/newsfirstlive-kannada/media/post_attachments/wp-content/uploads/2024/05/RCB_RISHAB_SHETTY.jpg)
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂ​ನಲ್ಲಿ ನಡೆದ ಡು ಆರ್​ ಡೈ ಮ್ಯಾಚ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಿದ್ದವು. ರಣರೋಚಕ ಪಂದ್ಯದಲ್ಲಿ ಚೆನ್ನೈಯನ್ನು 27 ರನ್​ಗಳಿಂದ ಆರ್​ಸಿಬಿ ತಂಡ ಮಣಿಸಿ ಗೆಲುವಿನ ನಗೆ ಬೀರಿದೆ. ಇನ್ನು ಪಂದ್ಯ ನಡೆಯುವ ವೇಳೆ ಸ್ಟೇಡಿಯಂ ಗ್ಯಾಲರಿಯಲ್ಲಿ ಕೆರಿಬಿಯನ್ ದೈತ್ಯ ಕ್ರಿಕೆಟರ್​ ಕ್ರಿಸ್​ಗೇಲ್ ಜೊತೆ ಸ್ಯಾಂಡಲ್​ವುಡ್​ನ ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಚೆನ್ನೈ ವಿರುದ್ಧ ನಡೆದ ಹೈವೋಲ್ಟೇಜ್​ ಮ್ಯಾಚ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಪಂದ್ಯದ ವೇಳೆ ಯೂನಿವರ್ಸಲ್​ ಬಾಸ್​ ಕ್ರಿಸ್​ಗೇಲ್​ ಜೊತೆಯಾಗಿ ಕುಳಿತು ನಟ ರಿಷಬ್​ ಶೆಟ್ಟಿ ಮ್ಯಾಚ್​ ವೀಕ್ಷಣೆ ಮಾಡಿದ್ದಾರೆ. ರಿಷಬ್​ ಶೆಟ್ಟಿ ಕೂಡ ಆರ್​ಸಿಗೆ ಸಪೋರ್ಟ್ ಮಾಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಹೀಗಾಗಿ ರಿಷಬ್​ ಶೆಟ್ಟಿ ಮತ್ತು ಗೇಲ್ ಒಂದೇ ಗ್ಯಾಲರಿಯಲ್ಲಿ ಇದ್ದಿದ್ದರಿಂದ ಪರಸ್ಪರ ಕೈಕುಲುಕಿ ಬಳಿಕ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
It's history!!
My first match at stadium!!
See you at the top!
RCB❤️@RCBTweets#RCB#RCBians#IPL2024#RCBvCSKpic.twitter.com/2NqDPjrQQn— Rishab Shetty (@shetty_rishab)
It's history!!
My first match at stadium!!
See you at the top!
RCB❤️@RCBTweets#RCB#RCBians#IPL2024#RCBvCSKpic.twitter.com/2NqDPjrQQn— Rishab Shetty (@shetty_rishab) May 18, 2024
">May 18, 2024
ಸದ್ಯ ಆರ್​ಸಿಬಿಯ ಮಾಜಿ ಪ್ಲೇಯರ್​ ಕ್ರಿಸ್​ಗೇಲ್ ಹಾಗೂ ಸ್ಯಾಂಡಲ್​ವುಡ್​ ನಟ ರಿಷಬ್ ಶೆಟ್ಟಿ ಜೊತೆಯಾಗಿ ಕ್ಲಿಕ್ಕಿಸಿಕೊಂಡಿರೋ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದೇ ಫಸ್ಟ್​ ಟೈಮ್​ ನಾನು ಪಂದ್ಯ ನೋಡಲು ಸ್ಟೇಡಿಯಂಗೆ ಬಂದಿದ್ದು. ಆರ್​ಸಿಬಿ ಗೆದ್ದು ಇತಿಹಾಸ ಬರೆದಿದೆ ಎಂದು ರಿಷಬ್​ ಶೆಟ್ಟಿ ಬರೆದುಕೊಂಡಿದ್ದಾರೆ. ನೆಟ್ಟಿಗರು ಕೂಡ ವಿಧ ವಿಧವಾದ ಕಮೆಂಟ್​​ಗಳನ್ನು ಮಾಡುತ್ತಿದ್ದಾರೆ. ಇನ್ನು ಫೋಟೋದಲ್ಲಿ ರಿಷಬ್​ ಶೆಟ್ಟಿ ಕಪ್ಪು ಶರ್ಟ್​, ವೈಟ್​ ಪಂಚೆಯಲ್ಲಿ ಕಂಗೊಳಿಸಿದರೆ, ಕ್ರಿಸ್​ಗೇಲ್ ಆರ್​ಸಿಬಿ ಜೆರ್ಸಿಯಲ್ಲಿ ಮಿಂಚಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ