/newsfirstlive-kannada/media/post_attachments/wp-content/uploads/2025/06/RCB-29-1.jpg)
ಚಿನ್ನಸ್ವಾಮಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಭಾರೀ ಅನಾಹುತ ಆಗಿದೆ. ದುರಂತದಲ್ಲಿ ಮೃತರ ಸಂಖ್ಯೆ ಏರಿಕೆ ಆಗುತ್ತಲೇ ಇದ್ದು, ಮತ್ತಷ್ಟು ನೋವಿನ ಆತಂಕ ಎದುರಾಗಿದೆ.
ಕಾಲ್ತುಳಿತಕ್ಕೂ ಮೊದಲು ಆಗಿದ್ದೇನು..?
- ಸೆಲೆಬ್ರೇಷನ್ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಫ್ಯಾನ್ಸ್ ಬಂದಿದ್ದರು
- ಮೈದಾನದ ಒಳಪ್ರವೇಶ ವಿಚಾರದಲ್ಲಿ ಸಿಬ್ಬಂದಿ ನಡುವೆ ಕೆಲವು ಗೊಂದಲ ಆಗಿದೆ
- ಕೊನೆಗೆ ಸ್ಟೇಡಿಯಂ ತುಂಬಿದ ಬಳಿಕ ಮೈದಾನದ ಗೇಟ್ ಬಂದ್ ಮಾಡಲಾಗಿದೆ
- ಪಾಸ್ ಇಲ್ಲದೇ ಬಂದಿದ್ದ ಸಾವಿರಾರು ಅಭಿಮಾನಿಗಳನ್ನು ಹೊರಗೆ ನಿಲ್ಲಿಸಲಾಗಿತ್ತು
- ಆರ್ಸಿಬಿ ಅಭಿಮಾನಿಗಳಿಗೆ ಮೈದಾನದ ಒಳಗೆ ನಡೆಯುವ ಸಂಭ್ರಮ ನೋಡಬೇಕಿತ್ತು
- ಹೇಗಾದರೂ ಮಾಡಿ ಚಿನ್ನಸ್ವಾಮಿ ಮೈದಾನದ ಒಳಗೆ ಹೋಗಲೇಬೇಕು ಅಂತಾ ಕಸರತ್ತು
- ಕೊನೆ ಮೂಮೆಂಟ್ನಲ್ಲಿ ಅಭಿಮಾನಿಗಳು ಗೋಡೆ, ಕಾಂಪೌಂಡ್ ಹತ್ತಿದ್ದಾರೆ
- ಇನ್ನು ಕೆಲವು ಆರ್ಸಿಬಿ ಅಭಿಮಾನಿಗಳು ಪಾಸ್ ಇಲ್ಲದೇ ಒಳಗೆ ನುಗ್ಗಿದ್ದಾರೆ
- ಈ ವೇಳೆ ನೂಕುನುಗ್ಗಲು ಸಂಭವಿಸಿದೆ, ನೋಡು ನೋಡುತ್ತಿದ್ದಂತೆ ಕಾಲ್ತುಳಿತ
- ಪೊಲೀಸರು, ಮೈದಾನದ ಸಿಬ್ಬಂದಿಯ ನಿಯಂತ್ರಣಕ್ಕೆ ಸಿಗದೇ ಅನಾಹುತ ಆಗಿದೆ
ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ತಂಡವು ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು. ಇದೇ ಖುಷಿಯಲ್ಲಿ ರಾಜ್ಯ ಸರ್ಕಾರ ವಿಧಾನಸೌಧದ ಮುಂಭಾಗದಲ್ಲಿ ಆರ್ಸಿಬಿ ಟೀಂಗೆ ಹಾಗೂ ಟೀಂನ ಮ್ಯಾನೇಜ್ಮೆಂಟ್ಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿತ್ತು. ಇತ್ತ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ, ಫ್ಯಾನ್ಸ್ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿಗೆ ಅಪಾರ ಅಭಿಮಾನಿಗಳು ಹರಿದು ಬಂದಿದ್ದರು. ಆಗ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ನಡೆದು ಅನಾಹುತ ಆಗಿದೆ. ಕಾಲ್ತುಳಿತ ಸಂದರ್ಭದಲ್ಲಿ ಆಟಗಾರರು ವಿಧಾನಸೌಧದ ಕಾರ್ಯಕ್ರಮದಲ್ಲಿದ್ದರು.
ಇದನ್ನೂ ಓದಿ: ಪೊಲೀಸರು ಹೊಣೆಯಲ್ಲ, ಸರ್ಕಾರವೂ ಹೊಣೆಯಲ್ಲ -ಡಿ.ಕೆ.ಶಿವಕುಮಾರ್ ಏನಂದ್ರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ