/newsfirstlive-kannada/media/post_attachments/wp-content/uploads/2024/09/RCB_VIRAT-1.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ರೀಟೈನ್ ಲಿಸ್ಟ್ ರಿಲೀಸ್ ಮಾಡಿದೆ. ಆರ್‌ಸಿಬಿ ಟೀಮ್ ಮೊದಲು ರೀಟೈನ್ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ. 2ನೇ ಆಯ್ಕೆ ರಜತ್ ಪಾಟಿದಾರ್ ಮತ್ತು 3ನೇ ಆಯ್ಕೆಯಾಗಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ.
ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್ ಪಾಟಿದಾರ್ ಅವರಿಗೆ 11 ಕೋಟಿ ಮತ್ತು ಯಶ್ ದಯಾಳ್ ಅವರಿಗೆ 5 ಕೋಟಿ ನೀಡಿ ರೀಟೈನ್ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್‌ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ.
ಮೂವರು ಉಳಿಸಿಕೊಳ್ಳಲು ಆರ್ಸಿಬಿಗೆ ಅವಕಾಶ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಇದೆ. ಎಂದರೆ ಮೆಗಾ ಹರಾಜಿಗೆ ಮುನ್ನ ಆರ್‌ಸಿಬಿ ಮೂವರು ಆಟಗಾರರ ಮೇಲೆ ಆರ್ಟಿಎಂ ಕಾರ್ಡ್ ಬಳಕೆ ಮಾಡಬಹುದು. ಆರ್ಟಿಎಂ ಕಾರ್ಡ್ ಮೂಲಕ ಹರಾಜಿನ ಸಂದರ್ಭದಲ್ಲಿ ತಂಡಕ್ಕೆ ಸೇರಿಸಿಕೊಳ್ಳಬಹುದು.
ರೈಟ್ ಟು ಮ್ಯಾಚ್ ಕಾರ್ಡ್ ಆಪ್ಷನ್
ಗರಿಷ್ಠ ಆರು ಆಟಗಾರರ ರೀಟೈನ್ಗೆ ಅವಕಾಶ ಇತ್ತು. ಅಲ್ಲದೆ ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ ಮಾಡಬಹುದಾಗಿ ಸಹ ತಿಳಿಸಿತ್ತು. ಯಾವ ಟೀಮ್ ಎಷ್ಟು ಜನರನ್ನು ರೀಟೈನ್ ಮಾಡಿಕೊಂಡಿದೆ ಅನ್ನೋದರ ಮೇಲೆ ಆರ್ಟಿಎಂ ಕಾರ್ಡ್ ಸಂಖ್ಯೆ ಇರಲಿದೆ. ಆರ್‌ಸಿಬಿ ಕೇವಲ ಮೂವರು ಆಟಗಾರರಿಗೆ ಮಾತ್ರ ಮಣೆ ಹಾಕಿದ್ದು, ಇನ್ನೂ ಐಪಿಎಲ್ ಮೆಗಾ ಹರಾಜಿನಲ್ಲಿ 3 ರೈಟ್ ಟು ಮ್ಯಾಚ್ ಕಾರ್ಡ್ ಬಳಸುವ ಅವಕಾಶ ಹೊಂದಿದೆ.
ಈ ಮೂವರನ್ನು ಉಳಿಸಿಕೊಳ್ಳಲು ಮುಂದಾದ ಆರ್‌ಸಿಬಿ
ಆರ್‌ಸಿಬಿ ತಂಡ ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ವಿಲ್ ಜಾಕ್ಸ್ ಅವರನ್ನು ಬಿಡುಗಡೆ ಮಾಡಿದೆ. ಹರಾಜಿಗೂ ಮುನ್ನ ಈ ಮೂವರ ಮೇಲೆ ಆರ್‌ಸಿಬಿ ಆರ್ಟಿಎಂ ಬಳಸಲಿದೆ. ಆಗ ಸಿರಾಜ್, ಮ್ಯಾಕ್ಸ್ವೆಲ್, ವಿಲ್ ಜಾಕ್ಸ್ ಮೇಲಿನ ಹಕ್ಕು ಆರ್‌ಸಿಬಿ ಬಳಿಯೇ ಇರುತ್ತದೆ. ಯಾರಾದ್ರೂ ಇವರನ್ನು ಬಿಡ್ ಮಾಡಿದ್ರೆ ಅಷ್ಟು ದುಡ್ಡು ಕೊಟ್ಟು ಆರ್‌ಸಿಬಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು. ಹೀಗೆ ಸಿರಾಜ್, ಮ್ಯಾಕ್ಸ್ವೆಲ್, ವಿಲ್ ಜಾಕ್ಸ್ ಅವರನ್ನು ಉಳಿಸಿಕೊಳ್ಳಲಿದೆ.
ಇದನ್ನೂ ಓದಿ: ಮಹತ್ವದ ಪಂದ್ಯಕ್ಕೆ ಟೀಮ್ ಇಂಡಿಯಾಗೆ RCB ಸ್ಟಾರ್ ಎಂಟ್ರಿ; ತಂಡಕ್ಕೆ ಬಂತು ಆನೆಬಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ