RCB vs DC : ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ.. ಆರ್​ಸಿಬಿ ಪ್ಲೇ ಆಫ್​ ಕನಸಿಗೆ ಮಳೆ ಕಂಟಕ..!

author-image
Ganesh
Updated On
RCB: ಪ್ಲೇ ಆಫ್​ಗೆ ಹೋಗಲು ಆರ್​ಸಿಬಿಗಿರುವ ಕಠಿಣ   ಸವಾಲುಗಳಿವು! ಇದರಲ್ಲಿ ಪಾಸ್​ ಆದ್ರೆ ‘ಕಪ್​ ನಮ್ದೇ’
Advertisment
  • ಪ್ಲೇ-ಆಫ್ ಪ್ರವೇಶದ ಕನಸು ಕಾಣುತ್ತಿರುವ ಆರ್​ಸಿಬಿ
  • ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 7.30ರಿಂದ ಪಂದ್ಯ
  • ರೋಚಕ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗುವ ಆತಂಕ

ಪ್ಲೇ-ಆಫ್ ಕನಸು ಕಾಣುತ್ತಿರುವ ಆರ್​​ಸಿಬಿಗೆ ಇವತ್ತು ನಿರ್ಣಾಯಕ ದಿನ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫಾಫ್ ಹುಡುಗರು ಜಿದ್ದಾಜಿದ್ದಿನ ಹೋರಾಟ ನಡೆಸಲಿದ್ದಾರೆ. ಪ್ಲೇ-ಆಫ್​ ಪ್ರವೇಶ ಮಾಡಲು ಆರ್​ಸಿಬಿಗೆ ಸಣ್ಣ ಅವಕಾಶವೊಂದು ಇದೆ.

ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಅಂದರೆ ಇವತ್ತು ಗೆಲ್ಲಲೇಬೇಕಿದೆ. ಆದರೆ, ಬೆಂಗಳೂರಲ್ಲಿ ಮಳೆ ಬರುವ ಲಕ್ಷಣ ಕಾಣ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೋಡ ಕವಿದ ವಾತಾವರಣ ಇದೆ. ಅಲ್ಲಲ್ಲಿ ಚದುರಿದ ಮಳೆ ಬಂದರೂ ಬರಬಹುದು. ಇದರ ಮಧ್ಯೆ ವೈಟ್​​ಫೀಲ್ಡ್​ ಭಾಗದಲ್ಲಿ ಮಳೆ ಶುರುವಾಗಿದೆ. ಹೀಗಾಗಿ ಪಂದ್ಯ ನಡೆಯುವ ವೇಳೆ ಮಳೆ ಬಂದರೂ ಬರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ:ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು.. ಇವರ ದೇಹದಲ್ಲಿ ಹಂದಿ ಕಿಡ್ನಿ ಎಷ್ಟು ದಿನ ಕೆಲಸ ಮಾಡಿತ್ತು?

ಬೆಳಗ್ಗೆ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ.. ಕಳೆದ ಎರಡು ಮೂರು ದಿನಗಳಿಂದ ಕರ್ನಾಟಕದ ವಾತಾವರಣಗಳು ಬದಲಾಗಿದೆ. ರಾಜ್ಯದ ವಿವಿಧ ಭಾಗಗಲ್ಲಿ ಮಳೆಯ ತಂಪಾದ ಹನಿಯನ್ನು ಚಿಮುಕಿಸುತ್ತಿದ್ದು, ಬೆಂಗಳೂರಲ್ಲೂ ಇಂದು ಮಳೆ ಬರುವ ಸಾಧ್ಯತೆ ಇದೆ. ಮೇ 13ವರೆಗೂ ಬೆಂಗಳೂರಿಗೆ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ:ಮಟಮಟ ಮಧ್ಯಾಹ್ನವೇ ತಂಪೆರೆದ ಮಳೆರಾಯ.. ರಾಜ್ಯದ ಈ ಜಿಲ್ಲೆಯಲ್ಲಿ ಭರ್ಜರಿ ಮಳೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment