BREAKING: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತಕ್ಕೆ ಮೂವರು ಬಲಿ; 17ಕ್ಕೂ ಹೆಚ್ಚು ಮಂದಿ ಅಸ್ವಸ್ಥ

author-image
admin
Updated On
BREAKING.. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೂಕು ನುಗ್ಗಲು.. ಓರ್ವ RCB ಅಭಿಮಾನಿ ಬಲಿ
Advertisment
  • RCB ಸೆಲೆಬ್ರೇಷನ್‌ ನೋಡಲು ಲಕ್ಷ, ಲಕ್ಷ ಅಭಿಮಾನಿಗಳ ಆಗಮನ
  • ಕ್ರೀಡಾಂಗಣದ ಕಾಲ್ತುಳಿತಕ್ಕೆ 3 ಸಾವು, 17ಕ್ಕೂ ಅಧಿಕ ಮಂದಿ ಅಸ್ವಸ್ಥ
  • ಸ್ಟೇಡಿಯಂ ಒಳಗೆ ಪ್ರವೇಶ ಅಭಿಮಾನಿಗಳ ಮಧ್ಯೆ ನೂಕು ನುಗ್ಗಲು

ಐಪಿಎಲ್ ಚಾಂಪಿಯನ್ RCB ತಂಡದ ವಿಜಯೋತ್ಸವಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದುರಂತವೇ ನಡೆದಿದೆ. RCB ಸೆಲೆಬ್ರೇಷನ್ ನೋಡಲು ಸ್ಟೇಡಿಯಂಗೆ ಲಕ್ಷಾಂತರ ಜನರು ಮುಗಿಬಿದ್ದಿದ್ದಾರೆ. ಕ್ರೀಡಾಂಗಣಕ್ಕೆ ಎಂಟ್ರಿ ಕೊಡುವ ವೇಳೆ ನೂಕುನುಗ್ಗಲು ಉಂಟಾಗಿದ್ದು, ಮೂವರು ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, 17ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

publive-image

ಸ್ಟೇಡಿಯಂ ಒಳಗೆ ಪ್ರವೇಶ ಮಾಡಲು ಆರ್‌ಸಿಬಿ ಅಭಿಮಾನಿಗಳ ಮಧ್ಯೆ ನೂಕು ನುಗ್ಗಲು ಏರ್ಪಟ್ಟಿದೆ. ಕಾಲ್ತುಳಿತದಲ್ಲಿ ಸಿಲುಕಿ ಓರ್ವ ಸಾವನ್ನಪ್ಪಿದ್ರೆ, ಹಲವು ಯುವಕ, ಯುವತಿಯರು ಅಸ್ವಸ್ಥರಾಗಿದ್ದಾರೆ.

ಇದನ್ನೂ ಓದಿ: BREAKING.. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೂಕು ನುಗ್ಗಲು.. ಓರ್ವ RCB ಅಭಿಮಾನಿ ಬಲಿ 

ನೂಕುನುಗ್ಗಲಿನಲ್ಲಿ ಸಿಲುಕಿದ್ದ ಆರ್‌ಸಿಬಿ ಅಭಿಮಾನಿಗಳನ್ನ ರಕ್ಷಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಸುಮಾರು 17ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment