/newsfirstlive-kannada/media/post_attachments/wp-content/uploads/2025/04/RCB-1-1.jpg)
ಹೋಮ್ಗ್ರೌಂಡ್ ಚಿನ್ನಸ್ವಾಮಿಯಲ್ಲಿ ಧಮ್ದಾರ್ ಸ್ಟಾರ್ಟ್ ಪಡೆದ ಆರ್ಸಿಬಿ ಆ ಬಳಿಕ ದಿಢೀರ್ ಕುಸಿದುಬಿಡ್ತು. ಬೆಂಗಳೂರು ಬಾಯ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರೆ ಡೆಲ್ಲಿ ಬೌಲರ್ಸ್ ಮೆರೆದಾಡಿದ್ರು. 3.5ನೇ ಓವರ್ನಲ್ಲಿ ನಡೆದ ಆ ಒಂದು ಘಟನೆ ಇಡೀ ಪಂದ್ಯಕ್ಕೆ ಟ್ವಿಸ್ಟ್ ನೀಡಿತು.
ಹೋಮ್ಗ್ರೌಂಡ್ನಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ಆರ್ಸಿಬಿಗೆ ಬೊಂಬಾಟ್ ಆರಂಭ ಸಿಗ್ತು. ಮೊದಲ ಓವರ್ನಲ್ಲಿ ಎಚ್ಚರಿಕೆಯ ಆಟವಾಡಿದ ಫಿಲ್ ಸಾಲ್ಟ್ - ವಿರಾಟ್ ಕೊಹ್ಲಿ 2ನೇ ಓವರ್ನಿಂದ ಅಬ್ಬರಿಸಿದ್ರು. ಅಕ್ಷರ್ ಪಟೇಲ್ ಎಸೆದ 2ನೇ ಓವರ್ನಲ್ಲಿ 16 ರನ್ ಚಚ್ಚಿದ್ರು.
ಇದನ್ನೂ ಓದಿ: ತವರಲ್ಲಿ ಕೆ.ಎಲ್ ರಾಹುಲ್ ಬ್ಯಾಟಿಂಗ್ ಆರ್ಭಟ.. ಕನ್ನಡಿಗನಿಂದ RCBಗೆ ಭಾರೀ ಮುಖಭಂಗ, ಸೋಲು
3ನೇ ಓವರ್ನಲ್ಲಂತೂ ಫಿಲ್ ಸಾಲ್ಟ್ ರೌದ್ರಾವತಾರ ತಾಳಿದ್ರು. ವೇಗಿ ಮಿಚೆಲ್ ಸ್ಟಾರ್ಕ್ಗೆ ನೀರು ಕುಡಿಸಿದ ಸಾಲ್ಟ್ 2 ಸಿಕ್ಸರ್, 2 ಬೌಂಡರಿ ಚಚ್ಚಿದ್ರು. ಒಂದೇ ಓವರ್ನಲ್ಲಿ ಬರೋಬ್ಬರಿ 30 ರನ್ಗಳು ಹರಿದು ಬಂದ್ವು. 3ನೇ ಓವರ್ ಅಂತ್ಯಕ್ಕೆ 53 ರನ್ ಚಚ್ಚಿದ್ದ ಆರ್ಸಿಬಿ ಪಂದ್ಯದ ಆರಂಭದಲ್ಲೇ ಮೇಲುಗೈ ಸಾಧಿಸಿತ್ತು. 3.5 ಎಸೆತದಲ್ಲಿ ಆದ ಒಂದು ಘಟನೆ ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಬಿಡ್ತು. ಕೊಹ್ಲಿ-ಫಿಲ್ ಸಾಲ್ಟ್ ನಡುವೆ ಆದ ಗೊಂದಲ ರನೌಟ್ನಲ್ಲಿ ಅಂತ್ಯವಾಯ್ತು. ಸಾಲಿಡ್ ಫಾರ್ಮ್ನಲ್ಲಿದ್ದ ಸಾಲ್ಟ್ 37 ರನ್ಗಳಿಸಿ ನಿರ್ಗಮಿಸಿದ್ರು.
ಸಾಲ್ಟ್ ನಿರ್ಗಮನದ ಬಳಿಕ ಪೆವಿಲಿಯನ್ ಪರೇಡ್ ಶುರುವಾಯ್ತು. ದೇವದತ್ ಪಡಿಕ್ಕಲ್ 1 ರನ್ಗಳಿಸಿ ನಿರ್ಗಮಿಸಿದ್ರೆ, ನೆಕ್ಸ್ಟ್ ಓವರ್ನಲ್ಲಿ ಕೊಹ್ಲಿ ಔಟಾದ್ರು. 22 ರನ್ಗಳಿಸಿದ್ದ ಕೊಹ್ಲಿ, ವಿಪ್ರಜ್ ನಿಗಮ್ಗೆ ಬಲಿಯಾದ್ರು. ಬಳಿಕ ಬ್ಯಾಟಿಂಗ್ಗೆ ಬಂದ ಲಿವಿಂಗ್ ಸ್ಟೋನ್ ಕೈಕೊಟ್ರು. 4 ರನ್ಗಳಿಸಿದ್ದ ಲಿವಿಂಗ್ಸ್ಟೋನ್ ಮೊಹೀತ್ ಶರ್ಮಾಗೆ ವಿಕೆಟ್ ಒಪ್ಪಿಸಿದ್ರು. ಬರೊಬ್ಬರಿ 11 ಎಸೆತ ಎದುರಿಸಿದ ಜಿತೇಶ್ ಶರ್ಮಾ ಜಸ್ಟ್ 3 ರನ್ಗಳಿಸಿ ನಿರ್ಗಮಿಸಿದ್ರು.
ಇದನ್ನೂ ಓದಿ: ಇದು ನನ್ನ ಮೈದಾನ, ನನ್ನ ಮನೆ -ಆರ್ಸಿಬಿ ಸೋಲಿಸಿ KL ರಾಹುಲ್ ಸ್ಫೋಟಕ ಹೇಳಿಕೆ..!
ಒಂದೆಡೆ ವಿಕೆಟ್ ಉರುಳಿದ್ರೂ ಮತ್ತೊಂದು ತುದಿಯಲ್ಲಿ ಕ್ರಿಸ್ ಕಚ್ಚಿ ನಿಂತಿದ್ದ ನಾಯಕ ರಜತ್ ಪಟಿದಾರ್ ಕೂಡ ಬಿಗ್ಸ್ಕೋರ್ಗಳಿಸಲಿಲ್ಲ. 25 ರನ್ಗಳಿಗೆ ಆಟ ಮುಗಿಸಿದ್ರು. ಕೃನಾಲ್ ಪಾಂಡ್ಯ 18 ರನ್ಗಳಿಸಿ ಔಟಾದ್ರು. ಅಂತಿಮ ಹಂತದಲ್ಲಿ ಟಿಮ್ ಡೇವಿಡ್ ಅಬ್ಬರಿಸಿದ್ರು.
19ನೇ ಓವರ್ನಲ್ಲಿ 17 ರನ್ ಚಚ್ಚಿದ ಟಿಮ್ ಡೇವಿಡ್, 20ನೇ ಓವರ್ನಲ್ಲಿ 19 ರನ್ಗಳಿಸಿದ್ರು. ಬೌಂಡರಿ-ಸಿಕ್ಸರ್ಗಳನ್ನ ಸಿಡಿಸಿ ಅಬ್ಬರಿಸಿದ ಟಿಮ್ ಡೇವಿಡ್ 4 ಸಿಕ್ಸರ್, 2 ಬೌಂಡರಿ ಚಚ್ಚಿದ್ರು. 20 ಎಸೆತಗಳಲ್ಲಿ 37 ರನ್ಗಳಿಸಿ ಮಿಂಚಿದ್ರು. ಅಂತಿಮವಾಗಿ 20 ಓವರ್ಗಳ ಅಂತ್ಯಕ್ಕೆ ಆರ್ಸಿಬಿ 7 ವಿಕೆಟ್ ಕಳೆದುಕೊಂಡು 163ರನ್ಗಳಿಸಿತು. ಡೆಲ್ಲಿ ತಂಡಕ್ಕೆ 164 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿತು.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಸತತ ಎರಡನೇ ಸೋಲು.. ಕ್ಯಾಪ್ಟನ್ ಪಾಟೀದಾರ್ ಹೊಣೆ ಮಾಡಿದ್ದು ಯಾರನ್ನ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ