Advertisment

ಇದು ಅದೇ ಹಳೆ ಪುಸ್ತಕದ್ದೇ ಹೊಸ ಅಧ್ಯಾಯ, ಡಿಸೈನ್​, ಡಿಸೈನ್​ ಆಗಿ ಆರ್​​ಸಿಬಿ ಟ್ರೋಲ್​..!

author-image
Ganesh
Updated On
ಇದು ಅದೇ ಹಳೆ ಪುಸ್ತಕದ್ದೇ ಹೊಸ ಅಧ್ಯಾಯ, ಡಿಸೈನ್​, ಡಿಸೈನ್​ ಆಗಿ ಆರ್​​ಸಿಬಿ ಟ್ರೋಲ್​..!
Advertisment
  • ಟ್ರೋಲರ್​​ಗಳಿಗೆ ಆಹಾರವಾದ ಆರ್​​ಸಿಬಿ ಸೋಲು
  • RCB ಮ್ಯಾನೇಜ್​ಮೆಂಟ್​​ನ ರುಬ್ಬಿದ ಅಭಿಮಾನಿಗಳು
  • ಹೇಳೋಕಾಗ್ತಿಲ್ಲ, ಅನುಭವಿಸೋಕಾಗ್ತಿಲ್ಲ.. ಅಂತಿದ್ದಾರೆ ಫ್ಯಾನ್ಸ್

ಹೊಸ ಅಧ್ಯಾಯ ಅಂತಾ ಟೂರ್ನಿಯನ್ನ ಆರಂಭಿಸಿದ ಆರ್​​ಸಿಬಿ, ಹಳೆ ಸಂಪ್ರದಾಯವನ್ನ ಮುಂದುವರೆಸಿದೆ. ಹೋಮ್​​ಗ್ರೌಂಡ್​​ ಚಿನ್ನಸ್ವಾಮಿಯಲ್ಲೇ ಲಾಯಲ್​ ಫ್ಯಾನ್ಸ್ ಎದುರು​​ ಹೀನಾಯ ಸೋಲಿಗೆ ಗುರಿಯಾಗಿದೆ. ಬೆನ್ನಲ್ಲೇ ಡಿಸೈನ್​, ಡಿಸೈನ್​ ಆಗಿ ಟ್ರೋಲ್​​ಗೆ ಗುರಿಯಾಗಿದೆ.

Advertisment

ಈ ಸೀಸನ್​​ ಆರಂಭಕ್ಕೂ ಮುನ್ನ ವಿರಾಟ್​ ಕೊಹ್ಲಿ ಇದು ಆರ್​​ಸಿಬಿಯ ಹೊಸ ಅಧ್ಯಾಯ ಎಂದಿದ್ರು. ಇದನ್ನ ಕೇಳಿದ ಫ್ಯಾನ್ಸ್​​ ಫುಲ್​​ ಥ್ರಿಲ್​​ ಆಗಿದ್ರು. ಈಗ ಗೊತ್ತಾಗ್ತಿದೆ. ಇದು ಅದೇ ಹಳೆ ಪುಸ್ತಕದ್ದೇ ಹೊಸ ಅಧ್ಯಾಯ ಅಂತಾ. ಕನಿಷ್ಟ ಫೈಟ್​ ಕೂಡ ಕೊಡದೇ ಆರ್​​ಸಿಬಿ ಹೋಮ್​ಗ್ರೌಂಡ್​ನಲ್ಲಿ ಹೀನಾಯ ಸೋಲುಂಡಿದೆ. ಇದ್ರಿಂದ ಟ್ರೋಲರ್​​ಗಳಿಗಂತೂ ಫುಲ್​ಮೀಲ್ಸ್​ ಊಟ ಸಿಕ್ಕಂತಾಗಿದೆ.

ಇದನ್ನೂ ಓದಿ: ತಪ್ಪು ಮಾಡಿದ ರಿಷಬ್ ಪಂತ್; IPL ಪಂದ್ಯದಿಂದಲೇ ಬ್ಯಾನ್ ಆಗುವ ಆತಂಕ..!

ಆಸಿಸ್​ ಸ್ಟಾರ್​​ಗಳಾದ ಕ್ಯಾಮರೂನ್​ ಗ್ರೀನ್​, ಗ್ಲೆನ್​ ಮ್ಯಾಕ್ಸ್​ವೆಲ್​ ಮೇಲೆ ಹೆಚ್ಚು ನಿರೀಕ್ಷೆಯಿತ್ತು. ನಿರೀಕ್ಷೆ ಹುಸಿಯಾಗಿದೆ. ಇವ್ರ ಜೊತೆ ಮ್ಯಾನೇಜ್​ಮೆಂಟ್​ನೂ ಸೆರ್ಸಿ ಡಿಸೈನ್​ ಡಿಸೈನ್​ ಆಗಿ ಟ್ರೋಲ್​ ಮಾಡಿದ್ದಾರೆ. ಆರ್​​ಸಿಬಿ ಸೋತ್ರೂ, ಗೆದ್ರೂ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸೆನ್ಸೇಷನ್​ ಸೃಷ್ಟಿಸುತ್ತೆ. ಈಗಲೂ ಅದೇ ಸೆನ್ಸೇಷನ್​ ಸೃಷ್ಟಿಯಾಗಿದ್ದು.. ಕಂಟೆಂಟ್​ ಕ್ರಿಯೆಟರ್ಸ್​​​​​ ಇದ್ನ ಸಖತ್​ ಆಗಿ​​ ಬಳಸಿಕೊಳ್ತಿದ್ದಾರೆ.

Advertisment

ಬೇರೆ ಟೀಮ್​ ಫ್ಯಾನ್ಸ್​ ನಮ್​ ಸ್ಟ್ರೆಂಥ್​​ ಅದು ಇದು ಅಂತಿದ್ರೆ, ನಮ್​ ಆರ್​​ಸಿಬಿ ಫ್ಯಾನ್ಸ್​ ಕಥೆ ಹೇಳೋಕಾಗ್ತಿಲ್ಲ.. ಅನುಭವಿಸೋಕಾಗ್ತಿಲ್ಲ. ಈ ಸಲ ಕಪ್​ ನಮ್ದೇ ಅನ್ನೋ ಟ್ಯಾಗ್​ಲೈನ್​ ಅನ್ನೋ ಟ್ರೋಲರ್ಸ್​ ರುಬ್ಬಿದ್ದಾರೆ. ಬ್ಯಾಟಿಂಗ್​ ಆಡಿದ್ರೆ, ಬೌಲಿಂಗ್​ ಸರಿಯಾಗಲ್ಲ.. ಬೌಲಿಂಗ್​ ಸರಿಯಾದ್ರೆ, ಬ್ಯಾಟಿಂಗ್​ ಬರಲ್ಲ.. ಆರ್​​​ಸಿಬಿ ಕಥೆ ಫುಲ್​​ ಮೊಯೆ ಮೊಯೆ ಎಂದು ಗೇಲಿ ಮಾಡುತ್ತಿದ್ದಾರೆ.

ಲಕ್ನೋ ವಿರುದ್ಧ ಸೋತ ಆರ್​​ಸಿಬಿ ಪಾಯಿಂಟ್ಸ್​ ಟೇಬಲ್​ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಆರ್​​ಸಿಬಿ ಕೆಳಗೆ ಮುಂಬೈ ಇದೆ. ಈಗ ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮಾ ಏ ದೋಸತಿ ಹಮ್​ ನಹಿ ತೋಡೆಂಗೆ ಅಂತಿದ್ದಾರೆ.

Advertisment

ಒಟ್ನಲ್ಲಿ, ಹಳೆ ಸಂಪ್ರದಾಯವನ್ನೇ ಮಂದುವರೆಸಿರೋ ಆರ್​ಸಿಬಿ ಮೂರು ಪಂದ್ಯಗಳಲ್ಲಿ ಸೋತು ಮುಖಭಂಗ ಅನುಭವಿಸಿದೆ. ಫ್ಯಾನ್ಸ್​ ನಿರಾಶರಾಗಿದ್ದಾರೆ. ಆದ್ರೂ, ಕಪ್​ ಗೆಲ್ಲುತ್ತೆ ಅನ್ನೋ ನಂಬಿಕೆ ಲಾಯಲ್​​ ಫ್ಯಾನ್ಸ್​ಗಳಲ್ಲಿದೆ. ಮುಂದಾದ್ರೂ ತಂಡ ಗೆಲುವಿನ ಹಳಿಗೆ ಮರಳಿ ಫ್ಯಾನ್ಸ್​ನ ಖುಷಿ ಪಡಿಸುತ್ತಾ.? ಕಾದು ನೋಡೋಣ.

https://twitter.com/AnkitxRCB/status/1775469829920813296

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment