ಪಂದ್ಯ ಕ್ಯಾನ್ಸಲ್ ಆಗಿರುವ ನಿರಾಸೆ ನಡುವೆ ಆರ್​ಸಿಬಿ ತಂಡಕ್ಕೆ ಒಂದು ಗುಡ್​ನ್ಯೂಸ್..!

author-image
Ganesh
Updated On
ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು.. RCB ಸ್ಟಾರ್​​ ಆಟಗಾರ ಫುಲ್ ಟ್ರೆಂಡ್​..! ಕೊಹ್ಲಿ ಅಲ್ಲ
Advertisment
  • ಗುಜರಾತ್ ತಂಡಕ್ಕೆ ಆಘಾತ, ಆರ್​ಸಿಬಿ ನಂ.1
  • ಕೋಲ್ಕತ್ತ ನೈಟ್ ರೈಡರ್ಸ್​ ಟೂರ್ನಿಯಿಂದ ಹೊರಕ್ಕೆ
  • ಕೊನೆಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್​ 2025 ಅಂತಿಮಘಟ್ಟ ತಲುಪಿದ್ದರೂ, ಇಲ್ಲಿಯವರೆಗೆ ಯಾವುದೇ ತಂಡಗಳು ಪ್ಲೇ-ಆಫ್ ಪ್ರವೇಶ ಮಾಡಿಲ್ಲ. ಹೀಗಾಗಿ ಐಪಿಎಲ್ ಮತ್ತಷ್ಟು ರೋಚಕತೆಯನ್ನು ಪಡೆದುಕೊಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಗುಜರಾತ್ ಟೈಟನ್ಸ್ ಅನ್ನು ಆರ್​ಸಿಬಿ ಇಂದು ಹಿಂದಿಕ್ಕಿದ್ದು, ಮೊದಲ ಸ್ಥಾನವನ್ನು ಅಲಂಕರಿಸಿದೆ. ಪಂದ್ಯ ನಡೆಯದ ನಿರಾಸೆಯ ನಡುವೆ ಆರ್​ಸಿಬಿಗೆ ಒಂದು ಪಾಯಿಂಟ್ಸ್​ ಸಿಗುವ ಮೂಲಕ ಮೊದಲ ಸ್ಥಾನಕ್ಕೇರಿದೆ.

ಇಂದು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಗೆದ್ದು ಆರ್​ಸಿಬಿ ಅಧಿಕೃತವಾಗಿ ಆರ್​ಸಿಬಿ ಪ್ಲೇ-ಆಫ್ ಪ್ರವೇಶ ಮಾಡಲಿದೆ ಎಂದು ಭಾವಿಸಲಾಗಿತ್ತು. ಅಭಿಮಾನಿಗಳ ಈ ನಿರೀಕ್ಷೆ ಸಂಪೂರ್ಣ ಉಲ್ಟಾ ಆಗಿದೆ. ಮಳೆರಾಯ ಆರ್​ಸಿಬಿ ಹಾಗೂ ಕೋಲ್ಕತ್ತ ಎರಡೂ ತಂಡಕ್ಕೂ ಭಾರೀ ಪೆಟ್ಟು ಕೊಟ್ಟಿದ್ದಾನೆ.

ಕೋಲ್ಕತ್ತ ಟೂರ್ನಿಯಿಂದಲೇ ಹೊರಬಿದ್ದರೆ, ಆರ್​ಸಿಬಿಗೆ ಇಂದು ಪ್ಲೇ-ಆಫ್​ ಪ್ರವೇಶ ಮಾಡಲು ಬಿಡಲಿಲ್ಲ. ಪಂದ್ಯ ರದ್ದುಗೊಂಡ ಹಿನ್ನೆಲೆಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಾಯಿಂಟ್ಸ್ ಹಂಚಿಕೊಂಡಿವೆ. ಆ ಮೂಲಕ ಆರ್​ಸಿಬಿ ಪಾಯಿಂಟ್ಸ್​ ಟೇಬಲ್​​ನಲ್ಲಿ ಅಗ್ರ ಸ್ಥಾನಕ್ಕೆ ಏರಿದೆ.

ಇದನ್ನೂ ಓದಿ: RCB ಮ್ಯಾಚ್​​ಗೂ ಅಡ್ಡಿ.. ಬೆಂಗಳೂರಲ್ಲಿ 20ಕ್ಕೂ ಅಧಿಕ‌ ಮನೆಗಳಿಗೆ ನುಗ್ಗಿದ ನೀರು.. ಎಲ್ಲೆಲ್ಲಿ ಏನೇನು ಆಯ್ತು..?

publive-image

ಮೊದಲ ಸ್ಥಾನದಲ್ಲಿ ಗುಜರಾತ್ ಟೈಟನ್ಸ್​ ಎರಡನೇ ಸ್ಥಾನಕ್ಕೆ ಕುಸಿದಿದೆ. ಅಂದ್ಹಾಗೆ 17 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೂ, ಆರ್​ಸಿಬಿ ಪ್ಲೇ ಪ್ರವೇಶ ಮಾಡಲಿದೆ ಅಂದುಕೊಂಡರೆ ತಪ್ಪಾಗಬಹುದು. ಆರ್​ಸಿಬಿ ಮುಂದೆ ಇನ್ನೂ ಎರಡು ಪಂದ್ಯಗಳಿವೆ. ಆ ಎರಡು ಪಂದ್ಯಗಳಲ್ಲಿ ಒಂದನ್ನು ಗೆಲ್ಲಲೇಬೇಕು. ಇಲ್ಲದಿದ್ದರೆ, ಗುಜರಾತ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್​​ ತಂಡಗಳ ಸೋಲು, ಗೆಲುವಿನ ಆಧಾರದ ಮೇಲೆ ಅವಲಂಬಿತ ಆಗಲಿದೆ. ಸದ್ಯ ಆರ್​ಸಿಬಿ ಪಾಯಿಂಟ್ಸ್ ಟೇಬಲ್​​ನಲ್ಲಿ ಮೊದಲ ಸ್ಥಾನ ಅಲಂಕರಿಸಿರೋದು ಸಮಾಧಾನಕರ ಸುದ್ದಿಯಾಗಿದೆ.

ಇನ್ನು, ಪಾಯಿಂಟ್ಸ್​ ಟೇಬಲ್​​ನಲ್ಲಿ ಆರ್​ಸಿಬಿ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟನ್ಸ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಐದು, ಕೆಕೆಆರ್​ ಆರು, ಎಲ್​ಎಸ್​ಜಿ ಏಳು, ಎಸ್​ಆರ್​ಹೆಚ್​ ಎಂಟು, ರಾಜಸ್ಥಾನ್ ರಾಯಲ್ಸ್ ಒಂಬತ್ತನೇ ಸ್ಥಾನದಲ್ಲಿದೆ. ಇನ್ನು ಸಿಎಸ್​ಕೆ ಕೊನೆಯ ಸ್ಥಾನವನ್ನು ಅಲಂಕರಿಸಿದೆ.

ಇದನ್ನೂ ಓದಿ: ಹಾಲಿ ಚಾಂಪಿಯನ್ ತಂಡವನ್ನು​​ ಮನೆಗೆ ಕಳುಹಿಸಿದ ಬೆಂಗಳೂರು ಮಳೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment