/newsfirstlive-kannada/media/post_attachments/wp-content/uploads/2024/05/VIRAT_KOHLI-4.jpg)
ಆರ್‌ಸಿಬಿ ಪ್ಲೇ ಆಫ್ಗೆ ಹೋಗಬೇಕು ಅಂದರೆ ಚೆನ್ನೈ ವಿರುದ್ಧದ ಪಂದ್ಯ ನಿರ್ಣಾಯಕವಾಗಿದೆ. ಸದ್ಯ ಆರ್‌ಸಿಬಿ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕ ಪಡೆದು 6ನೇ ಸ್ಥಾನದಲ್ಲಿದೆ. ಸತತ 5 ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಪ್ಲೇಆಫ್ ರೇಸ್ನಲ್ಲಿದೆ. ಆರ್‌ಸಿಬಿ ಮತ್ತು ಚೆನ್ನೈ ನಡುವೆ ಪ್ಲೇ ಆಫ್ ಡಿಸೈಡರ್ ಪಂದ್ಯ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು ಈ ಮೈದಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಮೈದಾನವಾಗಿದೆ ಎನ್ನಲಾಗಿದೆ.
ಬೆಂಗಳೂರು ಮತ್ತು ಚೆನ್ನೈ ಈ ಎರಡರಲ್ಲಿ ಯಾರು ಪ್ಲೇ ಆಫ್ಗೆ ಹೋಗ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದ್ದು ಅಭಿಮಾನಿಗಳಂತೂ ಈ ಪಂದ್ಯಕ್ಕಾಗಿ ಕಾದು ಕುಳಿತ್ತಿದ್ದಾರೆ. ಒಂದು ವೇಳೆ ಪಂದ್ಯ ನಡೆಯುವಾಗ ಮಳೆ ಬಂದರೆ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆದರೆ ಎಂಥಾ ಮಳೆ ಬಂದರೂ ಎಂ.ಚಿನ್ನಸ್ವಾಮಿ ಸ್ಟೇಡಿಯಂ ತಡೆದುಕೊಳ್ಳುವಂತ ಮೈದಾನವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯುತ್ತಮವಾದ ಒಳಚರಂಡಿ ವ್ಯವಸ್ಥೆ ಇದೆ.
Chinnaswamy Stadium has the best sub-air drainage and aeration system in the world♥️
Let's hope for the best✌🏻#RCBvCSK#CSKvRCB#RCBvsCSK@RCBTweetspic.twitter.com/cj5h4WIfkf— Ⓤನೌನ್_ಮಂದಿ💛❤️ (@unknown_trio) May 17, 2024
ನಾಳೆ ನಡೆಯುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮಳೆ ಬರುವ ಮುನ್ಸೂಚನೆ ಇದೆ ಎಂದು ಹೇಳಲಾಗುತ್ತಿದೆ. ಆದ್ರೆ ಧಾರಾಕಾರ ಮಳೆ ಬಂದರೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್ ಏರ್ ಡ್ರೈನೇಜ್ ವ್ಯವಸ್ಥೆ ಇದೆ. ಇನ್ನು ಮಳೆ ಸುರಿದರು ಮೈದಾನ ಬೇಗ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಮಳೆಯಿಂದ ಪ್ಲೇ ಆಫ್ ಪಂದ್ಯಕ್ಕೆ ಆದಷ್ಟು ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ. ಬಂದ ನೀರು ಬಂದಾಗೆ ಸಬ್ ಏರ್ ಡ್ರೈನೇಜ್ ವ್ಯವಸ್ಥೆ ಮೂಲಕ ಹೊರ ಹೋದರೆ ಮ್ಯಾಚ್ಗೆ ಯಾವುದೇ ಅಡ್ಡಿಯಾಗಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ