RCB ಪರ ಚೊಚ್ಚಲ ಪಂದ್ಯ ಆಡಲು ಕನ್ನಡಿಗ ರೆಡಿ.. ದೊಡ್ಡ ನಿರೀಕ್ಷೆಯಲ್ಲಿ ಕರ್ನಾಟಕದ ಅಭಿಮಾನಿಗಳು..!

author-image
Ganesh
Updated On
RCB ಪರ ಚೊಚ್ಚಲ ಪಂದ್ಯ ಆಡಲು ಕನ್ನಡಿಗ ರೆಡಿ.. ದೊಡ್ಡ ನಿರೀಕ್ಷೆಯಲ್ಲಿ ಕರ್ನಾಟಕದ ಅಭಿಮಾನಿಗಳು..!
Advertisment
  • ನಾಳೆ ಗುಜರಾತ್ ಟೈಟನ್ಸ್ ವಿರುದ್ಧ RCB ಪಂದ್ಯ
  • ಆರ್​ಸಿಬಿ ಪ್ಲೇಯಿಂಗ್-11 ಮೇಲೆ ಫ್ಯಾನ್ಸ್​ ಕಣ್ಣು
  • ರಾಯಚೂರಿನ ಹುಡುಗ ನಾಳೆ ಕಣಕ್ಕೆ ಇಳೀತಾರಾ?

ಐಪಿಎಲ್​​ನಲ್ಲಿ ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವೆ ಫೈಟ್ ನಡೆಯಲಿದೆ. ವಿಶೇಷ ಅಂದರೆ ನಾಳಿನ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.

ಸಂಜೆ 7.30ಕ್ಕೆ ಆರಂಭವಾಗುವ ಹೈ-ವೋಲ್ಟೇಜ್ ಪಂದ್ಯದ ಮೇಲೆ ಆರ್​ಸಿಬಿ ಅಭಿಮಾನಿಗಳು ದೊಡ್ಡ ನಿರೀಕ್ಷೆಗಳನ್ನು ಇಟ್ಕೊಂಡಿದ್ದಾರೆ. ಕನ್ನಡಿಗ ಮನೋಜ್ ಭಾಂಡಗೆ ಫ್ರಾಂಚೈಸಿ ಪ್ಲೇಯಿಂಗ್-11ನಲ್ಲಿ ಚಾನ್ಸ್ ನೀಡುತ್ತಾ ಎಂಬ ಕುತೂಹಲದಲ್ಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಾಳೆಯೇ RCB ಪಂದ್ಯ; ಟಿಕೆಟ್ ಬೇಕು ಅಂದ್ರೆ ಏನು ಮಾಡಬೇಕು..?

publive-image

ಮನೋಜ್ ಭಾಂಡಗೆ ಕರ್ನಾಟಕದ ಪ್ರತಿಭಾನ್ವಿತ ಆಲ್​ರೌಂಡರ್​. ಮಹಾರಾಜ ಟ್ರೋಫಿಯಲ್ಲಿ ಇವರು ನೀಡಿದ ಅಮೋಘ ಪ್ರದರ್ಶನ ಆರ್​ಸಿಬಿ ಗಮನ ಸೆಳೆದಿತ್ತು. ಮೆಗಾ ಹರಾಜಿನಲ್ಲಿ ಬೇಸ್ ಪ್ರೈಸ್ 30 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿದೆ.

2024ರ ಮಹಾರಾಜ ಟ್ರೋಫಿಯಲ್ಲಿ Mysuru Warriors ಪರ ಆಡಿದ್ದಾರೆ. ಮಿಡಲ್ ಆರ್ಡರ್​​ನಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದ ಇವರು ಉತ್ತಮ ಸ್ಕೋರ್​ ಮಾಡಿದ್ದರು. ಜೊತೆಗೆ ಕಠಿಣ ಪರಿಸ್ಥಿತಿಯಲ್ಲೂ ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿದ್ದರು. ಬೆಂಗಳೂರು ಬ್ಲಾಸ್ಟರ್ಸ್​​ ವಿರುದ್ಧ ಕೇವಲ 13 ಬಾಲ್​ನಲ್ಲಿ 44 ರನ್​​ ಚಚ್ಚವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. 2024ರ ಮಹಾರಾಜ ಟ್ರೋಫಿಯಲ್ಲಿ 213 ಸ್ಟ್ರೈಕ್​ರೇಟ್​ನಲ್ಲಿ ಆಡಿರುವ ಅವರು 292 ರನ್​​ ಗಳಿಸಿದ್ದರು. ಅಲ್ಲದೇ 8 ವಿಕೆಟ್ ಪಡೆದುಕೊಂಡಿದ್ದರು. ಆ ಮೂಲಕವೇ ಆರ್​ಸಿಬಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ನಾಳೆ ನಡೆಯುವ ಪಂದ್ಯದಲ್ಲಿ ರಾಯಚೂರಿನ ಹುಡುಗನಿಗೆ​ ಚಾನ್ಸ್ ಸಿಕ್ಕರೂ ಸಿಗಬಹುದು.

ಸದ್ಯ ಆರ್​ಸಿಬಿ ಗೆಲುವಿನ ಓಟದಲ್ಲಿದೆ. ಯಾವುದೇ ಆಟಗಾರರಿಂದ ಲೋಪಗಳು ಕಂಡುಬಂದಿಲ್ಲ. ಪ್ರತಿಯೊಬ್ಬರೂ ಉತ್ತಮವಾಗಿ ಆಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ತಂಡದ ಮ್ಯಾನೇಜ್ಮೆಂಟ್ ಪ್ಲೇಯಿಂಗ್​-11ನಲ್ಲಿ ಯಾವುದೇ ಬದಲಾವಣೆಗಳನ್ನ ಮಾಡಿ ರಿಸ್ಕ್​ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿ ಇದ್ದಂತೆ ಕಾಣ್ತಿಲ್ಲ.

ಇದನ್ನೂ ಓದಿ: ಮತ್ತೆ CSK ಸೋಲಿಸಿದ ಆರ್​ಸಿಬಿ.. ಆಫ್​ ದಿ ಫೀಲ್ಡ್​ನಲ್ಲೂ ಬೆಂಗಳೂರೇ ನಂಬರ್ ಒನ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment