/newsfirstlive-kannada/media/post_attachments/wp-content/uploads/2023/12/Rohit_Kohli-IPL-RCB.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಮುನ್ನ ಎಷ್ಟು ಮಂದಿ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬೇಕು ಎಂದು ಬಿಸಿಸಿಐ ಈಗಾಗಲೇ ಅಧಿಕೃತ ಪ್ರಕಟಣೆ ಹೊರಡಿಸಿದೆ. ಎಲ್ಲಾ ಐಪಿಎಲ್ ತಂಡಗಳಿಗೂ 6 ಮಂದಿ ಆಟಗಾರರ ರೀಟೈನ್ಗೆ ಅವಕಾಶ ನೀಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ತಂಡಗಳು ರಿಲೀಸ್ ಮತ್ತು ರೀಟೈನ್ ಲಿಸ್ಟ್ ಬಿಡುಗಡೆ ಮಾಡಲಿದ್ದಾರೆ. ಮುಂಬೈ ತಂಡದಿಂದ ರೋಹಿತ್ ಶರ್ಮಾ ರಿಲೀಸ್ ಆಗೋದು ಪಕ್ಕಾ ಆಗಿದೆ. ಹೀಗಾಗಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಆರ್‌ಸಿಬಿಗೆ ಒಂದು ಸಲಹೆ ನೀಡಿದ್ದಾರೆ.
ಆರ್‌ಸಿಬಿಗೆ ಕೈಫ್ ಕೊಟ್ಟ ಸಲಹೆಯೇನು?
ರೋಹಿತ್ ಶರ್ಮಾ ಅವರನ್ನು ಖರೀದಿ ಮಾಡಲು ಹಲವರು ತುದಿಗಾಲಲ್ಲಿ ನಿಂತಿದ್ದಾರೆ. ಈ ಸಾಲಿನಲ್ಲಿ ಆರ್‌ಸಿಬಿ ಕೂಡ ಇದೆ. ರೋಹಿತ್ ಶರ್ಮಾ ಅವರನ್ನು ಆರ್‌ಸಿಬಿ ಖರೀದಿ ಮಾಡಲೇಬೇಕು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಹಿಂದೇಟು ಹಾಕಬಾರದು ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಸಲಹೆ ಕೊಟ್ಟರು.
ಇನ್ನು, ಕ್ಯಾಪ್ಟನ್ ರೋಹಿತ್ ಶರ್ಮಾ ಒಬ್ಬ ಶ್ರೇಷ್ಠ ಆಟಗಾರ. ಟಿ20 ವಿಶ್ವಕಪ್ ಗೆದ್ದ ನಾಯಕ. ಆರ್‌ಸಿಬಿ ರೋಹಿತ್ ಖರೀದಿಗೆ ಪ್ಲಾನ್ ಮಾಡಬೇಕು. ಅಲ್ಲದೆ ರೋಹಿತ್ ಅವರನ್ನು ಹೇಗಾದ್ರೂ ಮಾಡಿ ಆರ್‌ಸಿಬಿ ಒಪ್ಪಿಸಬೇಕು. ರೋಹಿತ್ ಆರ್‌ಸಿಬಿ ಕ್ಯಾಪ್ಟನ್ ಆದ್ರೆ, ರನ್ ಕಲೆ ಹಾಕದಿದ್ರೂ ಕಪ್ ಗೆಲ್ಲಿಸುತ್ತಾರೆ. ಬಲಿಷ್ಠ ಆರ್‌ಸಿಬಿ ತಂಡವನ್ನು ಕಟ್ಟುತ್ತಾರೆ ಎಂದರು.
ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ದ ಕೊಹ್ಲಿ
2022ರ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು. ಬಳಿಕ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಫಾಫ್ ಡುಪ್ಲೆಸಿಸ್ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಫಾಫ್‌ಗೆ 40 ವರ್ಷ. ಮುಂದಿನ ಮೂರು ಸೀಸನ್ ಇವರು ಆಡೋದು ಡೌಟ್. ಆರ್‌ಸಿಬಿಗೆ ಸದ್ಯ ಯಾವುದೇ ಖಾಯಂ ನಾಯಕರಿಲ್ಲ. ಹಾಗಾಗಿ ರೋಹಿತ್ ಬೆಸ್ಟ್ ಆಪ್ಷನ್ ಎಂಬುದು ಕೈಫ್ ಅಭಿಪ್ರಾಯ.
ಇದನ್ನೂ ಓದಿ:ಮೆಗಾ ಆಕ್ಷನ್ಗೆ ಮುನ್ನವೇ ಫ್ಯಾನ್ಸ್ಗೆ ಬಿಗ್ ಶಾಕ್; ಆರ್‌ಸಿಬಿ ತಂಡದಿಂದ ಯುವ ಬ್ಯಾಟರ್ ಔಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ