newsfirstkannada.com

RCB vs CSK: ಮೊದಲ ದಿನವೇ ಗುರು-ಶಿಷ್ಯರ ಕಾಳಗ.. ಇವತ್ತಿನ ಪಂದ್ಯದಲ್ಲಿ ಗೆಲ್ಲೋದು ಯಾರು..?

Share :

Published March 22, 2024 at 10:02am

Update March 22, 2024 at 11:18am

  ಇಂದಿನಿಂದ ಕ್ರಿಕೆಟ್​ ಜಾತ್ರೆ ಐಪಿಎಲ್​ ಆರಂಭ

  ಮೊದಲ ಪಂದ್ಯದಲ್ಲೇ ದಿಗ್ಗಜರ ಮುಖಾಮುಖಿ

  ಧೋನಿ - ಕೊಹ್ಲಿ ಮುಖಾಮುಖಿಗೆ ಫ್ಯಾನ್ಸ್​ ಕಾತರ

ಮದಗಜಗಳ ನಡುವಿನ ಕಾದಾಟ ನೋಡಲು ಇಡೀ ವಿಶ್ವದ ಜನ ಕಾದು ಕುಳಿತಿದ್ದಾರೆ. ಗುರು-ಶಿಷ್ಯರ ನಡುವಿನ ಕಾಳಗದ ಕಿಚ್ಚು ಅಷ್ಟರಮಟ್ಟಿಗೆ ಕ್ರಿಕೆಟ್​ ಲೋಕವನ್ನೇ ಆವರಿಸಿಬಿಟ್ಟಿದೆ. ಕೊಹ್ಲಿ, ಕೊಹ್ಲಿ, ಧೋನಿ, ಧೋನಿ ಈ ಎರಡೇ ಹೆಸರುಗಳು ಇವತ್ತು ಚೆಪಾಕ್​ ಅಂಗಳದಲ್ಲಿ ಮಾರ್ದನಿಸಲಿದೆ.

ಇಂಡಿಯನ್​ ಪ್ರೀಮಿಯರ್​​ ಲೀಗ್​ ಕ್ರಿಕೆಟ್​ ಜಾತ್ರೆ ಅರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಬೌಂಡರಿ-ಸಿಕ್ಸರ್​​ಗಳ ಫುಲ್​ ಮೀಲ್ಸ್​​ ಸವಿಯಲು ವಿಶ್ವಾದ್ಯಂತ ಫ್ಯಾನ್ಸ್​​ ಸಜ್ಜಾಗಿದ್ದಾರೆ. ಈ ಸೀಸನ್​​ ಮೊದಲ ಪಂದ್ಯವೇ ಅಭಿಮಾನಿಗಳ ಕಾತುರತೆಯನ್ನ ಡಬಲ್​ ಮಾಡಿದೆ. ಯಾಕಂದ್ರೆ, ಬ್ಯಾಟಲ್​​ ಫೀಲ್ಡ್​ನಲ್ಲಿ ಮುಖಾಮುಖಿಯಾಗ್ತಿರೋದು ಎಮ್​.ಎಸ್​​ ಧೋನಿ ಅಂಡ್ ವಿರಾಟ್​ ಕೊಹ್ಲಿ.

ಮೊದಲ ಪಂದ್ಯದಲ್ಲೇ ದಿಗ್ಗಜರ ಮುಖಾಮುಖಿ

ಐಪಿಎಲ್​ ಸೀಸನ್​ 17ರ ಮೊದಲ ಪಂದ್ಯದಲ್ಲೇ ದಿಗ್ಗಜರ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಚೆಪಾಕ್​​ನಲ್ಲಿಂದು ಗುರು-ಶಿಷ್ಯರು ನಾನಾ ನೀನಾ ಫೈಟ್​ ನಡೆಸಲಿದ್ದಾರೆ. ಇದು CSK vs RCB ನಡುವಿನ ಪಂದ್ಯ ಅನ್ನೋದಕ್ಕಿಂತ ಇದು ಧೋನಿ vs ಕೊಹ್ಲಿ ನಡುವಿನ ಕಾಳಗ ಎಂದೇ ಬಿಂಬಿತವಾಗಿದೆ. ಧೋನಿ-ಕೊಹ್ಲಿ ​​ಎದುರುಬದುರಾಗ್ತಿರೋದ್ರ ಕ್ರೇಜ್​ ನೆಕ್ಸ್ಟ್​​ ಲೆವೆಲ್​ನಲ್ಲಿದೆ.

ಅಭಿಮಾನಿಗಳಿಗೆ ಕಾದಿದೆ ಸ್ಪೆಷಲ್​ ಟ್ರೀಟ್​..!

ಎಂ.ಎಸ್.ಧೋನಿ-ವಿರಾಟ್​ ಕೊಹ್ಲಿ. ಟೀಮ್​ ಇಂಡಿಯಾ ಫ್ಯಾನ್ಸ್​ ಎಂದಿಗೂ ಮರೆಯದ ಹೆಸರುಗಳಿವು. ಐಪಿಎಲ್​​ನಲ್ಲಂತೂ ಯಾವತ್ತೇ ಮುಖಾಮುಖಿಯಾದ್ರೂ, ಫ್ಯಾನ್ಸ್​ಗೆ ಫುಲ್​ ಮೀಲ್ಸ್​ ಫಿಕ್ಸ್​. ಜಿದ್ದಿಗೆ ಬಿದ್ದವರಂತೆ ಹೋರಾಡೋದ್ರಲ್ಲಿ ಇಬ್ಬರನ್ನ ಮೀರಿಸೋರಿಲ್ಲ. ಬಾಲರ್​​ಗಳನ್ನ ನಿರ್ಧಯವಾಗಿ ದಂಡಿಸಿ, ರನ್​ ಭರಾಟೆ ನಡೆಸೋದ್ರಲ್ಲಂತೂ ಇಬ್ಬರೂ ನಿಸ್ಸೀಮರು.! ಇಂದೂ ಕೂಡ ಫ್ಯಾನ್ಸ್​ ಕಾಯ್ತಿರೋದು ಈ ಕಾರಣಕ್ಕೆ.

ಕೂಲ್​ ಅಂಡ್ ಕಾಮ್​ ಧೋನಿ, ಅಗ್ರೆಸ್ಸಿವ್ ಕಿಂಗ್​​ ಕೊಹ್ಲಿ..!

ಪಂದ್ಯದ ನಡುವೆ ಎಷ್ಟೇ ಒತ್ತಡವಿರಲಿ ಧೋನಿ ವ್ಯಕ್ತಿತ್ವ ಬದಲಾಗಲ್ಲ. ಕೂಲ್​ ಅಂಡ್ ಕಾಮ್​ ಆಗಿಯೇ ಎಂತಾ ಪ್ರೆಶರ್​ ಇದ್ರೂ ಹ್ಯಾಂಡೆಲ್​ ಮಾಡ್ತಾರೆ. ಆದ್ರೆ, ವಿರಾಟ್​​​ ಕೊಹ್ಲಿಯದ್ದು ತದ್ವಿರುದ್ಧ ಅವತಾರ. ಫೀಲ್ಡ್​​ಗಿಳಿದ್ರೆ ಸಾಕು ಅಗ್ರೆಸ್ಸೀವ್​ ಅವತಾರದಲ್ಲಿ ಮಿಂಚು ಹರಿಸ್ತಾರೆ. ಅಪ್ಪಿತಪ್ಪಿ ಯಾರಾದ್ರೂ ಕೆಣಕಿದ್ರೆ, ಉಗ್ರರೂಪವನ್ನೇ ತಾಳ್ತಾರೆ. ಈ ಆ್ಯಕ್ಷನ್​​ – ರಿಯಾಕ್ಷನ್​​ಗಳು ಪಂದ್ಯಕ್ಕೇ ಟ್ವಿಸ್ಟ್​ ಕೊಟ್ಟು ಬಿಡ್ತವೆ.

‘ಭಲೇ ಜೋಡಿ’ ಪಾಲಿಗೆ ಇದೇ ಕೊನೆಯ ಐಪಿಎಲ್​?

ಟೂರ್ನಿಗೂ ಮುನ್ನವೇ ಕ್ಯಾಪ್ಟನ್ಸಿಗೆ ಗುಡ್​ ಬೈ ಹೇಳಿರುವ ಧೋನಿ, ಇದೇ ಕೊನೇ ಸೀಸನ್​ ಎಂಬ ಸೂಚನೆಯನ್ನ ಕೊಟ್ಟಿದ್ದಾರೆ. ಧೋನಿ ಗುಡ್​ ಬೈ ಹೇಳಿದ್ದೇ ಆದ್ರೆ, ವಿರಾಟ್​ ಕೊಹ್ಲಿ ಎದುರು ಆಡೋ ಕೊನೆಯ ಟೂರ್ನಿಯೂ ಇದೇ ಆಗಲಿದೆ. ಈ ಕಾರಣದಿಂದ ಕೂಡ ಕೊಹ್ಲಿ – ಧೋನಿ ಮುಖಾಮುಖಿ ಅಭಿಮಾನಿಗಳ ವಲಯದಲ್ಲಿ ಕುತೂಹಲವನ್ನ ಕೆರಳಿಸಿದೆ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB vs CSK: ಮೊದಲ ದಿನವೇ ಗುರು-ಶಿಷ್ಯರ ಕಾಳಗ.. ಇವತ್ತಿನ ಪಂದ್ಯದಲ್ಲಿ ಗೆಲ್ಲೋದು ಯಾರು..?

https://newsfirstlive.com/wp-content/uploads/2024/03/VIRAT_DHONI.jpg

Load More