/newsfirstlive-kannada/media/post_attachments/wp-content/uploads/2025/05/RCB_CSK.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕಾದಾಟ ಎಂದರೆ ಕುತೂಹಲ ಹೆಚ್ಚು. ಫ್ಯಾನ್ಸ್ ವಾರ್ ಕೂಡ ಇದ್ದೇ ಇರುತ್ತೆ. ಇಂತಹ ಹೈವೋಲ್ಟೇಜ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಆದರೆ ಇದರ ನಡುವೆ ಪಂದ್ಯಕ್ಕೆ ಮಳೆ ಎಂಟ್ರಿ ಆಗುತ್ತಾ ಎನ್ನುವುದು ದೊಡ್ಡ ಪ್ರಶ್ನೆ.
ಆರ್ಸಿಬಿ ಹಾಗೂ ಚೆನ್ನೈ ನಡುವಿನ ಪಂದ್ಯ ಎಂದರೆ ಐಪಿಎಲ್ನ ಹೆಚ್ಚು ಹೆಚ್ಚು ಅಭಿಮಾನಿಗಳು ವೀಕ್ಷಣೆ ಮಾಡುತ್ತಾರೆ. ಭದ್ಧವೈರಿಗಳ ಕಾದಾಟದಲ್ಲಿ ಎರಡು ಕಡೆಯ ಆಟಗಾರರು ಗೆಲುವನ್ನೇ ಎದುರು ನೋಡುತ್ತಿರುತ್ತಾರೆ. ಈಗಾಗಲೇ ತವರಿನ ಪಿಚ್ನಲ್ಲಿ ಚೆನ್ನೈ ಅನ್ನು ಆರ್ಸಿಬಿ ಸೋಲಿಸಿ ಶಕ್ತಿ ಪ್ರದರ್ಶಿಸಿದೆ. ಈ ಸೇಡನ್ನು ಸಿಎಸ್ಕೆ ತೀರಿಸಿಕೊಳ್ಳುತ್ತಾ ಇಲ್ಲ, ಆರ್ಸಿಬಿನೇ ಮೇಲುಗೈ ಸಾಧಿಸುತ್ತಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಕಣ್ಣಿನ ಮೇಲ್ಭಾಗದಲ್ಲಿ 7 ಸ್ಟಿಚಸ್.. ಆದರೂ ಫೀಲ್ಡ್ಗೆ ಇಳಿದು ಧಮಾಕ ಸೃಷ್ಟಿಸಿದ ಪಾಂಡ್ಯ..!
ಇಂತಹ ಹೈವೋಲ್ಟೇಜ್ ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಂದ್ಯ ಆರಂಭವಾದ ಮೇಲೆ ಶೇಕಡಾ 40 ರಷ್ಟು ಮಳೆ ಬರುವ ಸೂಚನೆ ಇದೆ. ಗಂಟೆಗೆ 13 ಕಿ.ಮೀ ವೇಗದಲ್ಲಿ ನೈಋತ್ಯ ದಿಕ್ಕಿನಿಂದ ಗಾಳಿ ಬೀಸಲಿದೆ. ಶೇಕಡಾ 99 ರಷ್ಟು ಮೋಡ ಕವಿದ ವಾತಾವರಣ ಕೂಡ ಇರಲಿದೆ. ಹೀಗಾಗಿ ಆರ್ಸಿಬಿ ವರ್ಸಸ್ ಸಿಎಸ್ಕೆ ಪಂದ್ಯ ಕೊಂಚ ಮಳೆಯಿಂದ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.
ಇನ್ನು ಈ ಟೂರ್ನಿಯ ಆರಂಭದ 2ನೇ ಪಂದ್ಯದಲ್ಲೇ ಸಿಎಸ್ಕೆ ಅನ್ನು ಆರ್ಸಿಬಿ ಬಗ್ಗು ಬಡಿದಿದೆ. ಅದು ಬೇರೆ 17 ವರ್ಷದ ಬಳಿಕ ಎಂ.ಎ ಚಿದಂಬರಂ ಪಿಚ್ನಲ್ಲೇ ಚೆನ್ನೈ ತಂಡವನ್ನು ಆರ್ಸಿಬಿ 50 ರನ್ಗಳಿಂದ ಮಣಿಸಿ ವಿಜಯ ಪತಾಕೆ ಹಾರಿಸಿದೆ. ಅದರಂತೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಬೀಗಿದರೆ ಅಭಿಮಾನಿಗಳ ಪಾಲಿಗೆ ದೊಡ್ಡ ಬಹುಮಾನವೇ ಸರಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ