/newsfirstlive-kannada/media/post_attachments/wp-content/uploads/2025/06/RCB-31.jpg)
ಬೆಂಗಳೂರು: ಎಂ.ಚಿನ್ನಸ್ವಾಮಿಯಲ್ಲಿ ನಡೆದ ದುರಂತ ಸಂಬಂಧ ಕರ್ನಾಟಕ ಹೈಕೋರ್ಟ್ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಜೊತೆಗೆ ಐದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ. ಆ ಮೂಲಕ ಸರ್ಕಾರ ಹಾಗೂ ಆರ್ಸಿಬಿ ಮ್ಯಾನೇಜ್ಮೆಂಟ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.
ಅಂತೆಯೇ ಹಂಗಾಮಿ ಸಿಜೆ ವಿ.ಕಾಮೇಶ್ವರ ರಾವ್, ನ್ಯಾ.ಸಿ.ಎಂ. ಜೋಶಿ ನೇತೃತ್ವದ ನ್ಯಾಯಪೀಠ ಪಿಐಎಲ್ ಅರ್ಜಿಗಳ ವಿಚಾರಣೆ ನಡೆಸಿತು. ಬಳಿಕ ಎಜಿ ಹಾಗೂ ಸಂಬಂಧ ಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಹಾಜರಾಗುವಂತೆ ಸೂಚನೆ ನೀಡಿದೆ. ಘಟನೆಯ ಬಗ್ಗೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕೇಳಿದೆ. ಮುಂದಿನ ವಿಚಾರಣೆಯನ್ನು ಮುಂದಿನ ಮಂಗಳವಾರಕ್ಕೆ ಮುಂದೂಡಿದೆ.
ಇದನ್ನೂ ಓದಿ: ಡರ್ಟಿ ಪಾಲಿಟಿಕ್ಸ್.. BJP, ಜೆಡಿಎಸ್ ಯಾವತ್ತಿದ್ರೂ ಡೆಡ್ ಬಾಡಿ ಮೇಲೆ ರಾಜಕೀಯ ಮಾಡ್ತಾರೆ; ಡಿಕೆ ಶಿವಕುಮಾರ್
ವಾದ-ಪ್ರತಿವಾದ
ಸರ್ಕಾರದ ಪರ AG ಶಶಿಕಿರಣ್ ಶೆಟ್ಟಿ ವಾದಿಸಿ.. ಸಮಸ್ಯೆ ಏನಾಗಿದೆ ಅದನ್ನು ಪರಿಗಣಿಸಿ ಕ್ರಮಕೈಗೊಳ್ಳಲಾಗಿದೆ. ಕೋರ್ಟ್ ಏನೇ ನಿರ್ದೇಶನ ನೀಡಿದರೂ ಕ್ರಮಕೈಗೊಳ್ಳಲು ಸರ್ಕಾರ ಸಿದ್ಧ. ವಿಜಯೋತ್ಸವ ಕಾರ್ಯಕ್ರಮಕ್ಕೆ ಪೊಲೀಸರು ಕ್ರಮಕೈಗೊಂಡಿದ್ದರು. ಒಟ್ಟು 1643 ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿತ್ತು. ಆ್ಯಂಬುಲೆನ್ಸ್ ಕೂಡ ನಿಯೋಜನೆ ಮಾಡಲಾಗಿತ್ತು. ಅಲ್ಲಿ ಸುಮಾರು 2 ಲಕ್ಷ ಜನ ಸೇರಿದ್ದರು. ಹೆಚ್ಚು ಜನ ಸೇರಿದ್ದರಿಂದ ಘಟನೆ ನಡೆದಿದೆ. ದುರ್ಘಟನೆಯಲ್ಲಿ 56 ಮಂದಿ ಗಾಯಗೊಂಡಿದ್ದಾರೆ. 15 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಜಿ ತಿಳಿಸಿದರು.
ಹೆಚ್ಚು ಜನ ಸೇರಿದ್ದರಿಂದ ಘಟನೆ..
ಈ ವೇಳೆ ಜಡ್ಜ್ ಮಧ್ಯಪ್ರವೇಶ ಮಾಡಿ ನಿನ್ನೆ ಕಾರ್ಯಕ್ರಮ ನಿರ್ವಹಣೆ ಮಾಡಿದ್ದು ಯಾರು ಅಂತಾ ಪ್ರಶ್ನಿಸಿದರು. ಅದಕ್ಕೆ ಆರ್ಸಿಬಿ ಮ್ಯಾನೇಜ್ಮೆಂಟ್ ಮತ್ತು ಡಿಎನ್ಎ ಎಂದು ಸರ್ಕಾರಿ ಪರ ವಕೀಲರು ಉತ್ತರಿಸಿದ್ದಾರೆ. ಹೆಚ್ಚು ಜನ ಸೇರಿದ್ದರಿಂದ ಘಟನೆ ನಡೆದಿದೆ. ಆಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ಮಾಡಲಾಗಿದೆ ಅಂತಾ ತಿಳಿಸಿದರು.
ಇದನ್ನೂ ಓದಿ: ವಯಸ್ಸು 50 ಆದರೆ ಏನಂತೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿವಾದಿತ ಸಂಸದೆ ಮೌಹಾ ಮೊಯಿತ್ರಾ..!
ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ಪ್ರತಿಕ್ರಿಯಿಸಿ.. ಚಿನ್ನಸ್ವಾಮಿ ಮೈದಾನದಲ್ಲಿ 21 ಗೇಟ್ಗಳಿದ್ದರೂ ಕೇವಲ 3 ಗೇಟ್ ಮಾತ್ರ ಓಪನ್ ಮಾಡಲಾಗಿತ್ತು ಅಂತಾ ಮಾಹಿತಿ ನೀಡಿದರು. ಅದಕ್ಕೆ ಎಜಿ ಪ್ರತಿವಾದಿಸಿ 21 ಗೇಟ್ಗಳನ್ನೂ ಓಪನ್ ಮಾಡಲಾಗಿತ್ತು. 2.5 ಲಕ್ಷ ಜನ ಸೇರಿದ್ರಿಂದ ಘಟನೆ ನಡೆದಿದೆ. ಈಗಾಗಲೇ ಆರ್ಸಿಬಿ ಹಾಗೂ ಡಿಎನ್ಎಗೆ ನೋಟೀಸ್ ನೀಡಲಾಗಿದೆ. ಎಫ್ಐಆರ್ ಮಾಡಿ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಪರಿಹಾರ ಕ್ರಮಗಳ ಬಗ್ಗೆ ಸರ್ಕಾರ ಕ್ರಮ ತಗೆದುಕೊಂಡಿದೆ ಎಂದು ಎಜಿ ತಿಳಿಸಿದರು.
ಇದೊಂದು ಕ್ರಿಮಿನಲ್ ನೆಗ್ಲಿಜೆನ್ಸ್
ಯಾಕೆ ಎರಡು ಕಡೆ ಕಾರ್ಯಕ್ರಮ ಆಯೋಜನೆ ಮಾಡಲಾಯ್ತು. ಏನೆಲ್ಲಾ ಕ್ರಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಅಂತ ನೀವು ಹೇಳುತ್ತಿಲ್ಲ. ಮೊದಲು ಟಿಕೆಟ್ ನೀಡಲಾಗುತ್ತೆ ಎಂದು ಅನೌನ್ಸ್ ಮಾಡಲಾಗಿತ್ತು. ನಂತರ ಉಚಿತ ಎಂಟ್ರಿ ಎಂದು ಒಳಗೆ ಬಿಟ್ಟಿದ್ದೇ ಘಟನೆಗೆ ಕಾರಣ. ಇದೊಂದು ಕ್ರಿಮಿನಲ್ ನೆಗ್ಲಿಜೆನ್ಸ್ ಎಂದು ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ವಾದಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಇದನ್ನೂ ಓದಿ: ಆರ್ಸಿಬಿಯಿಂದ ಪರಿಹಾರ ಘೋಷಣೆ.. ಮೃತರ ಕುಟುಂಬಕ್ಕೆ ಎಷ್ಟು ಲಕ್ಷ ಧನ ಸಹಾಯ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ