newsfirstkannada.com

ಅನ್​ಬಾಕ್ಸ್​ ಇವೆಂಟ್​ಗೆ RCB ಭರ್ಜರಿ ಸಿದ್ಧತೆ; ಬ್ಯಾಂಡ್​ ಬಜಾಯಿಸಲು ರಘು ದೀಕ್ಷಿತ್ ಟೀಮ್​​​ ರೆಡಿ.. ಇನ್ನೂ ಏನೇನಿದೆ..?

Share :

Published March 16, 2024 at 6:10am

    ಕ್ರಿಕೆಟ್​ ಲೋಕದಲ್ಲಿ​ ಐಪಿಎಲ್​ ಜಾತ್ರೆಯ ಫೀವರ್ ಶುರು

    ಅನ್​ಬಾಕ್ಸ್​​ ಇವೆಂಟ್​​ನಲ್ಲಿ ಮನರಂಜನೆಯ ಫುಲ್​ಮೀಲ್ಸ್

    ಅಸಲಿ ಟೂರ್ನಿಗೂ ಮುನ್ನವೇ ಫ್ಯಾನ್ಸ್​ಗೆ ಫುಲ್​ ಟ್ರೀಟ್

ಬೆಂಗಳೂರು: ಎಂಟರ್​​ಟೈನ್​ಮೆಂಟ್​​ ಅಂದ್ರೆ ಆರ್​​ಸಿಬಿ, ಆರ್​​ಸಿಬಿ ಅಂದ್ರೆ ಎಂಟರ್​​ಟೈನ್​ಮೆಂಟ್​ ಅನ್ನೋ ಮಾತಿದೆ. ಐಪಿಎಲ್​ ಆರಂಭವಾಗೋದು ಮಾರ್ಚ್​ 22ಕ್ಕೆ. ಆರ್​​ಸಿಬಿ ಫಸ್ಟ್​ ಮ್ಯಾಚ್​ ಆಡೋದೂ ಅವತ್ತೆ. ಆದ್ರೆ, ಆರ್​​ಸಿಬಿ ಫ್ಯಾನ್ಸ್​ ಕಾತುರದಿಂದ ಕಾಯ್ತಿರೋದು ಮಾರ್ಚ್​​ 19ರ ಅನ್​ಬಾಕ್ಸ್​ ಇವೆಂಟ್​ಗೆ. ಯಾಕಂದ್ರೆ, ಅಸಲಿ ಟೂರ್ನಿ ಆರಂಭಕ್ಕೂ ಮುನ್ನವೇ ಜಬರ್ದಸ್ತ್​ ಎಂಟರ್​​ಟೈನ್​ಮೆಂಟ್​ ನೀಡಲು ಆರ್​ಸಿಬಿ ಸಜ್ಜಾಗಿದೆ.

ಐಪಿಎಲ್​ ಜಾತ್ರೆಯ ಫೀವರ್ ಕ್ರಿಕೆಟ್​ ಲೋಕದಲ್ಲಿ​​ ಜೋರಾಗ್ತಿದೆ. ಸೀಸನ್​​ 17ರ ಟ್ರೋಫಿ ಗೆಲ್ಲೋ ಕನವರಿಕೆಯಲ್ಲಿರೋ ಫ್ರಾಂಚೈಸಿಗಳು ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸ್ತಿವೆ. ಟೂರ್ನಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕಸರತ್ತು ಕೂಡ ಜೋರಾಗಿದೆ. ಒಂದೆಡೆ ಆಟಗಾರರು ಟೂರ್ನಿಗೆ ಸಿದ್ಧತೆ ಆರಂಭಿಸಿದ್ರೆ, ಇನ್ನೊಂದೆಡೆ ಮ್ಯಾನೇಜ್​ಮೆಂಟ್, ಟೂರ್ನಿಗೂ ಮುನ್ನವೇ​ ಫ್ಯಾನ್ಸ್​ಗೆ ಫುಲ್​ ​ಟ್ರೀಟ್​ ಕೊಡಲು ಸಜ್ಜಾಗಿದೆ.

ಅನ್​ಬಾಕ್ಸ್​​ ಇವೆಂಟ್​​ನಲ್ಲಿ ಮನರಂಜನೆಯ ಫುಲ್​ಮೀಲ್ಸ್​!

ಮಾರ್ಚ್​​ 19ಕ್ಕೆ ನಡೆಯೋ ಆರ್​​ಸಿಬಿ ಅನ್​ಬಾಕ್ಸ್​ ಇವೆಂಟ್​​ನಲ್ಲಿ ಮನರಂಜನೆಯ ಬಾಡೂಟ ಫ್ಯಾನ್ಸ್​ಗೆ ಕಾದಿದೆ. ಇವೆಂಟ್​ನಲ್ಲಿ ಇಂಟರ್​ ನ್ಯಾಷನಲ್​ ಡಿಜೆ, ಖ್ಯಾತ ಸಿಂಗರ್​​ ಅಲಾನ್​ ವಾಕರ್ ಅಭಿಮಾನಿಗಳನ್ನ ರಂಜಿಸಲು ಸಜ್ಜಾಗಿದ್ದಾರೆ. ಇಂಟರ್​​ನ್ಯಾಷನಲ್​ ಡಿಜೆ ಅಲಾನ್​ ವಾಕರ್​ ಮಾತ್ರವಲ್ಲ. ಚಿನ್ನಸ್ವಾಮಿ ಮೈದಾನದ ಮಿಡಲ್​ ಸ್ಟೇಜ್​ನಲ್ಲಿ ಕನ್ನಡಿಗ ರಘುದೀಕ್ಷಿತ್ ಹಾಡಿನ ಕಿಕ್ಕೇರಿಸಲಿದ್ದಾರೆ. ಕನ್ನಡದ ಹಾಡುಗಳಿಗೆ ಬ್ಯಾಂಡ್​​ ಬಜಾಯಿಸಲು ರಘು ದೀಕ್ಷಿತ್​​ ಟೀಮ್​ ಸಜ್ಜಾಗಿದೆ. ಇವರ ಜೊತೆಗೆ ಕನ್ನಡದ ಹೊಸ ತಲೆ ಮಾರಿನ ಮ್ಯೂಸಿಕ್​ ಬ್ಯಾಂಡ್​ಗಳೂ ಫ್ಯಾನ್ಸ್​ನ ರಂಜಿಸಲಿವೆ. ಬರ್ಫಿ ಇಂಡಿಯಾ ಹಾಗೂ ಕಚೇರಿ ಟೀಮ್​ಗಳೂ ಕೂಡ ಲೈವ್​ ಪರ್ಫಾಮೆನ್ಸ್​ಗೆ ರೆಡಿಯಾಗಿವೆ. ಇಷ್ಟೇ ಅಲ್ಲ ಹಿಪ್​ ಹಾಪ್​​​​ ಕಲಾವಿದ ಭ್ರೋಧಾ ವಿ ಹಾಗೂ ಬಾಲಿವುಡ್​ ಸಿಂಗರ್​ ನೀತಿ ಮೋಹನ್​ ಕೂಡ ಪ್ರದರ್ಶನ ನೀಡಲಿದ್ದಾರೆ. ಒಟ್ಟಿನಲ್ಲಿ, ಟೂರ್ನಿ ಆರಂಭಕ್ಕೂ ಮುನ್ನವೇ ಆರ್​​ಸಿಬಿ ಫ್ರಾಂಚೈಸಿ ಫ್ಯಾನ್ಸ್​ಗೆ ಭರ್ಜರಿ ಎಂಟರ್​ಟೈನ್​​ಮೆಂಟ್​ ಕೊಡಲು ಸಖತ್​ ಪ್ಲಾನ್​ ರೂಪಿಸಿದೆ. ಹೀಗಾಗಿಯೇ ಫ್ಯಾನ್ಸ್​ ಐಪಿಎಲ್ ಟೂರ್ನಿಯ​ ಆರಂಭಕ್ಕಿಂತ ಈ ಇವೆಂಟ್​ಗಾಗಿ ಹೆಚ್ಚು ಕಾತುರದಿಂದ ಕಾಯ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನ್​ಬಾಕ್ಸ್​ ಇವೆಂಟ್​ಗೆ RCB ಭರ್ಜರಿ ಸಿದ್ಧತೆ; ಬ್ಯಾಂಡ್​ ಬಜಾಯಿಸಲು ರಘು ದೀಕ್ಷಿತ್ ಟೀಮ್​​​ ರೆಡಿ.. ಇನ್ನೂ ಏನೇನಿದೆ..?

https://newsfirstlive.com/wp-content/uploads/2024/03/CSK_RCB.jpg

Load More