ಆರ್​ಸಿಬಿ ವಿರುದ್ಧದ ಎಲ್ಲಾ ಪಂದ್ಯದಲ್ಲೂ ಸ್ಟಾರ್​ ಬ್ಯಾಟರ್​ ದರ್ಬಾರ್​​.. ರಜತ್ ಪಡೆಗೆ ಕಾಡಿದೆ ಆತನ ಭಯ..!

author-image
Ganesh
Updated On
RCBಯಲ್ಲಿ ಈ ಇಬ್ಬರ ಬ್ಯಾಟಿಂಗ್, ಬೌಲಿಂಗ್​ ಇಂಪಾರ್ಟೆಂಟ್​.. ಟ್ರೋಫಿ​ ಗೆಲ್ಲಲು ಇವರೇ ಕೀ ಪ್ಲೇಯರ್ಸ್.!
Advertisment
  • ಈ ಸೀಸನ್​ನಲ್ಲಿ ರಾಹುಲ್ 2.0 ಬ್ಯಾಟಿಂಗ್..!
  • ಆರ್​​ಸಿಬಿಗೆ ‘ಸ್ವೀಟ್​ ವಿಲನ್​’ ಆಗ್ತಾರಾ ರಾಹುಲ್​?
  • ರಾಹುಲ್ ಬ್ಯಾಟಿಂಗ್ ಸ್ಲಾಟ್ ಫಿಕ್ಸ್, ಅಬ್ಬರ ಶುರು..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮಿಂಚೋಕೆ ಕನ್ನಡಿಗ ಕೆ.ಎಲ್.ರಾಹುಲ್ ರೆಡಿಯಾಗಿದ್ದಾರೆ. ನಮ್ಮ ಹುಡುಗ, ನಮ್ಮ ತಂಡದ ವಿರುದ್ಧ ಅದು ನಮ್ಮ ಸ್ಟೇಡಿಯಮ್​ನಲ್ಲೇ ಅಂದರೂ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಸಾಲಿಡ್ ಫಾರ್ಮ್​​ನಲ್ಲಿರೋ ರಾಹುಲ್, ಆರ್​ಸಿಬಿಗೆ ವಿಲನ್ ಆಗಿ ಕಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ರಾಹುಲ್ 2.0 ಬ್ಯಾಟಿಂಗ್

ಲಕ್ನೋ ವಿರುದ್ಧದ ಪಂದ್ಯ ಮಿಸ್ ಮಾಡ್ಕೊಂಡಿದ್ದ ರಾಹುಲ್, ಹೈದರಾಬಾದ್ ವಿರುದ್ಧ ಕೇವಲ 15 ರನ್​ಗಳಿಸಿ ಭಾರೀ ನಿರಾಸೆ ಮೂಡಿಸಿದ್ರು. ಚೆನ್ನೈನಲ್ಲಿ ಯೆಲ್ಲೋ ಆರ್ಮಿಗೆ ಬೆವರಿಳಿಸಿದ ರಾಹುಲ್ 150ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ​ 77 ರನ್​ಗಳಿಸಿ ಮಿಂಚಿದ್ರು. ಆ ಪಂದ್ಯದಲ್ಲಿ ರಾಹುಲ್ ಅಬ್ಬರ ನೋಡಿದ್ರೆ ಅದು ನೆಕ್ಸ್ಟ್​​ ಲೆವೆಲ್ ಬ್ಯಾಟಿಂಗ್ ಆಗಿತ್ತು.

ಇದನ್ನೂ ಓದಿ: ದತ್ತು ಪುತ್ರ vs ಮನೆ ಮಗ.. ಚಿನ್ನಸ್ವಾಮಿಯಲ್ಲಿ ಇವತ್ತು ಆರ್​ಸಿಬಿ ಸ್ಪೆಷಲ್ ಪ್ಲಾನ್..!

publive-image

ಬ್ಯಾಟಿಂಗ್ ಸ್ಲಾಟ್ ಫಿಕ್ಸ್, ಅಬ್ಬರ ಶುರು

ಟೀಮ್ ಇಂಡಿಯಾದಲ್ಲೂ ಅಷ್ಟೇ, ಐಪಿಎಲ್​​​ನಲ್ಲೂ ಅಷ್ಟೇ. ರಾಹುಲ್ ಬ್ಯಾಟಿಂಗ್ ಸ್ಲಾಟ್ ಫಿಕ್ಸ್ ಇಲ್ಲ. ರಾಹುಲ್ ಎಲ್ಲಾ ಸ್ಲಾಟ್​​ಗಳಲ್ಲೂ ಬ್ಯಾಟ್ ಮಾಡುವಂತಹ ಚತುರ. ಈಗ ಡೆಲ್ಲಿ ಕ್ಯಾಪಿಟಲ್ಸ್​ ರಾಹುಲ್​ನ​ ಓಪನರ್​ ಸ್ಥಾನದಲ್ಲೇ ಮುಂದುವರೆಸೋ ಸಾಧ್ಯತೆ ಇದೆ. ಒಂದು ವೇಳೆ ರಾಹುಲ್​​ಗೆ ಇದೇ ಸ್ಲಾಟ್ ಫಿಕ್ಸ್ ಆದ್ರೆ ಕನ್ನಡಿಗನ ಅಬ್ಬರ ಶುರುವಾದಂತೆ.

RCB ವಿರುದ್ಧ ರಾಹುಲ್ ದರ್ಬಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ರಾಹುಲ್ ದರ್ಬಾರ್​​ ನಡೆಸಿದ್ದಾರೆ. 65ರ ಸರಾಸರಿಯಲ್ಲಿ ರಾಹುಲ್, 648 ರನ್​ಗಳಿಸಿದ್ದಾರೆ. 1 ಶತಕ ಮತ್ತು 3 ಅರ್ಧಶತಕಗಳನ್ನ ಸಿಡಿಸಿರುವ ರಾಹುಲ್, 144ರ ಬ್ಯಾಟಿಂಗ್ ಸ್ಟ್ರೇಕ್​ರೇಟ್​​ನಲ್ಲಿ ರನ್​ ಕಲೆ ಹಾಕಿದ್ದಾರೆ. ಆರ್​ಸಿಬಿ ವಿರುದ್ಧ ರಾಹುಲ್, ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಹೀಗಾಗಿ ಇವತ್ತು ರಾಹುಲ್ ಅಬ್ಬರ ನಡೆದರು ಅಚ್ಚರಿ ಇಲ್ಲ.

ಇದನ್ನೂ ಓದಿ: ಇವತ್ತಿನ RCB ಪಂದ್ಯಕ್ಕೆ ಮಳೆ ಬರುತ್ತಾ..? ಹೇಗಿರಲಿದೆ ಬೆಂಗಳೂರು ವಾತಾವರಣ..?

publive-image

ಚಿನ್ನಸ್ವಾಮಿಯಲ್ಲಿ ಮಿಂಚಿನ ಆಟ

ಬೆಂಗಳೂರಿನ ಚಿನ್ನಸ್ವಾಮಿ ಮೈದಾನ, ಕೆ.ಎಲ್.ರಾಹುಲ್​ಗೆ ಚಿರ ಪರಿಚಿತ. ಇಲ್ಲಿನ ಕಂಡೀಷನ್ಸ್, ಪಿಚ್ ಎಲ್ಲವೂ ರಾಹುಲ್​​ಗೆ ಕ್ಲಿಯರ್ ಆಗಿ ಗೊತ್ತು. ಹಾಗಾಗಿ ಚಿನ್ನಸ್ವಾಮಿಯಲ್ಲಿ ರಾಹುಲ್ ಯಾವುದೇ ಟೆನ್ಶನ್ ಇಲ್ಲದೇ ಬ್ಯಾಟ್ ಬೀಸಲಿದ್ದಾರೆ. ಈಗಾಗಲೇ ರಾಹುಲ್ ಈ ಮೈದಾನದಲ್ಲಿ 382 ರನ್​ಗಳಿಸಿದ್ದಾರೆ. 2 ಅರ್ಧಶತಕಗಳನ್ನೂ ಸಿಡಿಸಿ ಮಿಂಚಿದ್ದಾರೆ.

ನಮ್ಮ ಹುಡುಗನೇ ವಿಲನ್ ಆಗ್ತಾನಾ?

ಐಪಿಎಲ್ ಆಕ್ಷನ್​​ನಲ್ಲಿ ಆರ್​ಸಿಬಿ ಫ್ರಾಂಚೈಸಿ ರಾಹುಲ್​ನ ಖರೀದಿ ಮಾಡದೇ ಇರೋದು ಅವ್ರ ತಪ್ಪು. ಇಂದು ಆರ್​ಸಿಬಿ ವಿರುದ್ಧವೇ ಕಣಕ್ಕಿಳಿಯಲಿರುವ ರಾಹುಲ್, ನಮ್ಮ ಮೈದಾನದಲ್ಲಿ, ನಮ್ಮ ತಂಡಕ್ಕೆ ವಿಲನ್ ಆದ್ರೂ ಅಚ್ಚರಿ ಪಡಬೇಕಿಲ್ಲ. ಈ ಹಿಂದೆ ಆರ್​ಸಿಬಿ ವಿರುದ್ಧ ಉತ್ತಮ ಸಾಧನೆ ಮಾಡಿರುವ ರಾಹುಲ್, ಇಂದೂ ಸಹ ಸಾಲಿಡ್ ಪರ್ಫಾಮೆನ್ಸ್ ನೀಡುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: RCB ವಿರುದ್ಧದ ಪಂದ್ಯಕ್ಕೂ ಮೊದಲೇ ಡೆಲ್ಲಿ ಕ್ಯಾಪಿಟಲ್ಸ್​ಗೆ ಬಿಗ್ ಶಾಕ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment