/newsfirstlive-kannada/media/post_attachments/wp-content/uploads/2025/04/RCB-3.jpg)
ಐಪಿಎಲ್ ಟೂರ್ನಿ ಅಂತಿಮಘಟ್ಟದತ್ತ ಸಾಗುತ್ತಿದೆ. ಆದರೆ ಪ್ಲೇ-ಆಫ್ಗೆ ಯಾವೆಲ್ಲ ತಂಡಗಳು ಎಂಟ್ರಿ ಆಗುತ್ತವೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಯಾಕೆಂದರೆ ಪ್ಲೇ-ಆಫ್ಗಾಗಿ ತಂಡಗಳ ಪೈಪೋಟಿ ತುಂಬಾನೇ ಟಫ್ ಆಗಿದೆ.
ಸದ್ಯದ ಅಂಕಪಟ್ಟಿ ನೋಡೋದಾದ್ರೆ 11 ಪಂದ್ಯಗಳಲ್ಲಿ 8 ಮ್ಯಾಚ್ ಗೆದ್ದಿರುವ ಆರ್ಸಿಬಿ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆರ್ಸಿಬಿ ಸದ್ಯಕ್ಕೆ ಪ್ಲೇ-ಆಫ್ ರೇಸ್ನಲ್ಲಿ ಸುರಕ್ಷಿತವಾಗಿದೆ. ಆದರೆ ಇನ್ನುಳಿದ ಮೂರು ತಂಡಗಳ ಆಯ್ಕೆಗೆ ಭಾರೀ ಪೈಪೋಟಿ ಇದೆ.
ಐದನೇ ಸ್ಥಾನದಲ್ಲಿ ಕೂತಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ನಿನ್ನೆ ಎಲ್ಎಸ್ಜಿ ಸೋಲಿಸಿ ನಂಬರ್ 2ನೇ ಸ್ಥಾನಕ್ಕೇರಿದೆ. ಆ ಮೂಲಕ ಎರಡನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಅದೇ ರೀತಿ, ಮೂರನೇ ಸ್ಥಾನದಲ್ಲಿದ್ದ ಗುಜರಾತ್ ಟೈಟನ್ಸ್, ನಾಲ್ಕನೇ ಸ್ಥಾನಕ್ಕೆ ಕುಸಿದೆ.
ಇದನ್ನೂ ಓದಿ: 6, 6, 6, 6, 6, 6.. ಧೂಳೆಬ್ಬಿಸಿದ ರಿಯಾನ್ ಪರಾಗ್; IPL ಇತಿಹಾಸದಲ್ಲೇ ಹೊಸ ದಾಖಲೆ!
ಆರ್ಸಿಬಿ, ಗುಜರಾತ್, ಮುಂಬೈ ಇಂಡಿಯನ್ಸ್, ಪಂಜಾಬ್ ತಂಡಗಳ ಜೊತೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಐದನೇ ಸ್ಥಾನದಲ್ಲಿದ್ದುಕೊಂಡು ಹೋರಾಟ ನಡೆಸ್ತಿದೆ. ಆರು ಪಂದ್ಯವನ್ನು ಗೆದ್ದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ಗೆ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇವೆ. ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ನಡೆಯಲಿದೆ. ಇವತ್ತಿನ ಪಂದ್ಯವನ್ನು ಗೆದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೆ ಜಂಪ್ ಆಗಲಿದೆ.
ಡೆಲ್ಲಿ ಜೊತೆಗೆ ಕೋಲ್ಕತ್ತ ನೈಟ್ ರೈಡರ್ಸ್ ಕೂಡ ಪ್ಲೇ-ಆಫ್ ರೇಸ್ನಲ್ಲಿದ್ದು, ಸದ್ಯ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಎಲ್ಎಸ್ಜಿ 7ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ 8, ಸನ್ ರೈಸರ್ಸ್ ಹೈದರಾಬಾದ್ 9ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಸ್ಥಾನದಲ್ಲಿದೆ.
ಇದನ್ನೂ ಓದಿ: ಸತತ 6 ಎಸೆತದಲ್ಲಿ 6 ಸಿಕ್ಸರ್.. ಸ್ಟಾರ್ ಬೌಲರ್ನ ತೊಳೆದು ಹಾಕಿದ ರಿಯಾನ್ ಪರಾಗ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್