ತವರಲ್ಲಿ ಕ್ಯಾಪ್ಟನ್​ ರಜತ್​​ಗೆ ಪ್ರತಿಷ್ಠೆಯ ಪಂದ್ಯ.. ಡೆಲ್ಲಿ ಗೆಲುವಿನ ದಂಡಯಾತ್ರೆಗೆ ಬ್ರೇಕ್ ಹಾಕುತ್ತಾ RCB?

author-image
Bheemappa
Updated On
ಚಿನ್ನಸ್ವಾಮಿಯಲ್ಲಿ RCBಗೆ ಮತ್ತೆ ಕೈ ಕೊಟ್ಟ ಟಾಸ್​.. ರಜತ್ ಪಾಟಿದಾರ್​​ ನೇತೃತ್ವದ ಬೆಂಗಳೂರು ಟೀಮ್ ಹೇಗಿದೆ?
Advertisment
  • ಪಾಯಿಂಟ್ ಟೇಬಲ್​ನಲ್ಲಿ ಒಂದು ಸ್ಥಾನ ಹಿಂದೆ, ಮುಂದಿರುವ ತಂಡಗಳು
  • ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರೋ ಕ್ಯಾಪ್ಟನ್ ಅಕ್ಷರ್ ಪಟೇಲ್
  • ಈಗಾಗಲೇ ಒಂದು ಪಂದ್ಯ ಸೋತಿರುವ ಆರ್​ಸಿಬಿಗೆ ಇದು ಚಾಲೆಂಜ್.!

ಐಪಿಎಲ್​​ನ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ, ಚಿನ್ನಸ್ವಾಮಿ ಮೈದಾನ ಸಜ್ಜಾಗಿದೆ. ಇಂದು ಆರ್​ಸಿಬಿ ತಂಡಕ್ಕೆ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ. ಪಾಯಿಂಟ್ ಟೇಬಲ್​ನಲ್ಲಿ ನಂಬರ್.2 ಸ್ಥಾನದಲ್ಲಿರುವ ಡೆಲ್ಲಿ ತಂಡವನ್ನ ಸೋಲಿಸೋದು, ಬೆಂಗಳೂರು ತಂಡಕ್ಕೆ ಬಿಗ್ ಚಾಲೆಂಜ್. ಇಬ್ಬರು ಯಂಗ್ ಕ್ಯಾಪ್ಟನ್ಸ್​ ಬ್ಯಾಟಲ್ ನೋಡೋಕೆ, ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಸೋಲದ ಡೆಲ್ಲಿ ಕ್ಯಾಪಿಟಲ್ಸ್. ಕೊಲ್ಕತ್ತಾ, ಚೆನ್ನೈ, ಮುಂಬೈ ತಂಡಗಳ ವಿರುದ್ಧ ಗೆದ್ದು ಬೀಗಿರುವ ರಾಯಲ್ ಚಾಲೆಂಜರ್ಸ್​. ಇಂದು ಚಿನ್ನಸ್ವಾಮಿಯಲ್ಲಿ ಬೆಂಗಳೂರು- ಡೆಲ್ಲಿ ತಂಡಗಳಿಗೆ ಮಾತ್ರ ಪ್ರತಿಷ್ಠೆಯ ಪಂದ್ಯವಲ್ಲ, ಉಭಯ ತಂಡಗಳ ನಾಯಕರ ಪಾಲಿಗೂ, ಅತ್ಯಂತ ಮಹತ್ವದ ಪಂದ್ಯ. ಚಿನ್ನಸ್ವಾಮಿಯಲ್ಲಿ ಗೆದ್ದ ನಾಯಕನೇ, ಅಭಿಮಾನಿಗಳ ಪಾಲಿನ ರಿಯಲ್ ಹೀರೋ ಆಗಲಿದ್ದಾನೆ.

publive-image

ಹೊಸ ನಾಯಕರು, ಹೊಸ ತಂಡ, ಹೊಸ ಆಟ..!

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕರ ನೇಮಕದಿಂದ, ಡಿಫರೆಂಟ್ ಆಗಿ ಕಾಣ್ತಿದೆ. ಹೊಸ ನಾಯಕರು ತಂಡಕ್ಕೆ ಎಂಟ್ರಿ ಆಗ್ತಿದಂತೆ, ತಂಡದ ಲಕ್ ಕೂಡ ಬದಲಾಗಿದೆ. ಹೊಸ ತಂಡ, ಹೊಸ ಚೈತನ್ಯ, ಹೊಸ ಆಟ ಆಡ್ತಿರುವ ಆರ್​ಸಿಬಿ ಮತ್ತು ಡಿಸಿ, ಪ್ರಸಕ್ತ ಐಪಿಎಲ್​​ನಲ್ಲಿ ಬಿಂದಾಸ್ ಪ್ರದರ್ಶನ ನೀಡ್ತಿದೆ. ಸದ್ಯ ಡೆಲ್ಲಿ ಪಾಯಿಂಟ್ ಟೇಬಲ್​ನಲ್ಲಿ ನಂಬರ್.2 ಪ್ಲೇಸ್​​ನಲ್ಲಿದ್ರೆ, ಆರ್​ಸಿಬಿ 3ನೇ ಸ್ಥಾನದಲ್ಲಿದೆ.

ಆರಂಭದಲ್ಲಿ ಪಾಟಿದಾರ್, ಅಕ್ಷರ್​​​ ನಾಯಕತ್ವಕ್ಕೆ ವಿರೋಧ..!

ಆರ್​ಸಿಬಿ, ರಜತ್ ಪಾಟಿದಾರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್, ಅಕ್ಷರ್ ಪಟೇಲ್​​ನ ನೂತನ ಸಾರಥಿಯಾಗಿ ನೇಮಿಸಿದಾಗ, ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಯಾಗಿತ್ತು. ಇಬ್ಬರು ಅನಾನುಭವಿ ನಾಯಕರು. ಇಬ್ಬರಿಗೂ ನಾಯಕತ್ವದ ಬಗ್ಗೆ ಏನ್ ಗೊತ್ತು?. ಹೀಗೆ ಕ್ರಿಕೆಟ್ ಪಂಡಿತರು, ಪಾಟಿದಾರ್ ಮತ್ತು ಅಕ್ಷರ್ ಪಟೇಲ್​​ಗೆ ಸಾರಥ್ಯ ನೀಡೋದನ್ನ ವಿರೋಧಿಸಿದ್ರು. ಆದ್ರೀಗ ಈ ಇಬ್ಬರು, ಎಲ್ಲರ ಲೆಕ್ಕಾಚಾರ ಸುಳ್ಳಾಗಿಸಿದ್ದಾರೆ.

AWAY ಮ್ಯಾಚ್​​ಗಳಲ್ಲಿ ಪಾಟಿದಾರ್ ಬೊಂಬಾಟ್ ಕ್ಯಾಪ್ಟನ್ಸಿ..!

ಕೊಲ್ಕತ್ತಾ, ಚೆನ್ನೈ, ಮುಂಬೈ ತಂಡಗಳ ವಿರುದ್ಧ ರಾಯಲ್ ಚಾಲೆಂಜರ್ಸ್,​ AWAY ಮ್ಯಾಚ್​​ಗಳಲ್ಲಿ ಗೆದ್ದು ಬೀಗಿದೆ. ಪಾಟಿದಾರ್ ಈ ಮೂರೂ ಪಂದ್ಯಗಳಲ್ಲೂ, ಅತ್ಯಾದ್ಭುತವಾಗಿ ತಂಡವನ್ನ ಮುನ್ನಡೆಸಿದ್ದಾರೆ. ಅನುಭವಿ ನಾಯಕನಂತೆ ಆನ್​​ಫೀಲ್ಡ್​ನಲ್ಲಿ ಸ್ಟ್ರಾಟಜಿ, ಗೇಮ್​ ಪ್ಲಾನ್ ಮತ್ತು ಟ್ಯಾಕ್ಟಿಕ್ಸ್ ರೂಪಿಸಿ ತಂಡವನ್ನ ಗೆಲ್ಲಿಸಿದ್ದಾರೆ. ಬ್ಯಾಟಿಂಗ್​ನಲ್ಲೂ ಪಾಟಿದಾರ್ ಮಿಂಚಿ, ಬೆಸ್ಟ್ ಎಕ್ಸಾಂಪಲ್ ಸೆಟ್ ಮಾಡಿದ್ದಾರೆ.

ಪ್ರಸಕ್ತ ಐಪಿಎಲ್​ನಲ್ಲಿ ಅಕ್ಷರ್​​​​​​​​​​​​​​​​​​​ ಸೋಲಿಲ್ಲದ ಸರದಾರ..!

ಡೆಲ್ಲಿ ಕ್ಯಾಪಿಟಲ್ಸ್ ಕೂಡ ಆಡಿರೋ ಮೂರೂ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಲಕ್ನೋ ಸೂಪರ್​ಜೈಂಟ್ಸ್, ಸನ್​ರೈಸರ್ಸ್​ ಹೈದ್ರಾಬಾದ್ ಮತ್ತು ಚೆನ್ನೈ ಸೂಪರ್​ಕಿಂಗ್ಸ್​ ತಂಡಗಳನ್ನ ಮಣಿಸಿರುವ ಅಕ್ಷರ್​​ ಪಟೇಲ್ ಸಾರಥ್ಯದ ಡೆಲ್ಲಿ, ಪಾಯಿಂಟ್ ಟೇಬಲ್​ನಲ್ಲಿ ನಂಬರ್ 2 ಸ್ಥಾನದಲ್ಲಿದೆ. ಆಟದಿಂದಲೇ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯ ಫೇವರಿಟ್ಸ್ ಅಂತ ಗುರುತಿಸಿಕೊಂಡಿದೆ.

ಇದನ್ನೂ ಓದಿ:RCB ವಿರುದ್ಧದ ಪಂದ್ಯಕ್ಕೂ ಮೊದಲೇ ಡೆಲ್ಲಿ ಕ್ಯಾಪಿಟಲ್ಸ್​ಗೆ ಬಿಗ್ ಶಾಕ್..!

publive-image

ಇಬ್ಬರೂ ಕೂಲ್ ಕ್ಯಾಪ್ಟನ್ಸ್..! ಯಾರಾಗ್ತಾರೆ ಚಿನ್ನಸ್ವಾಮಿ ಚಾಣಾಕ್ಷ..?

ಇಂದು ಚಿನ್ನಸ್ವಾಮಿ ಚಾಲೆಂಜ್ ಗೆಲ್ಲೋದೇ, ಆರ್​ಸಿಬಿ ಮತ್ತು ಡೆಲ್ಲಿ ಮುಂದಿರೋ ಬಿಗ್ ಚಾಲೆಂಜ್. ಈಗಾಗಲೇ ಚಿನ್ನಸ್ವಾಮಿಯಲ್ಲಿ ಗುಜರಾತ್ ವಿರುದ್ಧ ಸೋತಿರುವ ಆರ್​ಸಿಬಿ, ತವರಿನಲ್ಲಿ ಗೆಲುವಿನ ಟ್ರ್ಯಾಕ್​ಗೆ ಮರಳೋಕೆ ತುದಿಗಾಲಲ್ಲಿ ನಿಂತಿದೆ. ಮತ್ತೊಂದೆಡೆ ಡೆಲ್ಲಿ, ಆರ್​ಸಿಬಿ ತವರಿನಲ್ಲೇ ಗೆದ್ದು, ಅಗ್ರ ಸ್ಥಾನದಲ್ಲಿ ಮುಂದುವರೆಯುವ ಲೆಕ್ಕಾಚಾರದಲ್ಲಿದೆ. ಆರ್​ಸಿಬಿ ಮತ್ತು ಡೆಲ್ಲಿ ಸೋಲು-ಗೆಲುವು, ಉಭಯ ತಂಡಗಳ ಕೂಲ್ ಕ್ಯಾಪ್ಟನ್ಸ್ ಕೈಯಲ್ಲಿದೆ.

ಇಂದು ರಜತ್ ಪಾಟಿದಾರ್​ಗೆ ತವರಿನಲ್ಲಿ ಪ್ರತಿಷ್ಠೆಯ ಪಂದ್ಯ. ಗುಜರಾತ್ ವಿರುದ್ಧ ಸೋಲನ್ನ ಅರಗಿಸಿಕೊಳ್ಳಲಾಗದ ಅಭಿಮಾನಿಗಳು, ಇಂದು ಚಿನ್ನಸ್ವಾಮಿಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸೋ, ಇಂದು ನಡೆಯೋ ಯಂಗ್ ಕ್ಯಾಪ್ಟನ್ಸ್​ ಬ್ಯಾಟಲ್​ನಲ್ಲಿ ಗೆಲ್ಲೋದ್ಯಾರು?.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment