newsfirstkannada.com

ಕೊನೆ ಓವರ್ ರಣರೋಚಕ​.. ಈ ಸ್ಟಾರ್​ ಬ್ಯಾಟರ್​ ಔಟ್​ ಆಗಿದ್ದೆ RCBಗೆ ಬಿಗ್​ ಟರ್ನಿಂಗ್​ ಪಾಯಿಂಟ್

Share :

Published May 19, 2024 at 12:32pm

    ಸಿಕ್ಸರ್​ ಸಿಡಿಸೋ ಬರದಲ್ಲಿ ವಿಕೆಟ್ ಒಪ್ಪಿಸಿದ ಎಂ.ಎಸ್ ಧೋನಿ

    5 ಎಸೆತಗಳಲ್ಲಿ ಸಿಎಸ್​​ಕೆ ಕ್ವಾಲಿಫೈ ಆಗಲು 11 ರನ್​ ಅಗತ್ಯವಿತ್ತು

    ಪಂದ್ಯದಲ್ಲಿ ಜಡೇಜಾರ ವಿರೋಚಿತ ಹೋರಾಟ ವ್ಯರ್ಥ ಆಯಿತು

ಬ್ಯಾಟಿಂಗ್​ ಮಾತ್ರವಲ್ಲ.. ಬೌಲಿಂಗ್​ನಲ್ಲೂ ಆರ್​​ಸಿಬಿ ರಾಯಲ್​ ಆಟವಾಡಿತು. ಬಲಿಷ್ಠ ಚೆನ್ನೈ ತಂಡವನ್ನ ತವರಿನಂಗಳದಲ್ಲಿ ಯಶಸ್ವಿಯಾಗಿ ಕಟ್ಟಿಹಾಕ್ತು. ರಣರೋಚಕ ಹಂತದಲ್ಲಿ ಜಿದ್ದಿಗೆ ಬಿದ್ದು ಹೋರಾಡಿ ಗೆದ್ದು ಬೀಗಿತು. ಆರ್​​ಸಿಬಿ ಬೌಲರ್ಸ್​ VS CSK ಬ್ಯಾಟರ್ಸ್​ ನಡುವಿನ ಕಾದಾಟ ಹೇಗಿತ್ತು?.

ಸವಾಲಿನ ಟಾರ್ಗೆಟ್​ ನೀಡಿ ಡಿಫೆಂಡ್​ ಮಾಡಿಕೊಳ್ಳಲು ಕಣಕ್ಕಿಳಿದ ಆರ್​​ಸಿಬಿ ಮೊದಲ ಎಸೆತದಿಂದಲೇ ದರ್ಬಾರ್​ ನಡೆಸ್ತು. ಹೋಮ್​​ಗ್ರೌಂಡ್​ನಲ್ಲಿ ಚೆನ್ನೈ ಬಲಿಷ್ಠ ಬ್ಯಾಟಿಂಗ್​ ಶಕ್ತಿಯನ್ನ ಪುಡಿಗಟ್ಟಿತು. ಆರ್​​ಸಿಬಿಯ ಶಿಸ್ತಿನ ದಾಳಿಯ ಮುಂದೆ ಚೆನ್ನೈ ಸೂಪರ್​​ ಕಿಂಗ್ಸ್​ ಪಡೆ ಮಕಾಡೆ ಮಲಗ್ತು.

ಇದನ್ನೂ ಓದಿ: ಚೆನ್ನೈಯನ್ನು ಮನೆಗೆ ಕಳುಹಿಸಿದ ಬೆಂಗಳೂರು.. RCBಯ ಮುಂದಿನ ಪಂದ್ಯ ಯಾರ ಜೊತೆ?

ಮೊದಲ ಎಸೆತದಲ್ಲೇ ಕಮಾಲ್​​.. ಬಲೆಗೆ ಬಿದ್ದ ಋತುರಾಜ್​.!

ಟಾರ್ಗೆಟ್​ ಬೆನ್ನತ್ತಿದ ಚೆನ್ನೈ ಸೂಪರ್​ ಕಿಂಗ್ಸ್​ ಆರಂಭದಲ್ಲೇ ಎಡವಿತು. ಮೊದಲ ಎಸೆತದಲ್ಲೇ ಆರ್​​ಸಿಬಿ ಸಕ್ಸಸ್​​ನ ರುಚಿ ನೋಡಿತು. ಸಿಎಸ್​ಕೆ ನಾಯಕ ಋತುರಾಜ್​​​, ಮೊದಲ ಎಸೆತದಲ್ಲೇ ಮ್ಯಾಕ್ಸ್​ವೆಲ್​ ಸ್ಪಿನ್​ ಮೋಡಿಗೆ ಬಲಿಯಾದ್ರು. ಋತುರಾಜ್​ ಬೆನ್ನಲ್ಲೇ ಡ್ಯಾರಿಲ್​ ಮಿಚೆಲ್​ ಕೂಡ ಪೆವಿಲಿಯನ್​ ಸೇರಿದ್ರು.

ಕುಸಿದ ಸಿಎಸ್​ಕೆಗೆ ಬಲ ತುಂಬಿದ ರಹಾನೆ – ರವೀಂದ್ರ.!

19 ರನ್​ಗಳಿಸುವಷ್ಟರಲ್ಲಿ 2 ವಿಕೆಟ್​ ಕಳೆದುಕೊಂಡ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಆರಂಭದಲ್ಲೇ ಆಘಾತ ಎದುರಿಸಿತ್ತು. ಈ ವೇಳೆ ಕ್ರಿಸ್​ನಲ್ಲಿ ಜೊತೆಯಾದ ರಚಿನ್​ ರವೀಂದ್ರ, ಅಜಿಂಕ್ಯಾ ರಹಾನೆ ಸಾಲಿಡ್​ ಜೊತೆಯಾಟವಾಡಿದ್ರು. 41 ಎಸೆತಗಳಲ್ಲಿ ಈ ಜೋಡಿ 66 ರನ್​ ಕಲೆಹಾಕಿತು.

ರಹಾನೆ ಓಟಕ್ಕೆ ಬ್ರೇಕ್​ ಹಾಕಿದ ಲಾಕಿ ಫರ್ಗ್ಯುಸನ್​​.!

ಸಾಲಿಡ್​ ಫಾರ್ಮ್​ನಲ್ಲಿ ಬ್ಯಾಟಿಂಗ್​ ನಡೆಸ್ತಿದ್ದ ಅಜಿಂಕ್ಯಾ ರಹಾನೆ ಆಟಕ್ಕೆ ಲಾಕಿ ಫರ್ಗ್ಯುಸನ್​ ಬ್ರೇಕ್​ ಹಾಕಿದ್ರು. ರಹಾನೆ ಬೆನ್ನಲ್ಲೇ ರಚಿನ್​​ ರವೀಂದ್ರ, ರನೌಟ್​ಗೆ ಬಲಿಯಾದ್ರು. ಇವರಿಬ್ಬರ ಪತನದೊಂದಿಗೆ ಚೆನ್ನೈನ ರನ್​ಗಳಿಕೆಯ ವೇಗಕ್ಕೆ ಬ್ರೇಕ್​ ಬಿತ್ತು. ಆರ್​​ಸಿಬಿ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.

ಚಿನ್ನಸ್ವಾಮಿಯಲ್ಲಿ ನಡೆಯದ ದುಬೆ ದರ್ಬಾರ್​.!

ಚಿನ್ನಸ್ವಾಮಿ ಅಂಗಳದಲ್ಲಿ ಶಿವಂ ದುಬೆ ದರ್ಬಾರ್​ ನಡೆಯಲೇ ಇಲ್ಲ. ಸ್ಪೋಟಕ ಬ್ಯಾಟರ್​ ಆರ್​​ಸಿಬಿ ಬೌಲರ್ಸ್​ ಅಬ್ಬರದ ಮುಂದೆ ಮಂಕಾದ್ರು. 15 ಎಸೆತಗಳಲ್ಲಿ 7 ರನ್​ಗಳಿಸಿ ಔಟಾದ್ರು. ಇದೇ ಗೇಮ್​ ಟರ್ನಿಂಗ್​ ಪಾಯಿಂಟ್​ ಆಯ್ತು. ದುಬೆ ಬೆನ್ನಲ್ಲೇ ಮಿಚೆಲ್​ ಸ್ನಾಂಟ್ನೆರ್​​, ಕ್ಯಾಪ್ಟನ್​ ಫಾಫ್​ ಡುಪ್ಲೆಸಿ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದ್ರು.

ಧೋನಿ- ಜಡೇಜಾ ಜಬರ್ದಸ್ತ್​​​ ಜುಗಲ್​ಬಂದಿ.!

7ನೇ ವಿಕೆಟ್​​ಗೆ ಜೊತೆಯಾದ ಎಮ್​.ಎಸ್​ ಧೋನಿ, ರವೀಂದ್ರ ಜಡೇಜಾ ಸಂಕಷ್ಟದಲ್ಲಿದ್ದ ಸಿಎಸ್​ಕೆ ತಂಡಕ್ಕೆ ನೆರವಾದ್ರು. ಆರ್​​ಸಿಬಿ ಬೌಲರ್ಸ್​ಗಳ ಮೇಲೆ ಸವಾರಿ ನಡೆಸಿದ ಈ ಜೋಡಿ 27 ಎಸೆತಗಳಲ್ಲಿ 61 ರನ್​ ಕಲೆ ಹಾಕಿದ್ರು. ಸಾಲಿಡ್​ ಆಟವಾಡಿದ ಧೋನಿ 3 ಬೌಂಡರಿ, 1 ಸಿಕ್ಸರ್​​ ಸಿಡಿಸಿದ್ರು.

ಇದನ್ನೂ ಓದಿ: ವಿರುಷ್ಕಾ ದಂಪತಿ ಜೊತೆ ಫೋಟೋಗೆ ಪೋಸ್ ಕೊಟ್ಟ ಕನ್ನಡತಿ ಕ್ಯೂಟ್ ಶ್ರೇಯಾಂಕ ಪಾಟೀಲ್

ರಣರೋಚಕ ಹಂತದಲ್ಲಿ ಎಡವಿದ ಧೋನಿ..!

ಕೊನೆಯ ಓವರ್​ನಲ್ಲಿ ಪಂದ್ಯ ರಣರೋಚಕ ಘಟ್ಟ ತಲುಪಿತ್ತು. ಮೊದಲ ಎಸೆತದಲ್ಲೇ ಸಿಕ್ಸರ್​ ಸಿಡಿಸಿ ಧೋನಿ ಘರ್ಜಿಸಿದ್ರು. 5 ಎಸೆತಗಳಲ್ಲಿ ಸಿಎಸ್​​ಕೆ ಕ್ವಾಲಿಫೈ ಆಗಲು 11 ರನ್​ ಅಗತ್ಯವಿತ್ತು. ಈ ವೇಳೆ ಸಿಕ್ಸರ್​ ಸಿಡಿಸೋ ಭರದಲ್ಲಿ ಧೋನಿ ಔಟಾದ್ರು. ಧೋನಿಯ ವಿಕೆಟ್​ ಪಂದ್ಯಕ್ಕೆ ಟರ್ನಿಂಗ್​ ಪಾಯಿಂಟ್​ ಆಯ್ತು.

ರವೀಂದ್ರ ಜಡೇಜಾ ವಿರೋಚಿತ ಹೋರಾಟ ವ್ಯರ್ಥ.!

ಅಂತಿಮ ಓವರ್​ನ ಕೊನೆಯ 4 ಎಸೆತಗಳಲ್ಲಿ ಕೇವಲ ಒಂದು ರನ್​ ಮಾತ್ರಗಳಿಸಿದ ಸಿಎಸ್​​ಕೆ, ಪ್ಲೇ ಆಫ್​ ರೇಸ್​ನಿಂದ ಹೊರಬಿತ್ತು. 7 ವಿಕೆಟ್​ ನಷ್ಟಕ್ಕೆ 191 ರನ್​ಗಳಿಗೆ ಸಿಎಸ್​​ಕೆ ಆಟ ಅಂತ್ಯವಾಯ್ತು. ಅಜೇಯ 42 ರನ್​ ಸಿಡಿಸಿದ ಜಡೇಜಾರ ವಿರೋಚಿತ ಹೋರಾಟ ವ್ಯರ್ಥವಾಯ್ತು. 27 ರನ್​ಗಳ ಭರ್ಜರಿ ಗೆಲುವು ಸಾಧಿಸಿದ RCB ಪ್ಲೇ ಆಫ್​ಗೆ ರಾಯಲ್​ ಎಂಟ್ರಿ ಕೊಡ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊನೆ ಓವರ್ ರಣರೋಚಕ​.. ಈ ಸ್ಟಾರ್​ ಬ್ಯಾಟರ್​ ಔಟ್​ ಆಗಿದ್ದೆ RCBಗೆ ಬಿಗ್​ ಟರ್ನಿಂಗ್​ ಪಾಯಿಂಟ್

https://newsfirstlive.com/wp-content/uploads/2024/05/VIRAT_KOHLI_DHONI-2.jpg

Load More