/newsfirstlive-kannada/media/post_attachments/wp-content/uploads/2025/04/RCB_BUS.jpg)
ಗುಜರಾತ್ ಟೈಟನ್ಸ್ ಎದುರು ಸೋತ ಆರ್ಸಿಬಿ, ಇದೀಗ ಮಹಾನಗರಿ ಮುಂಬೈಗೆ ಕಾಲಿಟ್ಟಿದೆ. 3 ಪಂದ್ಯಗಳನ್ನ ಮುಗಿಸಿದ ಆರ್ಸಿಬಿಗೆ ಇದೀಗ ಹೊಸ ಚಾಲೆಂಜ್ ಎದುರಾಗಿದೆ. ಆನ್ಫೀಲ್ಡ್ನಲ್ಲಿ ಆಡೋದು, ಎದುರಾಳಿಗಳನ್ನ ಮಟ್ಟ ಹಾಕೋದು ಒಂದೆಡೆಯಾದ್ರೆ, ಟ್ರಾವೆಲ್ ಮಾಡೋದೆ ಚಾಲೆಂಜರ್ಸ್ಗೆ ಚಾಲೆಂಜ್ ಆಗಿದೆ. ಈ ಚಾಲೆಂಜ್ನ ಟ್ರಬಲ್ ಶೂಟ್ ಮಾಡಲು ಆರ್ಸಿಬಿ ರೋಟೇಷನ್ ಪಾಲಿಸಿಯ ಮೊರೆ ಹೋಗಿದೆ.
ಗುಜರಾತ್ ಟೈಟನ್ಸ್ ಎದುರು ಹೀನಾಯ ಮುಖಭಂಗ ಅನುಭವಿಸಿರುವ ಆರ್ಸಿಬಿ, ಈಗ ಮುಂಬೈ ಇಂಡಿಯನ್ಸ್ ಬೇಟೆಗೆ ಸಜ್ಜಾಗಿದೆ. ತವರಿನಲ್ಲಿ ಸೋಲುಂಡ ಆರ್ಸಿಬಿ ಇದೀಗ ಮಹಾನಗರಿ ಮುಂಬೈನಲ್ಲಿ ಕಮ್ಬ್ಯಾಕ್ ಮಾಡುವ ಕನವರಿಕೆಯಲ್ಲಿದೆ. ಇದ್ರ ನಡುವೆ ಆರ್ಸಿಬಿಗೆ ಈ ಟ್ರಾವೆಲಿಂಗ್ ಹೆಡ್ಡೇಕ್ ಶುರುವಾಗಿದೆ. ಮೊದಲ 3 ಪಂದ್ಯ ಮುಗಿಸಿರೋ ಆರ್ಸಿಬಿ ಮುಂದೆ ಭಾರತ ದರ್ಶನ ಮಾಡಬೇಕಿದೆ.
ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ಉಳಿದೆಲ್ಲಾ ತಂಡಗಳಿಗಿಂತ ಹೆಚ್ಚು ಪ್ರಯಾಣ ಮಾಡಬೇಕಿದೆ. ಬೆಂಗಳೂರಿನಿಂದ ಶುರುವಾದ ಆರ್ಸಿಬಿ ಜರ್ನಿ ಕೊಲ್ಕತ್ತಾ, ಚೆನ್ನೈ, ಬೆಂಗಳೂರು ಮುಗಿಸಿ ಇದೀಗ ಮಂಬೈಗೆ ಬಂದು ನಿಂತಿದೆ. 4ನೇ ಪಂದ್ಯಕ್ಕೂ ಮುನ್ನವೇ ರೆಡ್ ಆರ್ಮಿ ಬರೋಬ್ಬರಿ 4,070 ಕಿಲೋ ಮೀಟರ್ ಪ್ರಯಾಣ ಮಾಡಿದೆ. ಟೂರ್ನಿಯ ಲೀಗ್ ಹಂತದ ಪಂದ್ಯಗಳನ್ನಾಡೋಕೆ ಬರೋಬ್ಬರಿ 16,927 ಸಾವಿರ ಕಿಲೋ ಮೀಟರ್ ಪ್ರಯಾಣ ಮಾಡಬೇಕಿದೆ.
ಮುಂಬೈ ನಂತರ ಶುರುವಾಗಲಿದೆ ಅಸಲಿ ಟ್ರಾವೆಲಿಂಗ್ ಆಟ..!
ಮುಂಬೈ ಎದುರಿನ ಪಂದ್ಯವನ್ನಾಡಲು ಈಗಾಗಲೇ ರೆಡ್ ಆರ್ಮಿ ಮುಂಬೈ ತಲುಪಿದೆ. ಈ ಮುಂಬೈ ಇಂಡಿಯನ್ಸ್ ಎದುರಿನ 4ನೇ ಪಂದ್ಯದ ಬಳಿಕವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಸಲಿ ಟ್ರಾವೆಲಿಂಗ್ ಶುರುವಾಗಲಿದೆ. 4ನೇ ಪಂದ್ಯದ ಬಳಿಕ ಆರ್ಸಿಬಿ ಪಂದ್ಯವನ್ನಾಡೋದಕ್ಕೂ ಹೆಚ್ಚು ಕಾಲ ಟ್ರಾವೆಲಿಂಗ್ನಲ್ಲೇ ಕಳೆಯಲಿದೆ.
RCBಗೆ ಟ್ರಾವೆಲಿಂಗ್ ಚಾಲೆಂಜ್
5ನೇ ಪಂದ್ಯದ ಬಳಿಕ ಮುಂಬೈ ಟು ಬೆಂಗಳೂರಿಗೆ 842 ಕಿಲೋ ಮೀಟರ್ ಪ್ರಯಾಣಿಸಲಿರುವ ಆರ್ಸಿಬಿ, 6ನೇ ಪಂದ್ಯವನ್ನಾಡಲು ಬೆಂಗಳೂರಿನಿಂದ ಜೈಪುರಕ್ಕೆ ತೆರಳಲಿದೆ. ಪಂದ್ಯದ ನಂತರ 7ನೇ ಪಂದ್ಯಕ್ಕೆ ಮತ್ತೆ ಜೈಪುರದಿಂದ ಬೆಂಗಳೂರಿಗೆ 1556 ಕಿಲೋ ಮೀಟರ್ ಪ್ರಯಾಣಿಸಲಿದೆ. 8ನೇ ಪಂದ್ಯವನ್ನಾಡಲು ಬೆಂಗಳೂರಿನಿಂದ ಚಂಡೀಗಢಕ್ಕೆ 1972 ಕಿಲೋ ಮೀಟರ್ ಟ್ರಾವೆಲ್ ಮಾಡುವ ರಜತ್ ಸೈನ್ಯ, ಮತ್ತೆ 9ನೇ ಪಂದ್ಯವನ್ನಾಡಲು ಚಂಡೀಗಢದಿಂದ ಉದ್ಯಾನನಗರಿಗೆ ಬರಲಿದೆ. ಆ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಗೆ 1,740 ಕಿಲೋಮೀಟರ್ ಪ್ರಯಾಣ ಬೆಳಸಲಿರುವ ಆರ್ಸಿಬಿ, 11ನೇ ಪಂದ್ಯಕ್ಕಾಗಿ ಮತ್ತೆ ಸಿಲಿಕಾನ್ ಸಿಟಿಗೆ ಆಗಮಿಸಲಿದೆ. ಈ 7 ಪಂದ್ಯಗಳಿಗಾಗಿಯೇ ಬರೋಬ್ಬರಿ 11,378 ಕಿಲೋ ಮೀಟರ್ ಪ್ರಯಾಣಿಸಬೇಕಿದೆ.
20 ದಿನದಲ್ಲಿ 7 ಮ್ಯಾಚ್.. ಆರ್ಸಿಬಿಗೆ ಚಾಲೆಂಜ್..!
ಏಪ್ರಿಲ್ 7 ರಿಂದ 27ರ 20 ದಿನಗಳ ಅವಧಿಯಲ್ಲಿ ಆರ್ಸಿಬಿ ಬರೋಬ್ಬರಿ 7 ಪಂದ್ಯಗಳನ್ನಾಡಲಿದೆ. ಈ 20 ದಿನಗಳ ಪೈಕಿ 7 ದಿನ ಟ್ರಾವೆಲ್ನಲ್ಲೇ ಕಳೆದು ಹೋಗಲಿದೆ. 11,378 ಕಿಲೋ ಮೀಟರ್ ಪ್ರಯಾಣದಿಂದ ದೈಹಿಕವಾಗಿ ಆಟಗಾರರು ದಣಿಯಲಿದ್ದಾರೆ. ಇದು ಆಟಗಾರರಿಗೆ ಮತ್ತಷ್ಟು ಹೊರೆಯಾಗಲಿದೆ. ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಆಟಗಾರರಿಗೆ ಇದೊಂದು ಕಿರಿಕಿರಿಯೇ. ಇದನ್ನ ಓವರ್ಕಮ್ ಮಾಡೋದೆ ರಾಯಲ್ ಜಾಲೆಂಜರ್ಸ್ಗೆ ರಿಯಲ್ ಚಾಲೆಂಜ್ ಆಗಿ ಮಾರ್ಪಟ್ಟಿದೆ.
ಇದನ್ನೂ ಓದಿ:4, 4, 4, 4, 4, 4, 4, 6, 6; ಮುಂಬೈ ಬೌಲರ್ಗಳನ್ನ ಚಚ್ಚಿದ ಓಪನರ್ ಮಿಚೆಲ್ ಮಾರ್ಷ್, ಅರ್ಧ ಶತಕ
ಆಟಗಾರರನ್ನ ಫ್ರೆಷ್ ಆಗಿ ಉಳಿಸಿಕೊಳ್ಳೋದೆ ಸವಾಲ್..!
ಸತತ ಪ್ರಯಾಣದ ನಡುವೆ ಪ್ರಮುಖ ಆಟಗಾರರನ್ನು ಫ್ರೆಷ್ ಆಗಿ ಇಟ್ಟುಕೊಳ್ಳುವುದು ಬಹು ಮುಖ್ಯವಾಗಲಿದೆ. ಈ ಟ್ರಾವೆಲಿಂಗ್ ಟ್ರಬಲ್ನ ಶೂಟ್ ಮಾಡೋದು ಸುಲಭದ ವಿಚಾರವಲ್ಲ. ಈಗಾಗಲೇ ಮ್ಯಾನೇಜ್ಮೆಂಟ್ ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡು ಒಂದು ಪ್ಲಾನ್ ರೂಪಿಸಿದೆ. ರೋಟೆಶನ್ ಆಧಾರದಲ್ಲಿ ಕೆಲ ಆಟಗಾರರನ್ನ ಆಡಿಸಲು ಮ್ಯಾನೇಜ್ಮೆಂಟ್ ಚಿಂತಿಸಿದೆ. ಆದ್ರೆ, ಪ್ರಮುಖ ಆಟಗಾರರಿಗೆ ರೆಸ್ಟ್ ನೀಡಿದ್ರೆ, ಆ ಸ್ಥಾನವನ್ನ ಸಮರ್ಥವಾಗಿ ತುಂಬೋದ್ಯಾರು ಅನ್ನೋ ಪ್ರಶ್ನೆಯೂ ಕಾಡ್ತಿದೆ. ಹೀಗಾಗಿ ಬ್ಯಾಕ್ ಅಪ್ ಪ್ಲೇಯರ್ ರೆಡಿ ಮಾಡಲು ಬೆಂಚ್ಗೆ ಸೀಮಿತವಾಗಿರೋ ಆಟಗಾರರ ಮೇಲೆ ಹೆಚ್ಚು ಪೋಕಸ್ಡ್ ಆಗಿ ಸಪೋರ್ಟ್ ಸ್ಟಾಫ್ ವರ್ಕ್ ಮಾಡ್ತಿದ್ದಾರೆ.
ಮೊದಲ 2 ಪಂದ್ಯ ಗೆದ್ದು ಶುಭಾರಂಭ ಮಾಡಿದ ಆರ್ಸಿಬಿ ಚಿನ್ನಸ್ವಾಮಿ ಚಾಲೆಂಜ್ ಗೆಲ್ಲುವಲ್ಲಿ ಮುಗ್ಗರಿಸಿದೆ. ಆ ಸೋಲಿನ ಆಘಾತದ ಬೆನ್ನಲ್ಲೇ ಇದೀಗ ಟ್ರಾವೆಲಿಂಗ್ ಚಾಲೆಂಜ್ ಎದುರಾಗಿದೆ. ಒಂದೆಡೆ ಆನ್ಫೀಲ್ಡ್ ಪರ್ಫಾಮೆನ್ಸ್, ಇನ್ನೊಂದೆಡೆ ಆಫ್ ದ ಫೀಲ್ಡ್ನ ಟ್ರಾವೆಲಿಂಗ್ ಈ ಎರಡೂ ಸಮಸ್ಯೆಗಳಿಗೂ ಪರಿಹಾರ ಹುಡುಕೋ ಜವಾಬ್ದಾರಿ ಇದೀಗ ಸಪೋರ್ಟ್ ಸ್ಟಾಫ್ ಹಾಗೂ ಮ್ಯಾನೇಜ್ಮೆಂಟ್ ಮೇಲಿದೆ. ಇದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ