/newsfirstlive-kannada/media/post_attachments/wp-content/uploads/2024/10/RCB_VIRAT.jpg)
ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗಲು ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಹೊತ್ತಲ್ಲೇ ಚಾಂಪಿಯನ್ಸ್ ಟ್ರೋಫಿಯಿಂದ ಆರ್ಸಿಬಿಯ ಇಬ್ಬರು ಸ್ಟಾರ್ ಆಟಗಾರರು ಹೊರಬಿದ್ದಿದ್ದಾರೆ. ಇವರು ಮುಂದಿನ ಐಪಿಎಲ್ ಆಡೋದು ಕೂಡ ಡೌಟ್ ಎಂದು ತಿಳಿದು ಬಂದಿದೆ.
ಜೋಶ್ ಹೆಜಲ್ವುಡ್ಗೆ ಕಾಲು ನೋವು
ಇತ್ತೀಚೆಗೆ ನಡೆದ ಮೆಗಾ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಜೋಶ್ ಹೆಜಲ್ವುಡ್ ಅವರನ್ನು ಖರೀದಿ ಮಾಡಿದ್ರು. ಈಗ ಜೋಶ್ ಹೆಜಲ್ವುಡ್ ಚಾಂಪಿಯನ್ಸ್ ಟ್ರೋಫಿ ಆಡೋದು ಡೌಟ್ ಆಗಿದೆ. ಇವರು ಕಾಲು ನೋವಿನಿಂದ ಬಳಲುತ್ತಿದ್ದು, ಐಪಿಎಲ್ ವೇಳೆಗೆ ಫಿಟ್ ಆಗೋದು ಕೂಡ ಅನುಮಾನ. ಇದು ಆರ್ಸಿಬಿ ತಂಡಕ್ಕೆ ಆಘಾತ ತಂದಿದೆ.
ಜೇಕಬ್ ಬೆಥೆಲ್ಗೂ ಗಾಯ
ಇಂಗ್ಲೆಂಡ್ ತಂಡದ ಯುವ ಆಲ್ರೌಂಡರ್ ಜೇಕಬ್ ಬೆಥೆಲ್. ಇವರನ್ನು ಆರ್ಸಿಬಿ ತಂಡ ಮೆಗಾ ಹರಾಜಿನಲ್ಲಿ ಖರೀದಿ ಮಾಡಿತ್ತು. ಬೆಥೆಲ್ ಈಗ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದ್ದಾರೆ. ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರೋ ಇವರು ಐಪಿಎಲ್ನಲ್ಲಿ ಭಾಗಿಯಾಗುವುದು ಡೌಟ್ ಆಗಿದೆ.
ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿರೋ ಈ ಇಬ್ಬರು ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಲಿದ್ದಾರಾ? ಅನ್ನೋ ಚರ್ಚೆ ಶುರುವಾಗಿದೆ. ಐಸಿಸಿ ಮೆಗಾ ಟೂರ್ನಿನಿಂದ ಹೊರಬಿದ್ದ ಇವರು ಫುಲ್ ಫಿಟ್ ಆಗಲಿಲ್ಲ ಎಂದರೆ ಐಪಿಎಲ್ ಆಡಲು ಅನುಮತಿ ಸಿಗೋದು ಕಷ್ಟ.
ಒಂದು ತಿಂಗಳಲ್ಲಿ ಫಿಟ್ ಆಗಬೇಕು
ಐಪಿಎಲ್ ಆರಂಭಕ್ಕೂ ಇನ್ನೂ ಒಂದು ತಿಂಗಳು ಅವಕಾಶ ಇದೆ. ಒಂದು ತಿಂಗಳಲ್ಲಿ ಇಬ್ಬರು ಸಂಪೂರ್ಣ ಫಿಟ್ ಆದಲ್ಲಿ ಮಾತ್ರ ಆರ್ಸಿಬಿ ಪರ ಆಡಬಹುದು. ಇಲ್ಲದಿದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬೇರೆ ಆಟಗಾರರನ್ನು ಖರೀದಿ ಮಾಡಬಹುದು.
ಇದನ್ನೂ ಓದಿ:ಟೀಮ್ ಇಂಡಿಯಾ ಗೆಲುವಿಗೆ ಕಾರಣ ಯಾರು? ಸ್ಫೋಟಕ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್ ರೋಹಿತ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ