newsfirstkannada.com

ಅಭಿಮಾನಿಗಳ ಅಭಯ, ಹೆಂಡತಿಯ ಸಪೋರ್ಟ್​.. ಹೋರಾಟದ ಹಾದಿ ನೆನೆದು ಕಣ್ಣೀರು ಹಾಕಿದ ಕೊಹ್ಲಿ

Share :

Published May 19, 2024 at 11:17am

Update May 19, 2024 at 11:19am

    ಪ್ಲೇ ಆಫ್​ನಲ್ಲಿ ಸ್ಥಾನ ಭದ್ರಪಡಿಸಿಕೊಂಡ ರಾಯಲ್ ಚಾಲೆಂಜರ್ಸ್

    ಚೆನ್ನೈ ವಿರುದ್ಧ ​ಜಯಭೇರಿ ಬಾರಿಸ್ತಿದ್ದಂತೆ ವಿರುಷ್ಕಾ ದಂಪತಿ ಕಣ್ಣೀರು

    27 ರನ್​ಗಳಿಂದ ಗೆಲುವಿನ ನಗೆ ಬೀರಿದ ಫಾಫ್ ಡು ಪ್ಲೆಸ್ಸಿಸ್​ ಸೇನೆ

ಇಂಡಿಯನ್​ ಪ್ರೀಮಿಯರ್​ ಲೀಗ್​ನ ನಿರ್ಣಾಯಕ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ರಾಯಲ್​ ಚಾಲೆಂಜರ್ಸ್ ಸೋಲಿಸಿ ಪ್ಲೇ ಆಫ್​ಗೆ ಹೋಗಿದೆ. KKR, RR ಹಾಗೂ SRH ಜೊತೆಗೆ ಆರ್​ಸಿಬಿಯು 4ನೇ ತಂಡವಾಗಿ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ಆರ್​ಸಿಬಿ ಜಯಭೇರಿ ಬಾರಿಸುತ್ತಿದ್ದಂತೆ ವಿರುಷ್ಕಾ ದಂಪತಿಯ ಕಣ್ಣಾಲೆಯಲ್ಲಿ ನೀರು ಜಿನುಗಿವೆ.

ಚೆನ್ನೈ ವಿರುದ್ಧ ಬೆಂಗಳೂರು ತಂಡ ಗೆಲ್ಲುತ್ತಿದ್ದಂತೆ ಇಡೀ ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲ ಸಂಭ್ರಮದಲ್ಲಿ ತೇಲಿತ್ತು. ಈ ವೇಳೆ ಮೈದಾನದಲ್ಲಿ ಸಹ ಆಟಗಾರರ ಜೊತೆ ಸೆಲೆಬ್ರೆಷನ್ ಮಾಡುತ್ತಿದ್ದ ವಿರಾಟ್​ ಕೊಹ್ಲಿ ಅಳುತ್ತಲೇ ಗೆಲುವನ್ನು ಸಂಭ್ರಮಸಿ ಖುಷಿ ಪಟ್ಟರು. ಇತ್ತ ಸ್ಟೇಡಿಯಂನ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದ ಕೊಹ್ಲಿ ಪತ್ನಿ ಅನುಷ್ಕಾ ಕೂಡ ಕಣ್ಣೀರು ಹಾಕಿ ಗೆಲುವನ್ನು ಅಪ್ಪಿಕೊಂಡಿದ್ದಾರೆ. ಸದ್ಯ ಈ ಇಬ್ಬರು ಕಣ್ಣೀರು ಹಾಕಿರುವ ವಿಡಿಯೋ, ಫೋಟೋಸ್​ಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿವೆ.

ಇದನ್ನೂ ಓದಿ: ವಿರುಷ್ಕಾ ದಂಪತಿ ಜೊತೆ ಫೋಟೋಗೆ ಪೋಸ್ ಕೊಟ್ಟ ಕನ್ನಡತಿ ಕ್ಯೂಟ್ ಶ್ರೇಯಾಂಕ ಪಾಟೀಲ್

ಟಾಸ್​ ಗೆದ್ದುಕೊಂಡ ಚೆನ್ನೈ ಕ್ಯಾಪ್ಟನ್ ಗಾಯಕ್ವಾಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಆರ್​ಸಿಬಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ನಿಗದಿತ 20 ಓವರ್​ಗಳಲ್ಲಿ ಆರ್​ಸಿಬಿ 5 ವಿಕೆಟ್​ ನಷ್ಟಕ್ಕೆ 219 ರನ್​ಗಳ ಟಾರ್ಗೆಟ್ ನೀಡಿತು. ಈ ಬೃಹತ್ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್​ ಆರಂಭದಲ್ಲಿ ದೊಡ್ಡ ಆಘಾತಕ್ಕೆ ಒಳಗಾಯಿತು.

ಇದನ್ನೂ ಓದಿ: ಚೆನ್ನೈಯನ್ನು ಮನೆಗೆ ಕಳುಹಿಸಿದ ಬೆಂಗಳೂರು.. RCBಯ ಮುಂದಿನ ಪಂದ್ಯ ಯಾರ ಜೊತೆ?

ನಾಯಕ ಗಾಯಕ್ವಾಡ್ ಡಕೌಟ್ ಆದರು. ಆದರೆ ರಹಾನೆ, ರಚಿನ್, ಜಡೇಜಾ, ಧೋನಿ ಉತ್ತಮ ಬ್ಯಾಟಿಂಗ್​ನಿಂದ ಗೆಲುವಿನ ಹತ್ತಿರಕ್ಕೆ ಕೊಂಡೋಯ್ಯುದಿದ್ದರು. ಆದರೆ ಆರ್​ಸಿಬಿ ಬೌಲರ್​ಗಳ ಮಾರಕ ದಾಳಿಯಿಂದ ಆರ್​ಸಿಬಿ 27 ರನ್​ಗಳಿಂದ ಗೆಲುವಿನ ನಗೆ ಬೀರಿತು. ಈ ವೇಳೆ ಸಂಭ್ರಮದಲ್ಲಿ ತೇಲಿದ ವಿರಾಟ್​ ಕೊಹ್ಲಿ ಅಳುತ್ತಲೇ ಓಡೋಡಿ ಬಂದರು. ಇನ್ನು ಗ್ಯಾಲರಿಯಲ್ಲಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಭಿಮಾನಿಗಳ ಅಭಯ, ಹೆಂಡತಿಯ ಸಪೋರ್ಟ್​.. ಹೋರಾಟದ ಹಾದಿ ನೆನೆದು ಕಣ್ಣೀರು ಹಾಕಿದ ಕೊಹ್ಲಿ

https://newsfirstlive.com/wp-content/uploads/2024/05/VIRAT_ANUSHKA_SHARMA-1.jpg

Load More