/newsfirstlive-kannada/media/post_attachments/wp-content/uploads/2025/03/RCB-4-1.jpg)
ಐಪಿಎಲ್2025ರ ಪಂದ್ಯಾವಳಿಗಳಲ್ಲಿ ಮೊದಲ ಬಾರಿಗೆ ಬದ್ಧ ವೈರಿಗಳಾದ ಚೆನ್ನೈ ಮತ್ತು ಬೆಂಗಳೂರು ಇಂದು ಚೆನ್ನೈ ಅಂಗಳದಲ್ಲಿ ಎದುರಾಬದುರು ಆಗಲಿವೆ. ಈ ಕಾದಾಟವನ್ನು ಕಣ್ತುಂಬಿಕೊಳ್ಳಲು ಉಭಯ ತಂಡದ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಚಿದಂಬರಂ ಮೈದಾನದ ಪಿಚ್ನ್ನು ಹಿಂದಿನ ಪಂದ್ಯಗಳಿಗೆ ಹೋಲಿಸಿ ನೋಡಿದರೆ ಇದು ಬೌಲರ್ ಸ್ನೇಹಿ ಪಿಚ್. ಬೌಲರ್ಗಳು ಹೆಚ್ಚು ಮೇಲುಗೈ ಸಾಧಿಸಿದ ಉದಾಹರಣೆಗಳು ಈ ಪಿಚ್ನಲ್ಲಿ ಕಂಡು ಬಂದಿವೆ. ಫೇಸರ್ಗಳು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಈ ಪಿಚ್ ಬ್ಯಾಟರ್ಸ್ಗಳಿಗೂ ಕೂಡ ಅಷ್ಟೇ ಅನಕೂಲಕರವಾಗಿದೆ. ಸ್ಪಿನ್ನರ್ಗಳು ಕಣಕ್ಕಿಳಿದಾಗ ಮತ್ತು ಎರಡನೇ ಇನ್ನಿಂಗ್ಸ್ ಆಡುವಾಗ ಪಿಚ್ನ ಮೇಲ್ಮೈ ಬದಲಾವಣೆಯಾಗಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಎರಡಕ್ಕೂ ಅನುಕೂಲಕರವಾಗುವ ಸಮತೋಲನವನ್ನು ಈ ಪಿಚ್ ಹೊಂದಿದೆ.
ಇದನ್ನೂ ಓದಿ: ಸಿಎಸ್ಕೆ ತಂಡದ ಈ ಬ್ರಹ್ಮಾಸ್ತ್ರ ಎದುರಿಸೋದೇ RCBಗೆ ಇವತ್ತು ದೊಡ್ಡ ಚಾಲೆಂಜ್..!
ಚೆನ್ನೈ ಮತ್ತು ಬೆಂಗಳೂರು ತಂಡಗಳ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂಬ ಆತಂಕವೊಂದು ಕಾಡುತ್ತಿದೆ. ಆದ್ರೆ ತಜ್ಞರು ಹೇಳುವ ಪ್ರಕಾರ ಹವಾಮಾನ ಪಂದ್ಯಕ್ಕೆ ಅನುಕೂಲಕರವಾಗಿಯೇ ಇದೆ. ಕೇವಲ ಶೇಕಡಾ 5 ರಷ್ಟು ಪಂದ್ಯಕ್ಕೆ ಅಡ್ಡಿಯಾಗುವ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸದ್ಯ ಚೆನ್ನೈನಲ್ಲಿ 28 ಡಿಗ್ರಿ ಸೆಲ್ಸಿಯಸ್ನಿಂದ 32 ಡಿಗ್ರಿಸೆಲ್ಸ್ನಷ್ಟು ತಾಪಮಾನವಿದೆ. ಈ ಒಂದು ಹವಾಮಾನ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: 13 ಬಾಲ್ನಲ್ಲಿ 5 ಸಿಕ್ಸರ್! ಪಂದ್ಯ ಸೋತರೂ SRH ಹುಡುಗನ ಬೊಂಬಾಟ್ ಬ್ಯಾಟಿಂಗ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್