ಚೆನ್ನೈ​ ಬತ್ತಳಿಕೆಯಲ್ಲಿ ಭಾರೀ ಬ್ರಹ್ಮಾಸ್ತ್ರ.. RCB ಮೇಲೆ ಪ್ರಯೋಗಿಸಲು ಧೋನಿ ಬಿಗ್ ಪ್ಲಾನ್!

author-image
Bheemappa
Updated On
ಚೆನ್ನೈ​ ಬತ್ತಳಿಕೆಯಲ್ಲಿ ಭಾರೀ ಬ್ರಹ್ಮಾಸ್ತ್ರ.. RCB ಮೇಲೆ ಪ್ರಯೋಗಿಸಲು ಧೋನಿ ಬಿಗ್ ಪ್ಲಾನ್!
Advertisment
  • ಧೋನಿ ಮಾಸ್ಟರ್ ಮೈಂಡ್​ನಿಂದ RCBಗೆ ಡೇಂಜರ್​.. ಡೇಂಜರ್​​
  • ಚೆಪಾಕ್​ನಲ್ಲಿ ರಾಯಲ್ ಚಾಲೆಂಜರ್ಸ್​ಗೆ ಇದುವೇ ಚಾಲೆಂಜ್.?​​
  • 2024 ಸೋಲಿನ ಪ್ರತೀಕಾರಕ್ಕೆ ಹೊಂಚು ಹಾಕಿದ ಚೆನ್ನೈ ಟೀಮ್

ಐಪಿಎಲ್​ ಅಖಾಡದಲ್ಲಿ ಸೌತ್ ಇಂಡಿಯನ್​ ಡರ್ಬಿಗೆ ಕೌಂಟ್​ಡೌನ್​ ಶುರುವಾಗಿದೆ. ಮುಂಬೈ ಇಂಡಿಯನ್ಸ್​ ಎದುರು ಗೆದ್ದು ಬೀಗಿರುವ ಚೆನ್ನೈ ಕಿಂಗ್ಸ್​ ಮುಂದಿನ ಪಂದ್ಯದಲ್ಲಿ ಆರ್​ಸಿಬಿ ಎದುರು ಗೆಲುವಿನ ಜಪ ಮಾಡ್ತಿದೆ. 2024ರ ಸೋಲಿನ ಪ್ರತೀಕಾರಕ್ಕೆ ಹೊಂಚು ಹಾಕಿದೆ. ಗೆಲುವಿಗಾಗಿ ಆನ್​ಫೀಲ್ಡ್​ನಲ್ಲಿ ಬ್ರಹಾಸ್ತ್ರದ ಪ್ರಯೋಗಕ್ಕೆ ಮುಂದಾಗುತ್ತಿದೆ.

RCB vs​ CSK ಐಪಿಎಲ್​​ನ ಮೋಸ್ಟ್​ ಎಕ್ಸೈಟಿಂಗ್​​​ ಮ್ಯಾಚ್. ಈ ಪಂದ್ಯಕ್ಕಿರುವ ಕ್ರೇಜ್​​​, ಮತ್ಯಾವ ಪಂದ್ಯಕ್ಕೂ ಇಲ್ಲ. ಈ ತಂಡಗಳ ನಡುವೆ ನಡೆಯೋದು ಪಂದ್ಯವೇ ಆಗಿದ್ರೂ, ಫ್ಯಾನ್ಸ್ ಮಾತ್ರ ಇದು ವಾರ್. ಐಪಿಎಲ್​ನ ಈ ಮೆಗಾ ಬ್ಯಾಟಲ್​​​​ಗೆ ಕೌಂಟ್​ಡೌನ್ ಶುರುವಾಗಿದೆ.

publive-image

ಮಾರ್ಚ್ 28ರಂದು ಚೆನ್ನೈನ ಚೆಪಾಕ್​ನಲ್ಲಿ ನಡೆಯಲಿರುವ ಹೈವೋಲ್ಟೆಜ್​ ಹಣಾಹಣಿ ಕಾವೇರುತ್ತಿದೆ. ಗೆಲುವಿಗಾಗಿ ತೆರೆಮರೆಯಲ್ಲೇ ತಂಡಗಳು ರಣತಂತ್ರಗಳನ್ನು ರೂಪಿಸ್ತಿವೆ. ಯಾವ ಟೀಮ್​ನ ವ್ಯೂಹ ಏನಾಗಿರುತ್ತೆ ಅನ್ನೋ ಲೆಕ್ಕಾಚಾರಗಳು ಜೋರಾಗಿದೆ. ಕೊಲ್ಕತ್ತಾದಲ್ಲಿ ಗೆದ್ದು ಬೀಗಿ ಆರ್​​ಸಿಬಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಗೆದ್ದ ಆ ಆತ್ಮವಿಶ್ವಾಸದಲ್ಲಿರೋ ರಾಯಲ್ ಚಾಲೆಂಜರ್ಸ್​ಗೆ ಚೆನ್ನೈನಲ್ಲಿ ಬಿಗ್ ಚಾಲೆಂಜ್ ಎದುರಾಗ್ತಿದೆ.

ಚೆನ್ನೈ ಸ್ಪಿನ್ ಟು ವಿನ್ ಸೂತ್ರ.. ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರ..!

ಕೊಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ಗೆದ್ದ ರಾಯಲ್ ಚಾಲೆಂಜರ್ಸ್​ಗೆ, ಚೆನ್ನೈನ ಚೆಪಾಕ್​ನಲ್ಲಿ ಸ್ಪಿನ್​ ಸವಾಲು ಎದುರಾಗಲಿದೆ. ಯಾಕಂದ್ರೆ. ಚೆಪಾಕ್​ನ ಸ್ಲೋ & ಲೋ ಟ್ರ್ಯಾಕ್​​ ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗಲಿದೆ. ಇಲ್ಲಿ ಸ್ಪಿನ್ನರ್​ಗಳೇ ಮ್ಯಾಚ್ ಡಿಸೈಡ್ ಮಾಡ್ತಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್​​ಗಳಿಗೆ ಈ ಪಿಚ್ ಅಗ್ನಿಪರೀಕ್ಷೆಯ ಕಣವಾಗಿದೆ. ಯಾಕಂದ್ರೆ, ಚೆನ್ನೈ ಬತ್ತಳಿಕೆಯಲ್ಲಿ ಸ್ಪಿನ್ ಬ್ರಹ್ಮಾಸ್ತ್ರಗಳಿವೆ.

ಸ್ಪಿನ್​​ ಜಾದೂಗಾರರೇ RCB ಬ್ಯಾಟರ್​​ಗಳಿಗೆ ಕಬ್ಬಿಣದ ಕಡಲೆ..!

ಋತುರಾಜ್ ಸಾರಥ್ಯದ ಚೆನ್ನೈ ಸೂಪರ್ ​ಕಿಂಗ್ಸ್​ ತಂಡದಲ್ಲಿ ಅನುಭವಿ ಸ್ಪಿನ್ನರ್​ಗಳ ದಂಡೇ ಇದೆ. ಆಫ್ ಸ್ಪಿನ್ನರ್​ ಆರ್.ಅಶ್ವಿನ್, ಲೆಫ್ಟ್​ ಆರ್ಮ್​ ಸ್ಪಿನ್ನರ್​​ ರವೀಂದ್ರ ಜಡೇಜಾ, ವ್ರಿಸ್ಟ್​ ಸ್ಪಿನ್ನರ್ ನೂರ್ ಅಹ್ಮದ್​​​ ಪ್ರಮಖ ಅಸ್ತ್ರಗಳಾಗಿದ್ದಾರೆ. ಇವ್ರಿಗೆ ಕಿವೀಸ್​ನ ಅಲ್​ರೌಂಡರ್ ರಚಿನ್ ರವೀಂದ್ರ ಸಾಥ್​ ಇದೆ. ಈಗಾಗಲೇ ಮೊದಲ ಪಂದ್ಯ ಮುಂಬೈ ಎದುರು ಇವ್ರು ಮ್ಯಾಜಿಕ್​​ ಮಾಡಿದ್ದಾಗಿದೆ. ಈಗ ಮುಂದಿನ ಟಾರ್ಗೆಟ್​ ಆರ್​​ಸಿಬಿ. ಈ ಸ್ಪಿನ್ನರ್ಸ್​ನ ಚೆಪಾಕ್​ನಲ್ಲಿ ಎದುರಿಸುವುದು ಆರ್​ಸಿಬಿ ಬ್ಯಾಟರ್ಸ್​ಗೆ ಸವಾಲಾಗಲಿದೆ.

ಚೆನ್ನೈನ ಚೆಪಾಕ್​​ನಲ್ಲಿ ಅಶ್ವಿನ್-ಜಡ್ಡು!

ಚೆಪಾಕ್​ನಲ್ಲಿ 209 ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್, 181 ವಿಕೆಟ್ ಪಡೆದಿದ್ದಾರೆ. 7.12 ಏಕಾನಮಿ ಕಾಯ್ದುಕೊಂಡಿದ್ದಾರೆ. ಆಲ್​​ರೌಂಡರ್ ಜಡೇಜಾ, 212 ಇನ್ನಿಂಗ್ಸ್​ಗಳಿಂದ 160 ವಿಕೆಟ್ ಉರುಳಿಸಿ 7.61ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ. ಈ ಪಿಚ್​ನ ಮರ್ಮವನ್ನ ಚೆನ್ನಾಗಿ ಅರಿತಿರುವ ಈ ಜೋಡಿ, ಆರ್​ಸಿಬಿಗೆ ಡೇಂಜರ್​.. ಡೇಂಜರ್​.

ಆರ್​ಸಿಬಿ ಪಾಲಿಗೆ ನೂರ್ ಅಹ್ಮದ್ ಆಗ್ತಾರಾ ಥ್ರೆಟ್..?

ಅಫ್ಘಾನ್​​​​ನ ನೂರ್ ಅಹ್ಮದ್, ಆರ್​ಸಿಬಿ ಪಾಲಿಗೆ ಬಿಗ್ ಥ್ರೆಟ್ ಆಗಬಲ್ಲರು. ಇತರೆ ಬೌಲರ್​ಗಳಿಗೆ ಹೋಲಿಸಿದ್ರೆ, ಯುನಿಕ್ ಬೌಲಿಂಗ್ ಸ್ಟೈಲ್ ಹೊಂದಿದ್ದಾರೆ. ಸಾಮಾನ್ಯ ಪಿಚ್​​ಗಳಲ್ಲೇ ಬ್ಯಾಟರ್ಸ್​ಗೆ ಸಖತ್​ ಕಾಟ ನೀಡೋ ನೂರ್ ಅಹ್ಮದ್, ಸ್ಪಿನ್ ಫ್ರೆಂಡ್ಲಿ ಪಿಚ್​ನಲ್ಲಿ ಮತ್ತಷ್ಟು ಆರ್ಭಟಿಸ್ತಾರೆ. ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಅದನ್ನ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಶತಕಕ್ಕೆ ಮೂರೇ 3 ರನ್​ ಬೇಕಿತ್ತು.. ಆದ್ರೂ ತಂಡಕ್ಕಾಗಿ ತ್ಯಾಗ ಮಾಡಿದ ಕ್ಯಾಪ್ಟನ್ ಶ್ರೇಯಸ್

publive-image

ಒಂದೆಡೆ ಚೆನ್ನೈ ಸೂಪರ್​ ಕಿಂಗ್ಸ್​ ಬತ್ತಳಿಕೆಯಲ್ಲಿ ಪ್ರಬಲ ಸ್ಪಿನ್​ ಅಸ್ತ್ರವಿದ್ರೆ, ಆರ್​​ಸಿಬಿ ಕ್ಯಾಂಪ್​ನಲ್ಲಿ ಸ್ಪಿನ್​ ಅಂದ್ರೆ ತಡಬಡಾಯಿಸೋ ಬ್ಯಾಟರ್​ಗಳೇ ಇರೋದು. ಬಿಗ್​ ಪ್ಲೇಯರ್​ಗಳಾದ ಫಿಲ್​ ಸಾಲ್ಟ್​, ಲಯಾಮ್​ ಲಿವಿಂಗ್​ಸ್ಟೋನ್​ ಸ್ಪಿನ್​ ಮುಂದೆ ಸುಲಭಕ್ಕೆ ಶರಣಾಗ್ತಾರೆ. ಜೇಕಬ್​ ಬೆತೆಲ್​ ಕೂಡ ಅಷ್ಟೇ. ಕಳೆದ ಇಂಡೋ-ಇಂಗ್ಲೆಂಡ್​ ಸರಣಿಯಲ್ಲಿ ಇದು ಜಗಜ್ಜಾಹೀರಾಗಿದೆ.

ಚೆಪಾಕ್​ನಲ್ಲಿ ಮತ್ತೆ ಸ್ಪಿನ್ನರ್ಸ್ ಆಗ್ತಾರಾ ಮ್ಯಾಚ್ ವಿನ್ನರ್ಸ್​..?

ಮುಂಬೈ ಎದುರಿನ ಚೆನ್ನೈ ಗೆಲುವಿಗೆ ಕಾರಣವೇ ಸ್ಪಿನ್ನರ್ಸ್​. ನೂರ್ ಅಹ್ಮದ್, ರವೀಂದ್ರ ಜಡೇಜಾ, ಅಶ್ವಿನ್​​ರ ಮ್ಯಾಜಿಕಲ್ ಸ್ಪೆಲ್​ಗೆ ಪತರಗುಟ್ಟಿದ್ದ ಮುಂಬೈ ಮಕಾಡೆ ಮಲಗಿತ್ತು. ಇದೀಗ ಮುಂಬೈ ಎದುರು ಅನುಸರಿಸಿದ್ದ ಸೂತ್ರವನ್ನೇ ಆರ್​ಸಿಬಿ ಎದುರು ಪ್ರಯೋಗಿಸಲು ಚೆನ್ನೈ ಸೂಪರ್ ಕಿಂಗ್ಸ್​ ಸನ್ನದ್ಧವಾಗಿದೆ. ಈ ಸ್ಪಿನ್​ ಮೆಜಿಶೀಯನ್​ಗಳ ಮ್ಯಾಜಿಕಲ್​ ಎಸೆತಗಳಿಗೆ ಉತ್ತರ ಕೊಟ್ಟರಷ್ಟೇ ಆರ್​​ಸಿಬಿ ಗೆಲ್ಲೋಕೆ ಸಾಧ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment