/newsfirstlive-kannada/media/post_attachments/wp-content/uploads/2025/04/KL_RAHUL_KOHLI.jpg)
2025ರ ಐಪಿಎಲ್ ಸೀಸನ್ 18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ- ಡೆಲ್ಲಿ ಕ್ಯಾಪಿಟಲ್ಸ್ ನಡುವೆ 24ನೇ ಪಂದ್ಯ ಇಂದು ನಡೆಯಲಿದೆ. ಬೇರೆ ಬೇರೆ ಪಿಚ್ಗಳಲ್ಲಿ ಭರ್ಜರಿ ಗೆಲುವು ಪಡೆಯುವ ಆರ್ಸಿಬಿ ತವರಿನಲ್ಲಿ ಮಾತ್ರ ಕೆಲವೊಮ್ಮೆ ಸೋಲುತ್ತದೆ. ಇದು ಆರ್ಸಿಬಿ ಫ್ಯಾನ್ಸ್ಗೆ ಬೇಸರದ ಸಂಗತಿ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಪರ್ಫಾಮೆನ್ಸ್ ಹೇಗಿದೆ ಎಂದರೆ..
ಸದ್ಯ ಈ ಐಪಿಎಲ್ನಲ್ಲಿ 3 ಪಂದ್ಯಗಳನ್ನು ಆಡಿರುವ ಡೆಲ್ಲಿ ಕ್ಯಾಪಿಟಲ್ಸ್ ಮೂರರಲ್ಲೂ ವಿಜಯ ಸಾಧಿಸಿ ಟಾಪ್ನಲ್ಲಿದೆ. ಆರ್ಸಿಬಿ 4 ಪಂದ್ಯಗಳನ್ನ ಆಡಿ ಒಂದರಲ್ಲಿ ಮಾತ್ರ ಸೋಲು ಕಂಡಿದೆ. ಅಕ್ಷರ್ ಪಟೇಲ್ ನೇತೃತ್ವದಲ್ಲಿ ಡೆಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಮ್ಯಾಚ್ ಆಡಿದಾಗೆಲ್ಲಾ ಹೆಚ್ಚು ಬಾರಿ ಬೆಂಗಳೂರು ತಂಡವೇ ಜಯಭೇರಿ ಬಾರಿಸಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ.
ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎರಡು ತಂಡಗಳು ಇದುವರೆಗೆ 31 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಆರ್ಸಿಬಿ 19 ಪಂದ್ಯಗಳಲ್ಲಿ ಗೆಲುವು ಪಡೆದಿದ್ರೆ, ಡೆಲ್ಲಿ ಟೀಮ್ ಕೇವಲ 11 ರಲ್ಲಿ ಮಾತ್ರ ಜಯವಾಗಿದೆ. ಈ ಅಂಕಿ ಅಂಶಗಳಲ್ಲಿ 12 ಪಂದ್ಯಗಳು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆದಿವೆ. ಈ 12 ರಲ್ಲಿಯೂ ಆರ್ಸಿಬಿಯೇ ಹೆಚ್ಚು ಸಲ ಗೆದ್ದಿದೆ. 7 ರಲ್ಲಿ ಆರ್ಸಿಬಿ ಜಯ ಗಳಿಸಿದ್ರೆ, ಡೆಲ್ಲಿ 4 ರಲ್ಲಿ ವಿನ್ ಆಗಿದೆ.
ಇದನ್ನೂ ಓದಿ:RCB ಜೊತೆ ರೋಹಿತ್ ಶರ್ಮಾ ಬ್ಯಾಟಿಂಗ್.. ಕಾಮೆಂಟರಿ ಮಾಡುವವರಿಗೂ ಬೇಸರನಾ, ಏನಂದ್ರು?
ಡೆಲ್ಲಿ ಕ್ಯಾಪಿಟಲ್ಸ್ ಜೊತೆ ತವರಿನ ಅಂಗಳದಲ್ಲಿ ಆರ್ಸಿಬಿ ಗೆಲ್ಲುವ ಫೇವರಿಟ್ ತಂಡ ಎನಿಸಿದರೂ ಮೊನ್ನೆ ಚಿನ್ನಸ್ವಾಮಿಯಲ್ಲಿ ಗುಜರಾತ್ ವಿರುದ್ಧ ಆರ್ಸಿಬಿ ಸೋಲು ಕಂಡಿದೆ. ಹೀಗಾಗಿ ಇಂದು ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಟೀಮ್ ಮೊದಲಿನಂತೆ ಈಗ ಇಲ್ಲ. ಅಕ್ಷರ್ ಪಟೇಲ್ ನೇತೃತ್ವದಲ್ಲಿ ಬಲಿಷ್ಠ ಆಟಗಾರರು ಇದ್ದಾರೆ. ಜೊತೆಗೆ ಕನ್ನಡದ ಮಣ್ಣಿನ ಮಗ ಕೆ.ಎಲ್ ರಾಹುಲ್ ಕೂಡ ಡೆಲ್ಲಿಯಲ್ಲಿದ್ದು ಚಿನ್ನಸ್ವಾಮಿಯ ಮೈದಾನದ ಕಣ ಕಣ ಕೂಡ ರಾಹುಲ್ಗೆ ಪರಿಚಯ ಇದೆ.
ಆರ್ಸಿಬಿ ಗೆಲ್ಲುವ ಪೇವರಿಟ್ ಟೀಮ್ ಎಂದು ಹೇಳುವುದಕ್ಕೂ ಇನ್ನೊಂದು ಅಂಶ ಕೂಡ ಇದೆ. ಕಳೆದ 5 ಮ್ಯಾಚ್ಗಳಲ್ಲಿ ಆರ್ಸಿಬಿಯೇ ಅಧಿಕ ಸಲ ಗೆಲುವು ಪಡೆದಿದೆ. 5 ಪಂದ್ಯಗಳಲ್ಲಿ ಡೆಲ್ಲಿ ಒಂದರಲ್ಲಿ ಮಾತ್ರ ಜಯ ಸಾಧಿಸಿದ್ರೆ, ಆರ್ಸಿಬಿ 4 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಹೀಗಾಗಿ ಚಿನ್ನಸ್ವಾಮಿಯಲ್ಲಿ ಆರ್ಸಿಬಿಯೇ ಕಿಂಗ್ ಎಂದು ಹೇಳಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ