ ಟೀಮ್ ಪ್ರಮುಖ ಪಾತ್ರ ವಹಿಸುತ್ತೆ. ಆದ್ರೆ, ಆರ್​ಸಿಬಿ ಕೋರ್ ಟೀಮ್ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇಂಡಿಯನ್ ಆಟಗಾರರ ಬದಲಿಗೆ ವಿದೇಶಿ ಆಟಗಾರರನ್ನೇ ಹೆಚ್ಚು ನೆಚ್ಚಿಕೊಂಡಿದೆ. ಇದಲ್ಲಕ್ಕಿಂತ ಮಿಗಿಲಾಗಿ ಸ್ವಪ್ನಿಲ್ ಸಿಂಗ್, ಸುಯಶ್ ಶರ್ಮಾ ಬಿಟ್ರೆ, ಕ್ವಾಲಿಟಿ ಸ್ಪಿನ್ನರ್​ಗಳು ತಂಡದಲ್ಲಿ ಇಲ್ಲ. ಚಿನ್ನಸ್ವಾಮಿ ಅಂಗಳವನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡೇ ಫಿಲ್ ಸಾಲ್ಟ್, ಟಿಮ್ ಡೇವಿಡ್, ಲಿಯಾಮ್ ಲಿವಿಂಗ್​ಸ್ಟೋನ್​ರಂಥ ಆಟಗಾರರಿಗೆ ಮಣೆ ಹಾಕಿರುವ ಆರ್​ಸಿಬಿಗೆ, ಚಿನ್ನಸ್ವಾಮಿಯ ಹೊರಗಿನ ಸ್ಪಿನ್ ಫ್ರೆಂಡ್ಲಿ ಪಿಚ್​ನಲ್ಲಿ ಬಿಗ್ ಚಾಲೆಂಜ್ ಎದುರಾಗಲಿದೆ. ಯಾಕಂದ್ರೆ, ತಂಡದಲ್ಲಿ ಸ್ಪಿನ್ ಫ್ರೆಂಡ್ಲಿ ಬ್ಯಾಟರ್​ಗಳು ಇಲ್ಲ.

ಇದನ್ನೂ ಓದಿ:ಹಿಂದಿ ಹೇರಿಕೆ ಸಮರ್ಥಿಸಿದ ಪವನ್ ಕಲ್ಯಾಣ್.. ತಮಿಳು ಸಿನಿಮಾ ತಾರೆಯರ ವಿರುದ್ಧ ಬೊಟ್ಟು ತೋರಿದ DCM

publive-image

ಆರ್​ಸಿಬಿಗೆ ಹೊಸ ನಾಯಕತ್ವವೇ ಥ್ರೆಟ್ ಆಗುತ್ತಾ..?

ಈ ಹಿಂದಿಗಿಂತಲೂ ಆರ್​ಸಿಬಿ ಬೆಸ್ಟ್ ಟೀಮ್​ನ ಹೊಂದಿದೆ. ಸ್ಟ್ರೆಂಥ್​ಗಳ ಜೊತೆಗೆ ವಿಕ್ನೇಸ್​ ಕೂಡ ತಂಡದಲ್ಲಿದೆ. ಆದ್ರೆ, ದೇಶಿ ಕ್ರಿಕೆಟ್​ನಲ್ಲಿ ಸಕ್ಸಸ್ ಕಂಡಿರುವ ರಜತ್ ಪಾಟಿದಾರ್​ಗೆ ನಾಯಕತ್ವದ ಜವಾಬ್ದಾರಿ ವಹಿಸಿದೆ. ಇದು ಪರೋಕ್ಷ ರಜತ್ ಪ್ರದರ್ಶನದ ಮೇಲೆಯೂ ಪರಿಣಾಮ ಬೀರಬಹುದು.

ಅಷ್ಟೇ ಅಲ್ಲ, ಸೂಪರ್ ಸ್ಟಾರ್ ಆಟಗಾರರನ್ನು ಡೀಲ್ ಮಾಡೋದ್ರಲ್ಲಿ ಯಡವಟ್ಟಾಗಬಹುದು. 22 ಆಟಗಾರರ ಪಡೆಯಲ್ಲಿ ಕಂಡೀಷನ್ಸ್​ಗೆ ತಕ್ಕ ಬೆಸ್ಟ್​ ತಂಡ ಸೆಲೆಕ್ಟ್​ ಮಾಡುವುದೇ ಟೀಮ್ ಮ್ಯಾನೇಜ್​ಮೆಂಟ್​ ಮುಂದಿರೋ ಬಿಗ್ಗೆಸ್ಟ್ ಚಾಲೆಂಜ್. ಮೇಲ್ನೋಟಕ್ಕೆ ಆರ್​ಸಿಬಿ ಸಖತ್ ಸ್ಟ್ರಾಂಗ್ ಆಗಿ ಕಾಣ್ತಿದೆ ನಿಜ. ಆದ್ರೆ. ಆನ್​ಫೀಲ್ಡ್​ನಲ್ಲಿ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ್ರೆ. ಕಪ್ ಗೆಲ್ಲೋದ್ರಲ್ಲಿ ಡೌಟೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment