/newsfirstlive-kannada/media/post_attachments/wp-content/uploads/2024/04/Will-Jacks-4.jpg)
ಇಂಡಿಯನ್ ಪ್ರೀಮಿಯರ್ ಲೀಗ್-2025 ಗಾಗಿ ಆಟಗಾರರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. 10 ತಂಡಗಳು ಕೆಲವೇ ಕೆಲವು ಆಟಗಾರರನ್ನು ಉಳಿಸಿಕೊಂಡು ಮಿಕ್ಕವರನ್ನು ರಿಲೀಸ್ ಮಾಡಿವೆ.
ಬಿಡುಗಡೆಗೊಂಡಿರುವ ಆಟಗಾರರು ಹರಾಜಿನಲ್ಲಿ ಲಭ್ಯವಿರಲಿದ್ದಾರೆ. ಬಜೆಟ್ ಮತ್ತು ನಿಯಮಗಳನ್ನು ಅವಲಂಬಿಸಿ ಪ್ರತಿ ತಂಡಕ್ಕೂ RTM ಕಾರ್ಡ್‌ಗಳ ವ್ಯವಸ್ಥೆ ಕೂಡ ಇದೆ. ಅದರ ಮೂಲಕ ಬಿಡುಗಡೆಯಾದ ಆಟಗಾರರನ್ನು ಮರಳಿ ತಂಡಕ್ಕೆ ಕರೆತರಬಹುದು.
ಅದರಂತೆ ಆರ್ಸಿಬಿ ಮೂವರನ್ನು ಉಳಿಸಿಕೊಂಡಿದ್ದು, ಮತ್ತೆ ಮೂವರನ್ನು ಆರ್ಟಿಎಂ ಕಾರ್ಡ್ ಮೂಲಕ ತಂಡಕ್ಕೆ ಮರಳಿ ಪಡೆಯಲಿದೆ. ಹಳೆಯ ಆಟಗಾರರನ್ನು ಮರಳಿ ಖರೀದಿಸಲು ಐಪಿಎಲ್ ಹರಾಜಿನಲ್ಲಿ ಇರುವ ವಿಶೇಷ ನಿಯಮ ಆರ್ಟಿಎಂ ಕಾರ್ಡ್ ಆಗಿದೆ. ಇದನ್ನು ಮೂರು ಆಟಗಾರರ ಮೇಲೆ ಬಳಸಬಹುದಾಗಿದೆ.
ಇದನ್ನೂ ಓದಿ:ಚಹಾಲ್ ಮತ್ತೆ ಆರ್ಸಿಬಿಗೆ ಎಂಟ್ರಿ.. ಮ್ಯಾನೇಜ್ಮೆಂಟ್ನಲ್ಲಿ ಭಾರೀ ಲೆಕ್ಕಾಚಾರ..!
ಆರ್ಸಿಬಿ ವಿರಾಟ್ ಕೊಹ್ಲಿ (21 ಕೋಟಿ), ರಜತ್ ಪಾಟಿದಾರ್ (11 ಕೋಟಿ) ಮತ್ತು ಯಶ್ ದಯಾಳ್ (5 ಕೋಟಿ)ಗೆ ಉಳಿಸಿಕೊಂಡಿದೆ. ಇದರ ಹೊರತಾಗಿ ಆರ್ಸಿಬಿ ಜೇಬಿನಲ್ಲಿ 83 ಕೋಟಿ ಬಜೆಟ್ ಇದೆ. ಇಷ್ಟು ಹಣದಲ್ಲಿ ಆರ್ಟಿಎಂ ಕಾರ್ಡ್ ಮೂಲಕ ಮೂವರನ್ನು ಮತ್ತೆ ಖರೀದಿ ಮಾಡಲಿದೆ.
ಕೆಲವು ವರದಿಗಳ ಪ್ರಕಾರ.. ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಯುವ ಬ್ಯಾಟ್ಸ್‌ಮನ್ ಮಹಿಪಾಲ್ ಲೊಮ್ರೋರ್ ಹಾಗೂ ಇಂಗ್ಲೆಂಡ್ ವಿಲ್ ಜಾಕ್ಸ್ ಅವರನ್ನು ಆರ್ಟಿಎಂ ನಿಯಮದ ಅಡಿಯಲ್ಲಿ ಮತ್ತೆ ತಂಡಕ್ಕೆ ಕರೆ ತರಲು ಸಿದ್ಧವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಪರ್ತ್ ಟೆಸ್ಟ್ಗೂ ಮುನ್ನವೇ ಬಿಗ್ ಶಾಕ್; ಮೂವರು ದಿಗ್ಗಜರಿಗೆ ಗಾಯ.. ಆಡೋದೇ ಡೌಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್