/newsfirstlive-kannada/media/post_attachments/wp-content/uploads/2024/07/Chahal_RCB.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​​ ಮೆಗಾ ಆಕ್ಷನ್​​​​ಗೆ ಹೆಚ್ಚೇನು ತಿಂಗಳು ಬಾಕಿ ಉಳಿದಿಲ್ಲ. ಈಗಾಗಲೇ ಗೆಲ್ಲೋ ಕುದುರೆಗಳಿಗೆ ಗಾಳ ಹಾಕಲು ಎಲ್ಲಾ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿವೆ. ಖುಷಿಯ ವಿಚಾರ ಏನಪ್ಪಾ ಅಂದ್ರೆ ಮುಂಬರೋ ಹರಾಜಿನಲ್ಲಿ ಕನ್ನಡಿಗರೇ ಹಾಟ್ ಪಿಕ್​​ ಆಗಲಿದ್ದಾರೆ. ಅದಕ್ಕೆ ಕಾರಣ ಮಹಾರಾಜ ಟಿ20 ಟೂರ್ನಿ.
ಮಹಾರಾಜ ಟ್ರೋಫಿ ಅಂತ್ಯ ಕಂಡಿದೆ. ಮೈಸೂರು ವಾರಿಯರ್ಸ್ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೇ ಟೂರ್ನಿಯಲ್ಲಿ ಕೆಲ ಆಟಗಾರರು ಮಾತ್ರ, ಆರ್​​ಸಿಬಿ​ ಮನ ಗೆದ್ದಿದ್ದಾರೆ. ಟೂರ್ನಿಯುದ್ದಕ್ಕೂ ಇಂಪ್ರೆಸ್ಸಿವ್ ಪರ್ಫಾಮೆನ್ಸ್​ ನೀಡಿರುವ ಇವರು, ವರ್ಷಾಂತ್ಯದಲ್ಲಿ ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ಬಾಚಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಇವರನ್ನು ಖರೀದಿ ಮಾಡಲು ಆರ್​​ಸಿಬಿ ಪ್ಲಾನ್​ ಮಾಡಿಕೊಂಡಿದೆ.
ಲವಿಶ್ ಕೌಶಲ್, ಎಲ್​.ಆರ್​.ಕುಮಾರ್​ಗೆ ಬಂಪರ್ ಫಿಕ್ಸ್
ಮಹಾರಾಜ ಲೀಗ್​ನಲ್ಲಿ ಕರಾರುವಾಕ್​ ಬೌಲಿಂಗ್​ನಿಂದ ಗಮನ ಸೆಳೆದ ಆಟಗಾರರ ಅಂದ್ರೆ, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಎಡಗೈ ವೇಗಿ ಲವಿಶ್ ಕೌಶಲ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡದ ಎಲ್​​.ಆರ್.ಕುಮಾರ್​. ಬೆಂಗಳೂರು ಬ್ಲಾಸ್ಟರ್ಸ್ ಪರ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ್ದ ಲವಿಶ್ ಕೌಶಲ್, 10 ಪಂದ್ಯಗಳಿಂದ 16 ವಿಕೆಟ್ ಪಡೆದ್ರೆ, 7.92ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ. ಹುಬ್ಳಿ ಟೈಗರ್ಸ್ ತಂಡದ ವೇಗಿ ಎಲ್.ಆರ್.ಕುಮಾರ್ 9 ಪಂದ್ಯಗಳಿಂದ 17 ವಿಕೆಟ್ ಉರುಳಿಸಿ, 9.15ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ.
ಆಲ್​ರೌಂಡರ್​ ಜೆ ಸುಚಿತ್​​, ಬ್ಯಾಟಿಂಗ್, ಬೌಲಿಂಗ್​​​​​​​​​, ಫೀಲ್ಡಿಂಗ್​ನಿಂದಲೂ ಗಮನ ಸೆಳೆದಿದ್ರೆ. ಸ್ವಿಂಗ್​​​, ಪೇಸ್ ಹಾಗೂ ವೇರಿಯೇಷನ್​ ಎಸೆತಗಳಿಂದ ವಿಧ್ವತ್ ಕಾವೇರಪ್ಪ ಕಮಾಲ್ ಮಾಡಿದ್ದಾರೆ. ಇವ್ರೇ ಅಲ್ಲ. ವಿಧ್ಯಾದರ್ ಪಾಟೀಲ್​ ಮಿಂಚಿನ ದಾಳಿಯನ್ನೇ ನಡೆಸಿದ್ದಾರೆ. ಈ ಯಂಗ್​ ಬೌಲರ್​​ಗಳ ಪರ್ಪಾಮೆನ್ಸ್​ ಐಪಿಎಲ್​​​ ಫ್ರಾಂಚೈಸಿಗಳ ಕಣ್ಣು ಕುಕ್ಕುವಂತೆ ಮಾಡಿದೆ. ಈ ಕಾರಣಕ್ಕೆ ಮೆಗಾ​ ಹರಾಜಿನಲ್ಲಿ ಕೋಟಿ ಶೂರರಾದರು ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us