/newsfirstlive-kannada/media/post_attachments/wp-content/uploads/2025/03/RCB-4.jpg)
ಐಪಿಎಲ್ ಜಾತ್ರೆಯ ಫೀವರ್ ಕ್ರಿಕೆಟ್ ಲೋಕದಲ್ಲಿ ಜೋರಾಗ್ತಿದೆ. ಸೀಸನ್ 18ರ ಟ್ರೋಫಿ ಗೆಲ್ಲೋ ಕನವರಿಕೆಯಲ್ಲಿರೋ ಫ್ರಾಂಚೈಸಿಗಳು ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸ್ತಿವೆ. ಹೊಸ ಸೀಸನ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಸರತ್ತು ಕೂಡ ಜೋರಾಗಿದೆ. ಒಂದೆಡೆ ಆಟಗಾರರು ಟೂರ್ನಿಗೆ ಸಿದ್ಧತೆ ಆರಂಭಿಸಿದ್ರೆ, ಇನ್ನೊಂದೆಡೆ ಮ್ಯಾನೇಜ್ಮೆಂಟ್, ಟೂರ್ನಿಗೂ ಮುನ್ನವೇ ಫ್ಯಾನ್ಸ್ಗೆ ಫುಲ್ ಟ್ರೀಟ್ ಕೊಡಲು ಸಜ್ಜಾಗಿದೆ. ಅದುವೇ ಅನ್ಬಾಕ್ಸ್ ಇವೆಂಟ್!
ಅನ್ಬಾಕ್ಸ್ ಇವೆಂಟ್ ಕಾರ್ಯಕ್ರಮಕ್ಕೆ ಯಾರೆಲ್ಲ ಬರ್ತಿದ್ದಾರೆ..?
- DJ ಟಿಮ್ ಟ್ರಪೆಟ್ (DJ Timmy Trumpet)
- ಸಂಜಿತ್ ಹೆಗ್ಡ್ (Sanjith Hegde)
- ಐಶ್ವರ್ಯ ರಂಗರಾಜನ್ ( Aishwarya Rangarajan)
- ಹನುಮಾನ್ ಕೈಂಡ್ (Hanumankind)
- All Ok
- DJ ಚೇತನ್ (DJ Chetan)
- ಎಂಜೆ ರಾಕೇಶ್ (MJ Rakesh)
- ಸವಾರಿ ಬ್ರ್ಯಾಂಡ್ (Savaari Band)
- ಬೆಸ್ಟ್ ಕೆಪ್ಟ್ ಸಿಕ್ರೆಟ್ (Best Kept Secret)
ಆರ್ಸಿಬಿ ಪ್ಲೇಯರ್ ಕೂಡ ಭಾಗಿ
ವಿರಾಟ್ ಕೊಹ್ಲಿ, ರಜತ್ ಪಾಟಿದ್, ಫಿಲ್ ಸಾಲ್ಟ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಲಿವಿಂಗ್ಸ್ಟೋನ್, ಶೆಫೆರ್ಡ್, ನವಾನ್ ತುಷಾರ, ಜಿತೇಶ್ ಶರ್ಮಾ, ಯಶ್ ದಯಾಳ್, ರಾಸಿಕ್ ಧಾರ್, ಜೊಕೊಬ್ ಬೆಥೆಲ್, ದೇವದತ್ ಪಡಿಕ್ಕಲ್
ನೇರ ಪ್ರಸಾರ
ಆರ್ಸಿಬಿ ಆ್ಯಪ್ನಲ್ಲಿ ಕಾರ್ಯಕ್ರಮವು ನೇರ ಪ್ರಸಾರ ನಡೆಯಲಿದೆ. ವೆಬ್ಸೈಟ್ನಲ್ಲಿ 99 ರೂಪಾಯಿ ಪೇ ಮಾಡಿ ನೋಡಬಹುದು. ಅಭಿಮಾನಿಗಳಿಗಾಗಿ ಯೂಟ್ಯೂಬ್ನಲ್ಲಿ ಕಾರ್ಯಕ್ರಮದ ವಿಶೇಷ ಸೆಗ್ಮೆಂಟ್ಗಳು ಸಿಗಲಿದೆ. ಇನ್ನು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ನೋಡೋದಾದ್ರೆ ಒಂದು ಟಿಕೆಟ್ನ ಬೆಲೆ 800 ರೂಪಾಯಿಯಿಂದ 5000 ರೂಪಾಯಿವರೆಗೆ ಇದೆ. ಮಧ್ಯಾಹ್ನ 3.30 ರಿಂದ ಕಾರ್ಯಕ್ರಮ ಆರಂಭ ಆಗಲಿದೆ.
ಇದನ್ನೂ ಓದಿ: ಕೊಹ್ಲಿ ಯಾಕೆ ಮತ್ತೆ ಕ್ಯಾಪ್ಟನ್ ಆಗಲಿಲ್ಲ -RCB ವಿಕೆಟ್ ಕೀಪರ್ ಜಿತೇಶ್ ಶರ್ಮಾ ಹೇಳಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ