RCB ಎಷ್ಟು ಸಾವಿರ ಕಿಲೋ ಮೀಟರ್ ಪ್ರಯಾಣಿಸುತ್ತೆ.. ಈ ಬಾರಿ ರಾಯಲ್​ ಚಾಲೆಂಜರ್ಸ್​ಗೆ ‘ಟ್ರಾವೆಲ್​’ ಚಾಲೆಂಜ್​!

author-image
Bheemappa
Updated On
ಆರ್​ಸಿಬಿಗೆ ಒಂದೇ ಒಂದು ವೀಕ್ನೆಸ್.. ವಿದೇಶಿ ಆಟಗಾರರು ವಿಲನ್ ಆಗಿಬಿಡ್ತಾರಾ..?
Advertisment
  • ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ತಂಡಕ್ಕೆ ‘ಭಾರತ ದರ್ಶನ’
  • ಎಲ್ಲ ತಂಡಗಳಿಗಿಂತ ಆರ್​ಸಿಬಿಯೇ ಹೆಚ್ಚು ಟ್ರಾವೆಲ್ ಮಾಡುತ್ತಾ?
  • ಅತಿ ಹೆಚ್ಚು ಕಿ.ಮೀ ಪ್ರಯಾಣಿಸೋ ತಂಡ ಯಾವುದು ಗೊತ್ತಾ.?

ಐಪಿಎಲ್​​ ಆರಂಭಕ್ಕೂ ಮುನ್ನವೇ ರಾಯಲ್​ ಚಾಲೆಂಜರ್ಸ್​​ಗೆ ಟ್ರಾವೆಲ್​ ಚಾಲೆಂಜ್​ ಎದುರಾಗಿದೆ. ಕಪ್​ ಕನಸಿಗೆ ಈ ಸವಾಲೇ ದೊಡ್ಡ ಅಡ್ಡಿಯಾಗಿದೆ. ಈ ಸೀಸನ್​ ಐಪಿಎಲ್​ನಲ್ಲಿ ಬೆಂಗಳೂರು ತಂಡ ಭಾರತ ದರ್ಶನ ಮಾಡಲಿದೆ. ಒಂದಲ್ಲ, ಎರಡಲ್ಲ ಲೀಗ್​ ಹಂತದ ಪಂದ್ಯಗಳಲ್ಲೇ ಆರ್​ಸಿಬಿ ಬರೋಬ್ಬರಿ 17 ಸಾವಿರ ಕಿಲೋಮೀಟರ್​​ ಪ್ರಯಾಣಿಸಬೇಕಿದೆ.

18ನೇ ಆವೃತ್ತಿ ಐಪಿಎಲ್​ಗೆ ಕೌಂಟ್​​ಡೌನ್​ ಶುರುವಾಗಿದೆ. ಕೆಲವೇ ದಿನಗಳಲ್ಲಿ ಚುಟುಕು ಕ್ರಿಕೆಟ್​ನ ಮಹಾಜಾತ್ರೆ ಆರಂಭವಾಗಲಿದೆ. ಟೂರ್ನಿಯ ಆರಂಭ ಮಾರ್ಚ್​​ 22ಕ್ಕಾದ್ರೂ, ವಿಶ್ವ ಶ್ರೀಮಂತ ಟಿ20 ಲೀಗ್​ನ ಫೀವರ್​​​ ಕ್ರಿಕೆಟ್​​ ಲೋಕವನ್ನ ಈಗಾಗಲೇ ಆವರಿಸಿದೆ. ಇಂಡಿಯನ್​ ಪ್ರೀಮಿಯರ್​​ ಲೀಗ್​ನ ಕಾವು ಕ್ರಿಕೆಟ್​​ ಜಗತ್ತಿನಲ್ಲಿ ಕಾವೇರುತ್ತಿದೆ.

publive-image

ಮೆಗಾ ಟೂರ್ನಿಗೆ ಸಿದ್ಧತೆ ಆರಂಭಿಸಿದ ಪಾಟಿದಾರ್​​ ಪಡೆ .!

ಹೊಸ ತಂಡ, ಹೊಸ ನಾಯಕನ ಅಡಿಯಲ್ಲಿ ಹೊಸ ಸೀಸನ್​ನ ಹೊಸ ಹುರುಪಿನೊಂದಿಗೆ ಆರಂಭಿಸಲು ಆರ್​​ಸಿಬಿ ಸಜ್ಜಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​​ ರೈಡರ್ಸ್​​ ಎದುರು ಕಣಕ್ಕಿಳಿಯಲಿರೋ ರೆಡ್​ ಆರ್ಮಿ ಚೊಚ್ಚಲ ಕಪ್​ ಕನವರಿಕೆಯಲ್ಲಿದೆ. ಅದಕ್ಕಾಗಿ ಬೆಂಗಳೂರಿನಲ್ಲಿ ಪಾಟಿದಾರ್​ ಪಡೆ ಭರ್ಜರಿ ಸಿದ್ಧತೆಯನ್ನೂ ಆರಂಭಿಸಿದೆ. ಸಿದ್ಧತೆ ಆರಂಭಿಸಿರೋ ರಾಯಲ್​​ ಚಾಲೆಂಜರ್ಸ್​ಗೆ ಟ್ರಾವೆಲ್​ ಅನ್ನೋ ತಲೆನೋವು ಶುರುವಾಗಿದೆ.

ಬೆಂಗಳೂರು ತಂಡಕ್ಕೆ ‘ಭಾರತ ದರ್ಶನ’.! 17,084 ಕಿ.ಮೀ ಪ್ರಯಾಣ.!

ಈ ಬಾರಿಯ ಐಪಿಎಲ್​ನಲ್ಲಿ ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ತಂಡದ ಅರ್ಧ ಸೀಸನ್​ನ ಟ್ರಾವೆಲಿಂಗ್​ನಲ್ಲೇ ಕಳೆಯಲಿದೆ. ಅಕ್ಷರಶಃ ಐಪಿಎಲ್ ಟೂರ್ನಿ ಬೆಂಗಳೂರು ತಂಡಕ್ಕೆ ಭಾರತ ದರ್ಶನ ಅಂದ್ರೆ ತಪ್ಪಾಗಲ್ಲ. ರೆಡ್​ ಆರ್ಮಿ ಈ ಸೀಸನ್​ನಲ್ಲಿ ಪಂದ್ಯಗಳನ್ನಾಡಲು ಬರೋಬ್ಬರಿ 17,084 ಸಾವಿರ ಕಿಲೋ ಮೀಟರ್​ ಪ್ರಯಾಣ ಮಾಡಲಿದೆ. ಉಳಿದ್ಯಾವ ತಂಡ ಕೂಡ ಇಷ್ಟು ಸುತ್ತಲ್ಲ.

ಫಸ್ಟ್​​ 5 ಪಂದ್ಯಗಳ ಪ್ರಯಾಣ ಒಕೆ

ಸದ್ಯ ಬೆಂಗಳೂರಿನಲ್ಲಿ ಅಭ್ಯಾಸ ನಡೆಸ್ತಿರೋ ಆರ್​​ಸಿಬಿ ಮೊದಲ ಪಂದ್ಯವನ್ನಾಡಲು ಕೊಲ್ಕತ್ತಾಗೆ ತೆರಳಲಿದೆ. ಕೊಲ್ಕತ್ತಾದಿಂದ 2ನೇ ಪಂದ್ಯವನ್ನಾಡಲು ಚೆನ್ನೈಗೆ ಬಂದ್ರೆ, 3ನೇ ಪಂದ್ಯವನ್ನಾಡಲು ಬೆಂಗಳೂರಿಗೆ ವಾಪಾಸ್ಸಾಗಲಿದೆ. ಆ ಬಳಿಕ ಮುಂಬೈಗೆ ತೆರಳಿ ಮತ್ತೆ ಬೆಂಗಳೂರಿಗೆ ಬರಲಿದೆ. ಫಸ್ಟ್​​ 5 ಪಂದ್ಯಗಳ ಪ್ರಯಾಣ ಒಕೆ. ಆದ್ರೆ ಆನಂತರದ ಕಥೆ.. ಫುಲ್​ ವ್ಯಥೆ.

1 ತಿಂಗಳು, 8 ಪಂದ್ಯ, 5 ಸ್ಥಳ.. ಉತ್ತರ-ದಕ್ಷಿಣ ದರ್ಶನ.!

6ನೇ ಪಂದ್ಯದಿಂದ ರಾಯಲ್​ ಚಾಲೆಂಜರ್ಸ್​ ತಂಡ ಉತ್ತರ ದಕ್ಷಿಣ ದರ್ಶನ ನಡೆಸಲಿದೆ. ಬೆಂಗಳೂರಿದ ಹೋಗೋದು ಒಂದು ಪಂದ್ಯವನ್ನಾಡೋದು ಮತ್ತೆ ಬೆಂಗಳೂರಿಗೆ ಬರೋದು. ಇಲ್ಲಿ ಒಂದು ಪಂದ್ಯ ಮತ್ತೆ ಹೋಗೋದು ಇದೇ ಆರ್​ಸಿಬಿ ರೂಟಿನ್​ ಆಗಲಿದೆ. 1 ತಿಂಗಳ ಪಂದ್ಯದಲ್ಲಿ 8 ಪಂದ್ಯವನ್ನಾಡೋ ಆರ್​​ಸಿಬಿ 5 ಸ್ಥಳಗಳಿಗೆ ಪ್ರಯಾಣಿಸಲಿದೆ.

ಆರ್​​ಸಿಬಿ ‘ಭಾರತ ದರ್ಶನ’

6ನೇ ಪಂದ್ಯವನ್ನ ಆಡಲು ಬೆಂಗಳೂರಿನಿಂದ ಜೈಪುರಕ್ಕೆ ತೆರಳೋ ಆರ್​​ಸಿಬಿ, 7ನೇ ಪಂದ್ಯಕ್ಕೆ ಮತ್ತೆ ಬೆಂಗಳೂರಿಗೆ ಬರಲಿದೆ. 8ನೇ ಪಂದ್ಯಕ್ಕೆ ಬೆಂಗಳೂರಿನಿಂದ ಮೌಲಾಲಂಪುರಕ್ಕೆ ಹಾರುವ ರಜತ್​ ಸೈನ್ಯ, ಮತ್ತೆ 9ನೇ ಪಂದ್ಯವನ್ನಾಡಲು ಉದ್ಯಾನನಗರಿಗೆ ಬರಲಿದೆ. ಮತ್ತೆ 10ನೇ ಪಂದ್ಯಕ್ಕೆ ರಾಷ್ಟ್ರ ರಾಜಧಾನಿಗೆ ದೆಹಲಿಗೆ ಪ್ರಯಾಣಿಸೋ ರೆಡ್​ ಆರ್ಮಿ, 11ನೇ ಪಂದ್ಯಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಬರಲಿದೆ. 12ನೇ ಪಂದ್ಯಕ್ಕೆ ಲಕ್ನೋಗೆ ಪ್ರಯಾಣಿಸೋ ತಂಡ ಲೀಗ್​ನ ಕೊನೆಯ 2 ಪಂದ್ಯವನ್ನಾಡಲು ಸಿಲಿಕಾನ್​ ಸಿಟಿಗೆ ವಾಪಸ್ ಆಗಲಿದೆ.

ಲೀಗ್​ ಹಂತದ ಪಂದ್ಯಗಳಲ್ಲಿ ಆರ್​​ಸಿಬಿ 17 ಸಾವಿರದ 84 ಕಿಲೋಮೀಟರ್​​ ಪ್ರಯಾಣ ಮಾಡಲಿದೆ. ಆರ್​​ಸಿಬಿ ನಂತರ ಚೆನ್ನೈ, ಪಂಜಾಬ್​ ಹಾಗೂ ಕೊಲ್ಕತ್ತಾ ತಂಡಗಳು ಪ್ರಯಾಣ ಈ ಕೆಳಗಿನಂತೆ ಇದೆ.

ಇದನ್ನೂ ಓದಿ: WPL 2025 ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್..​ ಎಷ್ಟು ಕೋಟಿ ರೂಪಾಯಿ ಬಹುಮಾನ ಸಿಗುತ್ತೆ?

publive-image

IPL ತಂಡಗಳ ಪ್ರಯಾಣ

  • ಚೆನ್ನೈ- 16,184 km
  • ಪಂಜಾಬ್​- 14,341 km
  • ಕೊಲ್ಕತ್ತಾ- 13,537 km
  • ರಾಜಸ್ಥಾನ- 12,730 km
  • ಮುಂಬೈ- 12,702 km
  • ಗುಜರಾತ್-​​ 10,405 km
  • ಲಕ್ನೋ- 9747 km
  • ಡೆಲ್ಲಿ- 9270 km

ಇದನ್ನೂ ಓದಿ:ಆರೆಂಜ್, ಪರ್ಪಲ್ ಕ್ಯಾಪ್ ಪಡೆದವರು ಯಾರು.. WPL ಆಟಗಾರ್ತಿಯರಿಗೆ ಎಷ್ಟೆಷ್ಟು ಹಣ ಸಿಕ್ಕಿದೆ..?

18 ಸೀಸನ್​ನಲ್ಲಿ ಕಪ್​​ ಗೆಲ್ಲೋ ಕನವರಿಕೆಯಲ್ಲಿರೋ ರಾಯಲ್​​ ಚಾಲೆಂಜರ್ಸ್​​ಗೆ ಟ್ರಾವೆಲ್ ಚಾಲೆಂಜ್​ ಹಿನ್ನಡೆಯನ್ನ ಉಂಟು ಮಾಡೋ ಸಾಧ್ಯತೆ ದಟ್ಟವಾಗಿದೆ. ಆಟದಿಂದ ದೈಹಿಕವಾಗಿ ದಣಿಯೋ ಆಟಗಾರರಿಗೆ ಈ ಪ್ರಯಾಣ ಮತ್ತಷ್ಟು ಹೊರೆಯಾಗಲಿದೆ. ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಆಟಗಾರರು ಟ್ರಾವೆಲಿಂಗ್​ನಿಂದ ಸುಸ್ತಾಗ್ತಾರೆ. ಈ ಚಾಲೆಂಜ್​​ನ ಓವರ್​ಕಮ್​ ಮಾಡೋದೆ ರಾಯಲ್​ ಜಾಲೆಂಜರ್ಸ್​ಗೆ ರಿಯಲ್​​ ಚಾಲೆಂಜ್​.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment