/newsfirstlive-kannada/media/post_attachments/wp-content/uploads/2025/05/RCB_CSK_TICKET_SALE.jpg)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಪಂದ್ಯದ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹಣ ಗಳಿಸಲು ಕೆಲವರು ಮುಂದಾಗಿರುತ್ತಾರೆ. ಇದೇ ರೀತಿ ದುಡ್ಡು ಮಾಡುತ್ತಿದ್ದ ನಾಲ್ವರು ಆರೋಪಿಗಳು ಸಿಸಿಬಿ (Central Crime Branch) ಪೊಲೀಸರ ಅತಿಥಿಗಳಾಗಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯದ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಆರ್ಸಿಬಿ- ಸಿಎಸ್ಕೆ ನಡುವಿನ ಪಂದ್ಯದ 32 ಟಿಕೆಟ್ಗಳು, ಮೊಬೈಲ್ಗಳು ಹಾಗೂ 1 ಲಕ್ಷ ರೂಪಾಯಿ ನಗದನ್ನು ಸೀಜ್ ಮಾಡಲಾಗಿದೆ.
ಇದನ್ನೂ ಓದಿ: RCB, ಸಿಎಸ್ಕೆ ಅಭಿಮಾನಿಗಳ ನಡುವೆ ಘರ್ಷಣೆ.. ಸ್ಟೇಡಿಯಂ ಬಳಿ ಅಸಲಿಗೆ ಆಗಿದ್ದೇನು?
ಈ ನಾಲ್ವರು ಆರೋಪಿಗಳು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಹೈವೋಲ್ಟೇಜ್ ಪಂದ್ಯದ ಟಿಕೆಟ್ಗಳನ್ನು ಬ್ಲಾಕ್ನಲ್ಲಿ ಮಾರಾಟ ಮಾಡುತ್ತಿದ್ದರು. ಕೇವಲ 1,200 ರೂಪಾಯಿ ಮೂಲ ಬೆಲೆ ಇರೋ ಟಿಕೆಟ್ಗಳನ್ನು ಬರೋಬ್ಬರಿ 10,000 ರೂಪಾಯಿಗೆ ಬ್ಲಾಕ್ನಲ್ಲಿ ಮಾರುತ್ತಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸುತ್ತಿದ್ದ ಸಿಸಿಬಿ ಡಿಸಿಪಿ ಅಕಾಯ್ ಅಕ್ಷಯ್ ಮಚ್ಚೀಂದ್ರ ಹಾಗೂ ಅವರ ತಂಡದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸ್ಟೇಡಿಯಂ ಕೌಂಟರ್ನಲ್ಲಿ ಟಿಕೆಟ್ ವಿತರಣೆ ಸಮಯದಲ್ಲಿ ಟಿಕೆಟ್ ಖರೀದಿ ಮಾಡುವ ನೆಪದಲ್ಲಿ ಆರೋಪಿಗಳು ಬರುತ್ತಿದ್ದರು. ಟಿಕೆಟ್ಗಳನ್ನು ಖರೀದಿ ಮಾಡಿ ಅವೇ ಟಿಕೆಟ್ಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು. ಸದ್ಯ ಬ್ಲಾಕ್ ಟಿಕೆಟ್ ದಂಧೆಕೋರರ ಬಂಧಿಸಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ