/newsfirstlive-kannada/media/post_attachments/wp-content/uploads/2025/04/SIRAJ-1.jpg)
ಸತತ 2 ಪಂದ್ಯಗಳಲ್ಲಿ ಭರ್ಜರಿ ಆಟವಾಡಿದ ಆತ್ಮವಿಶ್ವಾಸದಲ್ಲಿದ್ದ ಆರ್ಸಿಬಿ ಬ್ಯಾಟರ್ಸ್ ತವರಿನಂಗಳಲ್ಲಿ ಸೈಲೆಂಟಾದ್ರು. ಮಾಜಿ ವೇಗಿ ಸಿರಾಜ್ ಅಬ್ಬರಕ್ಕೆ ಆರ್ಸಿಬಿ ತತ್ತರಿಸಿತು. RCB ಸೂಪರ್ ಸ್ಟಾರ್ಗಳು ಪೆವಿಲಿಯನ್ ಪರೇಡ್ ನಡೆಸಿದ್ರೆ ಗುಜರಾತ್ ಬೌಲರ್ಗಳು ಮೆರೆದಾಡಿದ್ರು.
ಹೋಮ್ಗ್ರೌಂಡ್ ಚಿನ್ನಸ್ವಾಮಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗಿಳಿದ ಆರ್ಸಿಬಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಗುಜರಾತ್ ಟೈಟನ್ಸ್ ಬೌಲರ್ಗಳ ಟೈಟ್ ಸ್ಪೆಲ್ ಮುಂದೆ ಆರ್ಸಿಬಿಯ ಸೂಪರ್ ಸ್ಟಾರ್ ಆಟಗಾರರೆಲ್ಲಾ ಪೆವಿಲಿಯನ್ ಪರೇಡ್ ನಡೆಸಿದ್ರು. ಹೋಮ್ಗ್ರೌಂಡ್ನಲ್ಲಿ ಬೆಂಗಳೂರು ಬಾಯ್ಸ್ ಪರದಾಡಿದ್ರೆ ಗುಜರಾತ್ ಟೈಟನ್ಸ್ ಮೆರೆದಾಡಿದ್ರು.
ಇದನ್ನೂ ಓದಿ: ಆರ್ಸಿಬಿಗೆ ತವರಿನಲ್ಲಿ ಮುಖಭಂಗ.. ಹೀನಾಯ ಸೋಲಿಗೆ ಕ್ಯಾಪ್ಟನ್ ಪಾಟೀದಾರ್ ಕೊಟ್ಟ ಕಾರಣ ಏನು..?
ಯುವ ವೇಗಿ ಆರ್ಷದ್ ಖಾನ್ ಆರ್ಭಟದ ಮುಂದೆ ವಿರಾಟ್ ಕೊಹ್ಲಿ ಸೈಲೆಂಟಾಗಿ ಪೆವಿಲಿಯನ್ ಸೇರಿದ್ರು. ಮೊಹಮ್ಮದ್ ಸಿರಾಜ್ ಎಸೆತಕ್ಕೆ ಕಕ್ಕಾಬಿಕ್ಕಿಯಾದ ಕನ್ನಡಿಗ ದೇವದತ್ತ್ ಪಡಿಕ್ಕಲ್ ಕ್ಲೀನ್ ಬೋಲ್ಡ್ ಆದ್ರು. ಸಿಕ್ಕ ಜೀವದಾನಗಳನ್ನ ಬಳಸಿಕೊಳ್ಳುವಲ್ಲಿ ವಿಫಲರಾದ ಫಿಲ್ ಸಾಲ್ಟ್, ಸಿರಾಜ್ಗೆ 2ನೇ ಬಲಿಯಾದ್ರು. ನಾಯಕ ರಜತ್ ಪಟಿದಾರ್ ಕೂಡ ಕುಸಿದ ತಂಡಕ್ಕೆ ಆಸರೆಯಾಗಲಿಲ್ಲ. 42 ರನ್ಗಳಿಸುವಷ್ಟರಲ್ಲೇ ಆರ್ಸಿಬಿಯ ಪ್ರಮುಖ 4 ವಿಕೆಟ್ಗಳನ್ನ ಕಳೆದುಕೊಂಡಿತು. ಆ ಮೂಲಕ ಸಿರಾಜ್, ಆರ್ಸಿಬಿ ವಿರುದ್ಧ ಸೇಡು ತೀರಿಸಿಕೊಂಡರು.
ಬಳಿಕ ಕ್ರಿಸ್ನಲ್ಲಿ ಜೊತೆಯಾದ ಲಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ ತಂಡಕ್ಕೆ ಚೇತರಿಕೆ ನೀಡೋ ಯತ್ನ ಮಾಡಿದ್ರು. ಒತ್ತಡದ ನಡುವೆಯೂ ಉತ್ತಮ ಆಟವಾಡಿದ ಜಿತೇಶ್ ಶರ್ಮಾ 5 ಬೌಂಡರಿ, 1 ಸಿಕ್ಸರ್ ಸಹಿತ 33 ರನ್ ಸಿಡಿಸಿದ್ರು. ಕೃನಾಲ್ ಪಾಂಡ್ಯ ಫ್ಲಾಫ್ ಶೋ ಮುಂದುವರೆಸಿದ್ರೆ, ಲಯಾಮ್ ಲಿವಿಂಗ್ಸ್ಟೋನ್ ಹಾಫ್ ಸೆಂಚುರಿ ಸಿಡಿಸಿದ್ರು. 5 ಸಿಕ್ಸರ್, 1 ಬೌಂಡರಿ ಸಿಡಿಸಿದ ಲಿವಿಂಗ್ಸ್ಟೋನ್ 40 ಎಸೆತಗಳಲ್ಲಿ 54 ರನ್ಗಳಿಸಿದ್ರು. ಕೊನೆಗೂ ಲಿವಿಂಗ್ಸ್ಟೋನ್ ಸಿರಾಜ್ಗೆ ವಿಕೆಟ್ ಒಪ್ಪಿಸಿದರು.
ಅಂತಿಮ ಹಂತದಲ್ಲಿ ಟಿಮ್ ಡೇವಿಡ್ ಅಬ್ಬರಿಸಿದ್ರು. 3 ಬೌಂಡರಿ, 2 ಸಿಕ್ಸರ್ ಸಿಡಿಸಿ ಮಿಂಚಿದ್ರು. 18 ಎಸೆತಗಳಲ್ಲಿ 32 ರನ್ ಸಿಡಿಸಿದ್ರು. ಪರಿಣಾಮ 20 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡ ಆರ್ಸಿಬಿ 169 ರನ್ಗಳ ಸ್ಕೋರ್ ಕಲೆ ಹಾಕಿತು. ಗುಜರಾತ್ ಪರ ಮೊಹಮ್ಮದ್ ಸಿರಾಜ್ 3, ಸಾಯಿಕಿಶೋರ್ 2 ವಿಕೆಟ್ ಕಬಳಿಸಿ ಮಿಂಚಿದ್ರು.
ಇದನ್ನೂ ಓದಿ: RCBಗೆ ಕೈಕೊಟ್ಟ ವಿರಾಟ್ ಕೊಹ್ಲಿ.. ಸ್ಟಾರ್ ಬ್ಯಾಟರ್ನಿಂದ ಅಭಿಮಾನಿಗಳಿಗೆ ಬಿಗ್ ಶಾಕ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್