/newsfirstlive-kannada/media/post_attachments/wp-content/uploads/2025/06/RCB_DK_SHIVAKUMAR.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ನಡುವೆ ಐಪಿಎಲ್ನ ಫೈನಲ್ ಪಂದ್ಯ ಇಂದು ನಡೆಯಲಿದೆ. ಫೈನಲ್ ಪಂದ್ಯವಾಗಿದ್ದರಿಂದ ಅದರಲ್ಲಿ ಆರ್ಸಿಬಿ ಫೈನಲ್ ತಲುಪಿದ್ದರಿಂದ ಟ್ರೋಫಿ ಗೆದ್ದು ಬರುತ್ತೆ ಎನ್ನುವ ಭರವಸೆ ಎಲ್ಲರಲ್ಲೂ ಇದೆ. ಆರ್ಸಿಬಿ ಹುಡುಗರೇ ಟ್ರೋಫಿ ಗೆದ್ದುಕೊಂಡು ತವರಿಗೆ ಬನ್ನಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆರ್ಸಿಬಿ ತಂಡದ ಜೆರ್ಸಿ ಧರಿಸಿ ಮಾತನಾಡಿದ್ದು, ಇಂತಹ ಅದ್ಭುತ ದಿನಕ್ಕಾಗಿ ಕಳೆದ 18 ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದೇವೆ. ಟ್ರೋಫಿಗಾಗಿ ಸಾಕಷ್ಟು ಶ್ರಮ ಪಟ್ಟು ಆರ್ಸಿಬಿ ಕೊನೆಗೆ ಐಪಿಎಲ್ನಲ್ಲಿ ಫೈನಲ್ ತಲುಪಿದೆ. ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಖಾಡಕ್ಕೆ ಇಳಿಯುತ್ತಿದೆ. ಇಡೀ ರಾಜ್ಯವೆಲ್ಲಾ ಟ್ರೋಫಿ ಗೆದ್ದು ಬರಲಿ ಎಂದು ಆರ್ಸಿಬಿ ತಂಡದ ಹಿಂದೆ ನಿಂತಿದೆ. ಆ ಅದ್ಭುತ ಕ್ಷಣವನ್ನು ಸಾಧಿಸಿ ತೋರಿಸಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ:ಏಕದಿನ ವಿಶ್ವಕಪ್ ಟೂರ್ನಿ ನಡೆಯುವ ದಿನಾಂಕ, ಸ್ಥಳ ಘೋಷಣೆ.. ಬೆಂಗಳೂರಿಂದಲೇ ಆರಂಭ
ಆರ್ಸಿಬಿ ಕೇವಲ ಜೆರ್ಸಿ ಅಲ್ಲ, ಅದರ ಮೇಲೆ ಮಿಲಿಯನ್, ಮಿಲಿಯನ್ ಡ್ರೀಮ್ಗಳು ಇವೆ. ನಾವು ನಿಮ್ಮೊಂದಿಗೆ ಇದ್ದೇವೆ. ಕರ್ನಾಟಕ ಹಾಗೂ ಇಲ್ಲಿನ ಸರ್ಕಾರವೆಲ್ಲಾ ನಿಮ್ಮೊಂದಿಗೆ ನಿಂತಿದೆ. ಆರ್ಸಿಬಿ ಹುಡುಗರೇ ತವರಿಗೆ ಕಪ್ ಗೆದ್ದುಕೊಂಡು ಬನ್ನಿ. ಟ್ರೋಫಿಗಾಗಿ ಕರ್ನಾಟಕದ ಕೋಟಿ ಕೋಟಿ ಜನರು ಹಾಗೂ ನಾನು ಕಾಯುತ್ತಿದ್ದೇನೆ. ಎಲ್ಲರಿಗೂ ಆಲ್ ದೀ ಬೆಸ್ಟ್ ಎಂದು ಡಿ.ಕೆ ಶಿವಕುಮಾರ್ ಅವರು ಶುಭ ಹಾರೈಸಿದ್ದಾರೆ.
ಸುದೀರ್ಘ 18 ವರ್ಷಗಳ ಕಪ್ ಕೊರಗು ನೀಗೋಕೆ ಒಂದೇ ಒಂದು ಹೆಜ್ಜೆ ಬಾಕಿ ಇದೆ. ಅಹ್ಮದಾಬಾದ್ನ ನಮೋ ಅಂಗಳದಲ್ಲಿ ನಡೆಯುವ ಫೈನಲ್ ಫೈಟ್ನಲ್ಲಿ ಆರ್ಸಿಬಿ ದಿಟ್ಟ ಇಜ್ಜೆ ಇಟ್ಟರೇ ಅಸಂಖ್ಯ ಅಭಿಮಾನಿಗಳ ಕನಸು ಇಂದು ನರೆವೇರಲಿದೆ. ಈ ಹಿಂದಿನ 18 ಸೀಸನ್ಗಳಲ್ಲಿದ್ದ ಆರ್ಸಿಬಿಗೂ ಈ ಸೀಸನ್ನ ಆರ್ಸಿಬಿಗೂ ಹೆಚ್ಚು ಡಿಫರೆನ್ಸ್ ಇದೆ. ಏಕೆಂದರೆ ಈ ಆಟಗಾರರು ಫೈನಲ್ ಕಪ್ ಗೆದ್ದುಕೊಂಡು ಬರೋದು ಪಕ್ಕಾ ಎಂದು ಹೇಳಲಾಗುತ್ತಿದೆ.
Ee Sala Cup Namde! ♥️🏆
18 years of grit.
Every prayer, every cheer, every heartbreak - it all leads to today.
This is more than a match.
Our moment. Our Cup.
Wishing @RCBTweets the very best - Karnataka is with you!#PlayBold#ನಮ್ಮRCB#IPL2025pic.twitter.com/cTmRhjgjts— DK Shivakumar (@DKShivakumar)
Ee Sala Cup Namde! ♥️🏆
18 years of grit.
Every prayer, every cheer, every heartbreak - it all leads to today.
This is more than a match.
Our moment. Our Cup.
Wishing @RCBTweets the very best - Karnataka is with you!#PlayBold#ನಮ್ಮRCB#IPL2025pic.twitter.com/cTmRhjgjts— DK Shivakumar (@DKShivakumar) June 3, 2025
">June 3, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ