Advertisment

RCB vs GT: ಬೆಂಗಳೂರಲ್ಲೇ ಪಂದ್ಯ, ಹೆಚ್ಚು ಬಾರಿ ಗೆದ್ದ ತಂಡ ಯಾವುದು? ಕಂಪ್ಲೀಟ್​ ಮಾಹಿತಿ..!

author-image
Ganesh
Updated On
RCB vs GT: ಬೆಂಗಳೂರಲ್ಲೇ ಪಂದ್ಯ, ಹೆಚ್ಚು ಬಾರಿ ಗೆದ್ದ ತಂಡ ಯಾವುದು? ಕಂಪ್ಲೀಟ್​ ಮಾಹಿತಿ..!
Advertisment
  • ಎಂ.ಚಿನ್ನಸ್ವಾಮಿ ಮೈದಾನದಲ್ಲಿ RCB vs GT ಪಂದ್ಯ
  • ಇವತ್ತು ಪಂದ್ಯ ಎಷ್ಟುಗಂಟೆಯಿಂದ ಆರಂಭ ಆಗಲಿದೆ?
  • ಗುಜರಾತ್ ಟೈಟನ್ಸ್ ವಿರುದ್ಧ ಆರ್​ಸಿಬಿ ಎಷ್ಟು ಸಲ ಸೋತಿದೆ?

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಇವತ್ತು ಆರ್​ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಸತತ ಎರಡು ಗೆಲುವುಗಳೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿರುವ RCB, ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಗುಜರಾತ್ ತಂಡವನ್ನು ಸೋಲಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿಯನ್ನು ಹೊಂದಿದೆ. ಇವತ್ತಿನ ಪಂದ್ಯಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ಇಲ್ಲಿದೆ.

Advertisment
  • ಪಂದ್ಯ ಯಾವಾಗ ನಡೆಯುತ್ತೆ?: ಏಪ್ರಿಲ್ 02, ಅಂದರೆ ಇವತ್ತು
  • ಸ್ಥಳ ಯಾವುದು?: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ
  • ಪಂದ್ಯ ಯಾವಾಗ ಪ್ರಾರಂಭ?: ಭಾರತೀಯ ಕಾಲಮಾನ ಸಂಜೆ 7:30ಕ್ಕೆ
  • ಟಾಸ್ ನಡೆಯುವ ಸಮಯ: ಸಂಜೆ 7:00 ಗಂಟೆಗೆ
  • ಯಾವ ಟಿವಿ ಚಾನೆಲ್‌ನಲ್ಲಿ ವೀಕ್ಷಿಸಬಹುದು?: ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ
  • ನೇರ ಪ್ರಸಾರ ಎಲ್ಲಿ? ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ, ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.

ಎರಡೂ ತಂಡಗಳು ಇಲ್ಲಿಯವರೆಗೆ ಒಟ್ಟು ಐದು ಬಾರಿ ಮುಖಾಮುಖಿ ಆಗಿವೆ. ಅದರಲ್ಲಿ ಆರ್​ಸಿಬಿ ಮೂರು ಬಾರಿ ಗೆಲುವು ಸಾಧಿಸಿದ್ರೆ, ಗುಜರಾತ್​ 2 ಬಾರಿ ಗೆದ್ದುಕೊಂಡಿದೆ. ಗುಜರಾತ್ ವಿರುದ್ಧ ಆರ್​ಸಿಬಿ ಬಾರಿಸಿದ ಅತ್ಯಧಿಕ ರನ್ 206 ಆಗಿದೆ. ಆರ್​ಸಿಬಿ ವಿರುದ್ಧ ಗುಜರಾತ್ ಬಾರಿಸಿದ ಅತ್ಯಧಿಕ ರನ್ 200 ರನ್​. ಅದೇ ರೀತಿ ಕಡಿಮೆ ಸ್ಕೋರ್​ ಅಂದ್ರೆ, ಆರ್​ಸಿಬಿ ಒಮ್ಮೆ 170 ರನ್ ಬಾರಿಸಿದೆ. ಗುಜರಾತ್ 147 ರನ್​ಗಳಿಸಿತ್ತು.

ಇದನ್ನೂ ಓದಿ: ವಕ್ಫ್ ಹಳೆ ಕಾನೂನು ಮತ್ತು ಹೊಸ ತಿದ್ದುಪಡಿಯಲ್ಲೆನಿದೆ? ವಿಪಕ್ಷ, ಮುಸ್ಲಿಂ ಸಂಘಟನೆಗಳು ವಿರೋಧ ಯಾಕೆ?

Advertisment

ಆರ್​ಸಿಬಿ ತಂಡದಲ್ಲಿ ಯಾರೆಲ್ಲ ಇರ್ತಾರೆ..?

ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್.

ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶೆರ್ಫೇನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: ಆರ್​ಸಿಬಿಯ ಇಬ್ಬರು ಬೌಲರ್​ಗಳಿಂದ GTಗೆ ನಡುಕ.. ಇವತ್ತು ಗುಜರಾತ್​ ಬ್ಯಾಟರ್​ಗಳು ಧ್ವಂಸ ಪಕ್ಕಾ..!

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment