newsfirstkannada.com

ಕೊಹ್ಲಿ, ಜಾಕ್ಸ್​ ಸಿಡಿಲಬ್ಬರದ ಘರ್ಜನೆ.. 16 ಸಿಕ್ಸರ್, 12 ಫೋರ್​​​.. ನಿನ್ನೆಯ ಪಂದ್ಯದ ರೋಚಕ ಕ್ಷಣಗಳು

Share :

Published April 29, 2024 at 9:34am

    ಹೇಗಿತ್ತು ಆರ್​​ಸಿಬಿ VS ಗುಜರಾತ್​ ಹೈ-ವೋಲ್ಟೇಜ್ ಕದನ?

    9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದ ನಮ್ಮ RCB

    ಸತತ 2ನೇ ಗೆಲುವು ದಾಖಲಿಸಿದ ಡುಪ್ಲೆಸಿ ಪಡೆ

ಆರ್​​​ಸಿಬಿಯ ಗೆಲುವಿನ ಓಟ ಗುಜರಾತ್​​ನಲ್ಲೂ ಮುಂದುವರೆದಿದೆ. ಹೈದ್ರಾಬಾದ್​ ಬಳಿಕ ಇದೀಗ ಗುಜರಾತ್​ ಟೈಟನ್ಸ್​ ಎದುರು ಆರ್​​ಸಿಬಿ ಗೆದ್ದು ಬೀಗಿದೆ. ಆರ್​​ಸಿಬಿ ಅಸಲಿ ಖದರ್​ ನೋಡಿ ಟೈಟನ್ಸ್​ ಪಡೆ ಒಂದು ಕ್ಷಣ ಶಾಕ್​ ಆಗಿದ್ದು ಸುಳ್ಳಲ್ಲ.. ನಮೋ ಅಂಗಳದಲ್ಲಿ ಕಿಂಗ್​ ಕೊಹ್ಲಿ ಹಾಗೂ ವಿಲ್​ ಜಾಕ್ಸ್​ ಘರ್ಜನೆ ಹಂಗಿತ್ತು.

ಅಹ್ಮದಾಬಾದ್​ನ ನಮೋ ಅಂಗಳದಲ್ಲಿ ಆರ್​​​ಸಿಬಿಯ ಅಬ್ಬರದ ಆಟಕ್ಕೆ ಗುಜರಾತ್​ ಟೈಟನ್ಸ್​ ಥಂಡಾ ಹೊಡೆದು ಹೊಯ್ತು. ವಿಲ್​ ಜಾಕ್ಸ್​ – ವಿರಾಟ್​ ಕೊಹ್ಲಿ ಬೌಲರ್​​​ಗಳ ಮೇಲೆ ದಂಡೆತ್ತಿ ಹೋಗಿ, ಬೌಂಡರಿ – ಸಿಕ್ಸರ್​​ಗಳ ತೋರಣ ಕಟ್ಟಿ ಬಿಟ್ರು. ಅಬ್ಬರದ ಆಟ ಕಂಡ ಆರ್​​​ಸಿಬಿ ಫ್ಯಾನ್ಸ್​ ಫುಲ್​ ಖುಷ್​ ಆದರು.

ಮೊದಲ ಓವರ್​​ನಲ್ಲೇ ಗುಜರಾತ್​ಗೆ ಸ್ಪಿನ್​ ‘ಗುನ್ನಾ’..!
ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಗುಜರಾತ್​ ಟೈಟನ್ಸ್​ ಆರಂಭದಲ್ಲೇ ಆಘಾತ ಎದುರಿಸಿತು. ಮೊದಲ ಓವರ್​​ನಲ್ಲೇ ಓಪನರ್​ ವೃದ್ಧಿಮಾನ್​ ಸಹಾ ಪೆವಿಲಿಯನ್​ ಸೇರಿದ್ರು. ಕೇವಲ 5 ರನ್​ಗಳಿಗೆ ಸಹಾ ಆಟ ಅಂತ್ಯವಾಯ್ತು.

ಗಿಲ್​ ಆಟಕ್ಕೆ ಬ್ರೇಕ್​ ಹಾಕಿದ ಮ್ಯಾಕ್ಸ್​ವೆಲ್​..!
ಸಹಾ ನಿರ್ಗಮನದ ಬಳಿಕ ಶುಭ್​ಮನ್​ ಗಿಲ್​, ಸಾಯಿ ಸುದರ್ಶನ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ರು. ಈ ವೇಳೆ ದಾಳಿಗಿಳಿದ ಗ್ಲೇನ್​ ಮ್ಯಾಕ್ಸ್​ವೆಲ್ ಪಾರ್ಟನರ್​​ ಶಿಪ್​ ಬ್ರೇಕ್​ ಮಾಡಿದ್ರು. ಕಮ್​ಬ್ಯಾಕ್​ ಮಾಡಿದ ಪಂದ್ಯದ ಮೊದಲ ಓವರ್​ನಲ್ಲೇ, ಗಿಲ್​ಗೆ ಪೆವಿಲಿಯನ್​ ದಾರಿ ತೋರಿಸಿದ್ರು.

ತಂಡಕ್ಕೆ ಆಸರೆಯಾದ ಸುದರ್ಶನ್-ಶಾರೂಖ್​
45 ರನ್​ಗಳಿಸುವಷ್ಟರಲ್ಲಿ 2 ವಿಕೆಟ್​ ಕಳೆದುಕೊಂಡ ಗುಜರಾತ್​ ತಂಡಕ್ಕೆ ಸಾಯ್​ ಸುದರ್ಶನ್​, ಶಾರೂಖ್​ ಖಾನ್​ ಆಸರೆಯಾದ್ರು. 3ನೇ ವಿಕೆಟ್​ಗೆ​ ಜೊತೆಯಾದ ಈ ಜೋಡಿ ಆರಂಭದಲ್ಲಿ ತಾಳ್ಮೆಯ ಆಟವಾಡಿತು. ಸೆಟಲ್​ ಆದ ಬಳಿಕ ಆರ್​​ಸಿಬಿ ಬೌಲರ್​ಗಳ ಸವಾರಿ ಮಾಡಿ 86 ರನ್​ಗಳ ಜೊತೆಯಾಟವಾಡಿತು. ಅಬ್ಬರದ ಬ್ಯಾಟಿಂಗ್​ ನಡೆಸಿದ ಶಾರೂಖ್​ ಖಾನ್​ 3 ಬೌಂಡರಿ, 5 ಸಿಕ್ಸರ್​​ ಸಿಡಿಸಿ ಘರ್ಜಿಸಿದ್ರು. ಹಾಫ್​ ಸೆಂಚುರಿ ಸಿಡಿಸಿ ಬಿಗ್​ ಸ್ಕೋರ್​​ ಕಲೆ ಹಾಕೋ ಲೆಕ್ಕಾಚಾರದಲ್ಲಿದ್ರು. ಆದ್ರೆ, ಮೊಹಮ್ಮದ್​ ಸಿರಾಜ್​ ಇದಕ್ಕೆ ಅವಕಾಶ ನೀಡಲಿಲ್ಲ. 58 ರನ್​ಗಳಿಸಿದ್ದ ವೇಳೆ ಸಿರಾಜ್​ ಕ್ಲೀನ್​ ಬೋಲ್ಡ್​ ಮಾಡಿದ್ರು.

ಅಂತಿಮ ಹಂತದವರೆಗೆ ಹೋರಾಡಿದ ಸುದರ್ಶನ್​
ಶಾರೂಖ್​ ಖಾನ್​ ನಿರ್ಗಮನದ ಬಳಿಕ ಕಣಕ್ಕಿಳಿದ ಡೇವಿಡ್​ ಮಿಲ್ಲರ್​​, ಸಾಯ್​ ಸುದರ್ಶನ್​ಗೆ ಸಾಥ್​ ನೀಡಿದ್ರು. ಬೌಂಡರಿ-ಸಿಕ್ಸರ್​ಗಳನ್ನ ಸಿಡಿಸಿದ ಸಾಯ್​ ಸುದರ್ಶನ್​ ಹಾಫ್​ ಸೆಂಚುರಿ ಸಿಡಿಸಿದ್ರು. 49 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್​ ಸಹಿತ ಅಜೇಯ 84 ರನ್​ ಸಿಡಿಸಿದ್ರು. 26 ರನ್​ಗಳೊಂದಿಗೆ ಡೇವಿಡ್​ ಮಿಲ್ಲರ್​ ಅಜೇಯರಾಗುಳಿದ್ರು. 20 ಓವರ್​​ಗಳಲ್ಲಿ ಗುಜರಾತ್ 3 ವಿಕೆಟ್​​ ನಷ್ಟಕ್ಕೆ​ 200 ರನ್​ ಗಳಿಸಿತು.

ಕೊಹ್ಲಿ-ಜಾಕ್ಸ್​ ಜಬರ್ದಸ್ತ್​ ಆಟ, ಫ್ಯಾನ್ಸ್​ಗೆ ಹಬ್ಬ..!
201 ರನ್​​ಗಳ ಟಾರ್ಗೆಟ್​ ಬೆನ್ನತ್ತಿದ ಆರ್​​​ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಅಬ್ಬರದ ಆರಂಭ ಮಾಡಿದ ಫಾಫ್​ ಡುಪ್ಲೆಸಿ 12 ಎಸೆತಗಳಲ್ಲಿ 24 ರನ್​ ಸಿಡಿಸಿ ಔಟಾದ್ರು. 2ನೇ ವಿಕೆಟ್​ ಜೊತೆಯಾದ ವಿರಾಟ್​ ಕೊಹ್ಲಿ-ವಿಲ್​ ಜಾಕ್ಸ್​ ಗುಜರಾತ್​ ಬೌಲರ್​​ಗಳ ಬೆಂಡೆತ್ತಿದ್ರು. ಯಾವ ಹಂತದಲ್ಲೂ ಈ ಟಾರ್ಗೆಟ್​ ಸವಾಲಿದ್ದು ಅನ್ನಿಸಲೇ ಇಲ್ಲ. ಅಷ್ಟು ಸಲೀಸಾಗಿ ಇವರಿಬ್ಬರು ಬ್ಯಾಟಿಂಗ್​ ನಡೆಸಿದ್ರು. ಗುಜರಾತ್​​ ಬೌಲರ್​​​ಗಳನ್ನ ಮನಬಂದಂತೆ ದಂಡಿಸಿದ ಈ ಜೋಡಿ ಅಜೇಯ 166 ರನ್​ಗಳ ಜೊತೆಯಾಟವಾಡಿತು.

ಕಿಂಗ್​ ಕೊಹ್ಲಿ ಅಬ್ಬರಕ್ಕೆ ಥಂಡಾ ಹೊಡೆದ ಗುಜರಾತ್​
ನಮೋ ಅಂಗಳದಲ್ಲಿ ವಿರಾಟ್​ ಕೊಹ್ಲಿ ಸಖತ್​ ಕಾಲ್ಕುಲೇಟೆಡ್ ಇನ್ನಿಂಗ್ಸ್​ ಆಡಿದ್ರು. ತನ್ನ ಬ್ಯಾಟಿಂಗ್​ನಿಂದಲೇ ಸ್ಟ್ರೈಕ್​ರೇಟ್​​​ನ ಟೀಕೆಗಳಿಗೂ ಆನ್ಸರ್​ ಕೊಟ್ರು. ಕೇವಲ 44 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್​​ ಸಹಿತ ಅಜೇಯ 70 ರನ್​​ ಚಚ್ಚಿದ್ರು.

ವಿಲ್​ ಜಾಕ್ಸ್​ ಶತಕದಾಟ, ಸುಸ್ತು ಹೊಡೆದ ಬೌಲರ್ಸ್​..!
ಯಂಗ್​ ಬ್ಯಾಟ್ಸ್​​ಮನ್​ ವಿಲ್​ ಜಾಕ್ಸ್​​ ಗುಜರಾತ್​ ಬೌಲರ್​​ಗಳನ್ನ ಬಿಡದೇ ಕಾಡಿದ್ರು. ಆರಂಭದಲ್ಲಿ ನಿಧಾನಗತಿಯ ಆಟವಾಡಿದ ಜಾಕ್ಸ್​, ಅಂತಿಮ ಹಂತದಲ್ಲಿ ಅಕ್ಷರಶಃ ಘರ್ಜಿಸಿದ್ರು. ಮೊಹಿತ್​ ಶರ್ಮಾ, ರಶೀದ್​ ಖಾನ್​ರಂತ ಲೆಜೆಂಡ್​ ಬೌಲರ್ ದಾಳಿಯನ್ನ ಚಚ್ಚಿ ಬಿಸಾಕಿದ್ರು. 41 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ರು. ವಿರಾಟ್​ ಕೊಹ್ಲಿ-ವಿಲ್​ ಜಾಕ್ಸ್​ ಅಬ್ಬರದ ಆಟದ ನೆರವಿನೊಂದಿಗೆ ಆರ್​​ಸಿಬಿ 16 ಓವರ್​​ಗಳಲ್ಲೇ ಗುರಿ ತಲುಪಿತು. ಕೇವಲ 1 ವಿಕೆಟ್​ ಕಳೆದುಕೊಂಡು 9 ವಿಕೆಟ್​ ಭರ್ಜರಿ ಗೆಲುವು ದಾಖಲಿಸಿತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ, ಜಾಕ್ಸ್​ ಸಿಡಿಲಬ್ಬರದ ಘರ್ಜನೆ.. 16 ಸಿಕ್ಸರ್, 12 ಫೋರ್​​​.. ನಿನ್ನೆಯ ಪಂದ್ಯದ ರೋಚಕ ಕ್ಷಣಗಳು

https://newsfirstlive.com/wp-content/uploads/2024/04/KOHLI-JACKS.jpg

Load More