/newsfirstlive-kannada/media/post_attachments/wp-content/uploads/2025/04/RCB_Tim_David.jpg)
ಇಂದಿನ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಉರುಳುತ್ತ ಹೋದರೂ 170 ರನ್ಗಳ ಸಾಧಾರಣ ಟಾರ್ಗೆಟ್ ಅನ್ನು ಗುಜರಾತ್ಗೆ ನೀಡಿದೆ. ಆಲ್ರೌಂಡರ್ ಲೈಮ್ ವಿಲಿಂಗ್ಸ್ಟನ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಆರ್ಸಿಬಿ ಈ ಗುರಿ ನೀಡಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡದ ನಾಯಕ ಶುಭ್ಮನ್ ಗಿಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಆರಂಭ ಚೆನ್ನಾಗಿ ಇರಲಿಲ್ಲ. ಆರಂಭದಲ್ಲಿ 1 ಓವರ್ 4 ಬಾಲ್ ಆಗಿದ್ದಾಗ ವಿರಾಟ್ ಕೊಹ್ಲಿ ಕೇವಲ 7 ರನ್ಗೆ ಕ್ಯಾಚ್ ಕೊಟ್ಟು ಔಟ್ ಆದರು. ದೇವದತ್ ಪಡಿಕ್ಕಲ್ 3 ಎಸೆತಗಳಲ್ಲಿ 1 ಬೌಂಡರಿ ಬಾರಿಸಿ ವಿಕೆಟ್ ಒಪ್ಪಿಸಿದರು.
ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಔಟ್ ಆಗಿದ್ದರೂ ಸಾಲ್ಟ್ ಅಬ್ಬರ ಮುಂದುವರೆದಿತ್ತು. 14 ರನ್ ಗಳಿಸಿ ಆಡುವಾಗ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ಗೆ ನಡೆದರು. ತಂಡದ ಸ್ಥಿತಿ ನೋಡಿಕೊಂಡು ರಜತ್ ಬ್ಯಾಟ್ ಬೀಸುತ್ತಾರೆ ಎಂದು ಊಹಿಸಲಾಗಿತ್ತು. ಆದರೆ 12 ಎಸೆತಗಳಲ್ಲಿ 2 ಬೌಂಡರಿಯಿಂದ 12 ರನ್ ಗಳಿಸಿದಾಗ ರಜತ್ ಪಾಟಿದಾರ್ ಎಲ್ಬಿ ಬಲೆಗೆ ಬಿದ್ದು ಹೊರ ನಡೆದರು.
ಆರ್ಸಿಬಿ ತಂಡದಲ್ಲಿ ವಿಕೆಟ್ಗಳು ಹೋಗುತ್ತಿದ್ದರೂ ಬ್ಯಾಟಿಂಗ್ನಲ್ಲಿ ಆರ್ಭಟಿಸುತ್ತಿದ್ದ ಲೈಮ್ ಲಿವಿಂಗ್ಸ್ಟನ್, ಗುಜರಾತ್ ಬೌಲರ್ಗಳನ್ನ ಮನಬಂದಂತೆ ಚಚ್ಚಿದರು. 40 ಎಸೆತಗಳನ್ನು ಎದುರಿಸಿದ ಲಿವಿಂಗ್ಸ್ಟನ್, 1 ಬೌಂಡರಿ, 5 ಅದ್ಭುತವಾದ ಸಿಕ್ಸರ್ಗಳಿಂದ 54 ರನ್ಗಳನ್ನು ಚಚ್ಚಿದರು. ಇನ್ನು ಆರ್ಸಿಬಿ ಪರವಾಗಿ ಆಡುತ್ತಿರುವ ಲಿವಿಂಗ್ಸ್ಟನ್, ಮೊದಲ ಹಾಫ್ಸೆಂಚುರಿ ಸಿಡಿಸಿದ್ದಾರೆ.
ಇದನ್ನೂ ಓದಿ: ತವರಲ್ಲಿ RCBಗೆ ಭಾರೀ ಅವಮಾನ.. ಸ್ಫೋಟಕ ಬ್ಯಾಟರ್ ಸಾಲ್ಟ್ ಕ್ಲೀನ್ ಬೋಲ್ಡ್
ಜಿತೇಶ್ ಶರ್ಮಾ 33 ರನ್ಗಳು ಆರ್ಸಿಬಿಗೆ ಉತ್ತಮವಾಗಿ ನೆರವಾದವು. 21 ಬಾಲ್ಗಳನ್ನು ಆಡಿದ ಜಿತೇಶ್ ಶರ್ಮಾ, 5 ಬೌಂಡರಿ, 1 ಸಿಕ್ಸರ್ನಿಂದ 33 ರನ್ ಬಾರಿಸಿದರು. ಆಲ್ರೌಂಡರ್ ಕೃನಾಲ್ ಪಾಂಡ್ಯ ಕೇವಲ 5ಕ್ಕೆ ಔಟ್ ಆದರು. ಕೊನೆಯಲ್ಲಿ ಟಿಮ್ ಡೇವಿಡ್ (32) ಅವರ ಆರ್ಭಟದ ಬ್ಯಾಟಿಂಗ್ನಿಂದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 170 ರನ್ಗಳ ಟಾರ್ಗೆಟ್ ಅನ್ನು ಗುಜರಾತ್ಗೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ