/newsfirstlive-kannada/media/post_attachments/wp-content/uploads/2024/09/RCB_VIRAT-1.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಶುರುವಾಗಲು ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಈ ಮುನ್ನವೇ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಹಾಗಾಗಿ ಆರ್ಸಿಬಿ ಟೀಮ್ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಮುಂದಿನ ಐಪಿಎಲ್ ಸೀಸನ್ಗೂ ಮುನ್ನ ಆಯ್ದ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಆರ್ಸಿಬಿ ಪ್ಲಾನ್ ಮಾಡಿಕೊಂಡಿದೆ. ಅಷ್ಟೇ ಅಲ್ಲ ಉಳಿದ ಆಟಗಾರರನ್ನು ಮೆಗಾ ಹರಾಜಿಗೆ ಬಿಡುಗಡೆ ಮಾಡುವ ಕಠಿಣ ನಿರ್ಧಾರ ತೆಗೆದುಕೊಳ್ಳಲಿದೆ. 2024ರ ಸೀಸನ್ನಲ್ಲಿ ಕೆಲ ಉತ್ತಮ ಆಟಗಾರರನ್ನು ಹೊಂದಿದ್ದ ತಂಡಕ್ಕೆ ಹಲವರನ್ನು ಕೈಬಿಡುವುದು ಬಹು ಕಷ್ಟದ ಕೆಲಸವಾಗಿದೆ.
ಆರ್ಸಿಬಿ ಉಳಿಸಿಕೊಳ್ಳೋ ಮೊದಲ ಆಟಗಾರ ಕೊಹ್ಲಿ
2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಕೊಹ್ಲಿ ತಮ್ಮ ಚೊಚ್ಚಲ ಐಪಿಎಲ್ ಪಂದ್ಯ ಆಡಿದ್ರು. ಅಂದಿನಿಂದ ಇಲ್ಲಿಯವರೆಗೆ ಎಲ್ಲಾ ಸೀಸನ್ನಲ್ಲಿ ಒಂದೇ ತಂಡಕ್ಕೆ ಆಡಿದ ಏಕೈಕ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಹಾಗಾಗಿ ಬೆಂಗಳೂರು ತಂಡ ಉಳಿಸಿಕೊಳ್ಳುವ ಆಟಗಾರರಲ್ಲಿ ಕೊಹ್ಲಿ ಮೊದಲಿಗರು.
ವಿಲ್ ಜ್ಯಾಕ್ಸ್ ಆರ್ಸಿಬಿ ತಂಡದ 2ನೇ ಆಯ್ಕೆ
ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಪದಾರ್ಪಣೆ ಮಾಡಿದ ವಿಲ್ ಜ್ಯಾಕ್ಸ್ ಕೇವಲ 41 ಎಸೆತಗಳಲ್ಲಿ ಶತಕ ಗಳಿಸಿದರು. 25 ವರ್ಷ ವಯಸ್ಸಿನ ಜ್ಯಾಕ್ಸ್ ಭವಿಷ್ಯದಲ್ಲಿ ಫ್ರಾಂಚೈಸಿಗೆ ಪ್ರಮುಖ ಆಟಗಾರ. ಟಾಪ್ ಆರ್ಡರ್ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಬಲ್ಲ, ಬ್ಯಾಲಿಂಗ್ ಮಾಡೋ ಸಾಮರ್ಥ್ಯ ಇವರಿಗಿದೆ. ಇವರು ಆರ್ಸಿಬಿ ತಂಡದ 2ನೇ ಆಯ್ಕೆ.
ಬೆಂಗಳೂರು ತಂಡದ 3ನೇ ಆಯ್ಕೆ ರಜತ್ ಪಾಟಿದಾರ್
ಐಪಿಎಲ್ 2024ರಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದವರು ಪಾಟಿದಾರ್. ಇವರು ಸ್ಪೋಟಕ ಬ್ಯಾಟಿಂಗ್ನಿಂದ 395 ರನ್ ಗಳಿಸಿದ್ರು. ಬಲಗೈ ಬ್ಯಾಟರ್ ಆಗಿರೋ ರಜತ್ ಮಧ್ಯಮ ಕ್ರಮಾಂಕದ ಆಧಾರ ಸ್ತಂಭ. ಅಗ್ರೆಸ್ಸಿವ್ ಬ್ಯಾಟಿಂಗ್ನಿಂದಲೇ ಹೆಸರು ಮಾಡಿರೋ ಇವರು ಆರ್ಸಿಬಿ ರೀಟೈನ್ ಲಿಸ್ಟ್ನಲ್ಲಿದ್ದಾರೆ.
ಇದನ್ನೂ ಓದಿ:ಕೃಷಿ ಇಲಾಖೆಯಲ್ಲಿ 945 ಹುದ್ದೆಗಳಿಗೆ ಅರ್ಜಿ ಆಹ್ವಾನ; ತಿಂಗಳಿಗೆ ಬರೋಬ್ಬರಿ 83 ಸಾವಿರ ಸಂಬಳ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ