ಅಭಿಮಾನದ ಹೆಸರಲ್ಲಿ ಚಾಲೆಂಜ್.. ಇದೆಂಥ ಪರಿಸ್ಥಿತಿ ತಂದ್ಕೊಂಡ್ರು ಬುದ್ಧಿಗೇಡಿಗಳು..! VIDEO

author-image
Ganesh
Updated On
ಅಭಿಮಾನದ ಹೆಸರಲ್ಲಿ ಚಾಲೆಂಜ್.. ಇದೆಂಥ ಪರಿಸ್ಥಿತಿ ತಂದ್ಕೊಂಡ್ರು ಬುದ್ಧಿಗೇಡಿಗಳು..! VIDEO
Advertisment
  • ವಿಡಿಯೋ ಶೇರ್ ಮಾಡಿ ಲಾಕ್ ಆದ ಹುಚ್ಚು ಅಭಿಮಾನಿಗಳು
  • ಲೈಕ್ಸ್​, ವ್ಯೂವ್ಸ್​ಗಾಗಿ ಠಾಣೆ ಮೆಟ್ಟಿಲೇರಿದ ಕಿಡಿಗೇಡಿಗಳು
  • ಮೈದಾನಕ್ಕೆ ನುಗ್ತೀವಿ, ಕೊಹ್ಲಿ ತಬ್ಬಿ ಕೊಳ್ತೀವಿ ಎಂದಿದ್ದ ಯುವಕರು

ವಿರಾಟ್ ಕೊಹ್ಲಿ ಮೇಲಿನ ಅಭಿಮಾನದ ಹೆಸರಲ್ಲಿ ಹುಚ್ಚಾಟ ನಡೆಸಿದ್ದ ಇಬ್ಬರು ಬುದ್ಧಿಗೇಡಿಗಳಿಗೆ ಬೆಂಗಳೂರು ಪೊಲೀಸರು ಚಳಿ ಬಿಡಿಸಿದ್ದಾರೆ!

ಇಬ್ಬರು ಯುವಕರು ಮಾಡಿದ್ದೇನು..?

ಕೊಹ್ಲಿ ಮತ್ತು ಆರ್​ಸಿಬಿ ಅಭಿಮಾನಿಗಳಾಗಿದ್ದ ಇವರು, ವಿಡಿಯೋ ಒಂದನ್ನು ಮಾಡಿದ್ದರು. ಲೈಕ್ಸ್, ವ್ಯೂವ್ಸ್​ಗಾಗಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಕಬ್ಜಾ ಶರಣ್ ಎಂಬ ಯುವಕನ ಸೋಶಿಯಲ್ ಮೀಡಿಯಾ ಖಾತೆಯಿಂದ ವಿಡಿಯೋ ಅಪ್​ಲೋಡ್ ಆಗಿತ್ತು. ಈ ವಿಡಿಯೋ ಬೆಂಗಳೂರಿನ ಭದ್ರತಾ ಅಧಿಕಾರಿಗಳಿಗೇ ಒಂದು ರೀತಿಯಲ್ಲಿ ಚಾಲೆಂಜ್ ಹಾಕಿದಂತೆ ಇತ್ತು..

ವಿಡಿಯೋದಲ್ಲಿ ಏನ್ ಹೇಳಿದ್ದರು..?

ಇದೇ ಮೇ 17 ರಂದು ಆರ್​ಸಿಬಿ ಮತ್ತು ಕೆಕೆಆರ್ ಮಧ್ಯೆ ಪಂದ್ಯ ನಡೆಯಲಿದೆ. ಈ ವೇಳೆ ನಾವು ಮೈದಾನಕ್ಕೆ ನುಗ್ಗುತ್ತೇವೆ, ಜೊತೆಗೆ ಕಿಂಗ್ ಕೊಹ್ಲಿಯನ್ನು ತಬ್ಬಿಕೊಳ್ತೇನೆ. ಹೊಸ ಇತಿಹಾಸ ಸೃಷ್ಟಿಸ್ತೇವೆ ಅಂತಾ ಉದ್ಧಟತನದ ಮಾತುಗಳನ್ನು ಆಡಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆಯೇ ಕಬ್ಬನ್ ಪಾರ್ಕ್​ ಠಾಣೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಅಷ್ಟೇ ಅಲ್ಲ, ಇಬ್ಬರು ಯುವಕರನ್ನು ವಶಕ್ಕೆ ಪಡೆದುಕೊಂಡು, ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಠಾಣೆಯಲ್ಲಿ ತಮ್ಮದೇ ರೀತಿಯಲ್ಲಿ ಪಾಠ ಮಾಡಿದ ಮೇಲೆ, ವಿಡಿಯೋ ಡಿಲೀಟ್ಸ್ ಮಾಡಿಸಿದ್ದಾರೆ. ಅಲ್ಲದೇ ಇನ್ಮುಂದೆ ಅಂಥ ತಪ್ಪುಗಳು ಆಗದಂತೆ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿಕೊಟ್ಟಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment