/newsfirstlive-kannada/media/post_attachments/wp-content/uploads/2025/06/RCB-Bengaluru.jpg)
IPL ಕಪ್ ಗೆದ್ದ ಕ್ಷಣದಿಂದಲೂ RCB ಅಭಿಮಾನಿಗಳ ಸೆಲೆಬ್ರೇಷನ್ ನಿಂತಿಲ್ಲ. RCB ಆಟಗಾರರು ಅಹ್ಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇಂದು ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವಕ್ಕೆ ಭರ್ಜರಿ ತಯಾರಿ ಮಾಡಲಾಗುತ್ತಿದೆ.
RCB ತಂಡಕ್ಕೆ ರಾಜ್ಯ ಸರ್ಕಾರ ಇಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಮಾಡಲು ತೀರ್ಮಾನ ಮಾಡಿದೆ. ಸಿಎಂ ಸಿದ್ದರಾಮಯ್ಯನವರು ಇಡೀ RCB ತಂಡದ ಆಟಗಾರರನ್ನು ಅಭಿನಂದಿಸುತ್ತಿದ್ದಾರೆ.
ಸರ್ಕಾರದ ಸನ್ಮಾನದ ಬಳಿಕ RCB ತಂಡ ನೇರವಾಗಿ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಲಿದೆ. ವಿಧಾನಸೌಧದಿಂದ ಚಿನ್ನಸ್ವಾಮಿವರೆಗೆ ಮೆರವಣಿಗೆಗೆ ಪ್ಲಾನ್ ಇತ್ತಾದರೂ ಈಗ ಪೆರೇಡ್ ಅನ್ನು ರದ್ದು ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಇಂದು ಆರ್‌ಸಿಬಿ ತಂಡದ ಮೆರವಣಿಗೆ ಇರಲ್ಲ.
ಇಂದು ಸಂಜೆ 5 ಗಂಟೆಗೆ RCB ತಂಡದ ಆಟಗಾರರು ಕ್ಲೋಸ್ಡ್ ಬಸ್ನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಲಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಡೀ ಆರ್‌ಸಿಬಿ ತಂಡಕ್ಕೆ ಮತ್ತೊಮ್ಮೆ ಸನ್ಮಾನ ಮಾಡಲಾಗುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ವಿಜಯೋತ್ಸವ ಕೂಡ ಆಚರಣೆ ಮಾಡಲಾಗುತ್ತಿದೆ.
RCB ವಿಜಯೋತ್ಸವದಲ್ಲಿ ಸ್ಟೇಡಿಯಂ ಒಳಗೆ ಹೋಗಲು ಎಲ್ಲರಿಗೂ ಅವಕಾಶ ಇರುವುದಿಲ್ಲ. ಟಿಕೆಟ್ ಮತ್ತು ಪಾಸ್ಗಳು ಹೊಂದಿದವರಿಗೆ ಮಾತ್ರ ಒಳಗೆ ಎಂಟ್ರಿ ನೀಡಲಾಗುತ್ತದೆ. ಇಂದು ಮಧ್ಯಾಹ್ನ 3ರಿಂದ ಸಂಜೆ 8ರವರೆಗೆ ಸ್ಟೇಡಿಯಂ ಸುತ್ತ ಅಭಿಮಾನಿಗಳ ಸಾಗರವೇ ಜಮಾಯಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: IPL ಟ್ರೋಫಿಗಾಗಿ ಪ್ರತಿ ಹೆಜ್ಜೆ ಹೆಜ್ಜೆಗೂ, ಇಂಚು ಇಂಚಿಗೂ ಶ್ರಮ.. ಕಿಂಗ್ ಕೊಹ್ಲಿ ಭಾವನಾತ್ಮಕ ಪೋಸ್ಟ್!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ವಿಜಯೋತ್ಸವದ ಹಿನ್ನೆಲೆಯಲ್ಲಿ ಇಂದು ಸಂಜೆ ರಾಜಭವನ, ವಿಧಾನಸೌಧ, ಕಾರ್ಪೋರೇಷನ್, ಎಂ.ಜಿ ರೋಡ್, ಬ್ರಿಗೇಡ್ ರೋಡ್, ರೆಸಿಡೆನ್ಸಿ ರಸ್ತೆ, ಶಿವಾಜಿನಗರ, ಕೆ.ಆರ್ ಸರ್ಕಲ್ ಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ.
ಮೆಟ್ರೋ ಬಳಸಲು ಪೊಲೀಸರ ಮನವಿ!
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭಾರೀ ಟ್ರಾಫಿಕ್ ಜಾಮ್ ಆಗುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಇಂದು ಸಂಜೆ ವೇಳೆ ಸಾರ್ವಜನಿಕರು ಅತಿ ಹೆಚ್ಚು ಮೆಟ್ರೋ ಹಾಗೂ ಸಾರಿಗೆ ಬಸ್‌ಗಳನ್ನು ಬಳಸಲು ಮನವಿ ಮಾಡಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 5ರಿಂದ 6ಗಂಟೆವರೆಗೆ ವಿಜಯೋತ್ಸವದ ಕಾರ್ಯಕ್ರಮ ನಿಗಧಿಯಾಗಿದೆ. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸಂಚಾರ ದಟ್ಟಣೆ ಆಗುವ ಸಾಧ್ಯತೆ ಇದೆ. ಕಬ್ಬನ್ ಪಾರ್ಕ್,
ವಿಧಾನಸೌಧ ಸುತ್ತಮುತ್ತಲಿನ ರಸ್ತೆ ಬಳಸದಂತೆ ಸೂಚನೆ ನೀಡಲಾಗಿದೆ. ವಾಹನಗಳ ಪಾರ್ಕಿಂಗ್ ಸಮಸ್ಯೆ ಆಗುವ ಹಿನ್ನೆಲೆ ಆದಷ್ಟೂ ಮೆಟ್ರೋ ಬಳಸಲು ಪೊಲೀಸರು ಸೂಚನೆ ನೀಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ