newsfirstkannada.com

ಕೊಹ್ಲಿಯ ಬ್ಯಾಟ್​ ಮುರಿದು ಹಾಕಿದ ರಿಂಕು ಸಿಂಗ್.. KKR ಯಂಗ್ ಗನ್​ ವಿರುದ್ಧ ಗರಂ ಆದ್ರಾ ವಿರಾಟ್?

Share :

Published April 21, 2024 at 11:12am

  ನಿಮ್ಮ ಬ್ಯಾಟ್ ಮುರಿದು ಹೋಗಿದೆ ಅಂತ ಹೇಳಿದ್ದಕ್ಕೆ ಕೊಹ್ಲಿ ಆಶ್ಚರ್ಯ!

  ಈಗಾಗಲೇ ಕೊಟ್ಟಿದ್ದ ಒಂದು ಬ್ಯಾಟ್​ ಅನ್ನು ರಿಂಕು ಮುರಿದು ಹಾಕಿದ್ರಾ?

  KKR ಯಂಗ್ ಗನ್ ರಿಂಕು ಇನ್ನೊಂದು ಬ್ಯಾಟ್ ಕೇಳಿದ್ದಕ್ಕೆ ಏನಂದರು?

ಕ್ರಿಕೆಟ್​ ಲೋಕದಲ್ಲಿ ಸೀನಿಯರ್ ಆಟಗಾರರಿಂದ ಬ್ಯಾಟ್​, ಬಾಲ್​, ವಿಕೆಟ್ಸ್​, ಪ್ಯಾಡ್, ಗ್ಲೌಸ್​, ಟೀಶರ್ಟ್​ ಅನ್ನು ಗಿಫ್ಟ್​ ಆಗಿ ಪಡೆಯುವುದು ಎಂದರೆ ಜ್ಯೂನಿಯರ್ ಆಟಗಾರರಿಗೆ ಎಲ್ಲಿಲ್ಲದ ಪ್ರೀತಿ. ಅಲ್ಲದೇ ಅವರು ಬ್ಯಾಟ್ ಕೊಡ್ತಿದ್ದಾರೆ ಎಂದರೆ ನನಗೆ, ನನಗೆ ಎಂದು ಮೊದಲು ಇಸ್ಕೊಂಡು ಬಿಡ್ತಾರೆ. ಸದ್ಯ ಇದೇ ರೀತಿ ವಿರಾಟ್​ ಕೊಹ್ಲಿಯಿಂದ ಗಿಫ್ಟ್​ ಆಗಿ ಪಡೆದುಕೊಂಡ ಬ್ಯಾಟ್ ಅನ್ನು ಕೆಕೆಆರ್​ ಯಂಗ್ ಬ್ಯಾಟ್ಸ್​ಮನ್ ಮುರಿದು ಹಾಕಿದ್ದಾರೆ.

ವಿರಾಟ್​ ಕೊಹ್ಲಿ ಬ್ಯಾಟ್ ಪಡೆಯುವುದು ಎಂದರೆ ಕಿಕ್ರೆಟ್​ ಕ್ಷೇತ್ರದಲ್ಲಿ ಅದೃಷ್ಟನೇ ಮಾಡಿರಬೇಕು ಎನ್ನುತ್ತಾರೆ. ಅಂಥದ್ರಲ್ಲಿ ವಿರಾಟ್​ ಕೊಹ್ಲಿಯಿಂದ ಪಡೆದುಕೊಂಡ ಬ್ಯಾಟ್​ ಅನ್ನು ರಿಂಕು ಸಿಂಗ್ ಮುರಿದು ಹಾಕಿದ್ದಾರೆ. ಈ ಬಗ್ಗೆ ಸ್ವತಹ ರಿಂಕು ಸಿಂಗ್ ಹೇಳಿದ್ದಕ್ಕೆ ಕಿಂಗ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನನ್ನ ಬ್ಯಾಟ್​ ಮುರಿದು ಹಾಕಿದ್ಯಾ? ಎಂದು ಕೇಳಿದ್ದಾರೆ.

ರಿಂಕು: ಭಯ್​ ನೀವು ಕೊಟ್ಟಿರುವ ಬ್ಯಾಟ್ ಮುರಿದು ಹೋಗಿದೆ
ಕೊಹ್ಲಿ: ನನ್ನ ಬ್ಯಾಟ್​, ನಾನು ಕೊಟ್ಟಿದ್ದ ಬ್ಯಾಟ್​ ಅನ್ನ ಮುರಿದು ಹಾಕಿದ್ದೀಯಾ?
ರಿಂಕು: ಹ್ಹು ಅಣ್ಣ
ಕೊಹ್ಲಿ; ಎಲ್ಲಿ, ಹೇಗೆ ಮುರಿದು ಹೋಯಿತು
ರಿಂಕು: ಬ್ಯಾಟಿಂಗ್ ಮಾಡುವಾಗ ಬ್ಯಾಟ್​ ಮುಂದೆ ಸೀಳಿ ಹೋಗಿದೆ.
ಕೊಹ್ಲಿ: ನಿನಗೆ ಕೊಟ್ಟಿದ್ದಕ್ಕೆ ದೊಡ್ಡ ಕೆಲಸನೇ ಮಾಡಿದೆ. ನನಗೆ ಅದರ ಮಾಹಿತಿ ಬೇಕಾಗಿಲ್ಲ. ಮೊದಲ ಮ್ಯಾಚ್​ನಲ್ಲಿ ಒಂದು ಬ್ಯಾಟ್ ಕೊಟ್ಟಿದ್ದೀನಿ. ಈಗ 2ನೇ ಮ್ಯಾಚ್​ನಲ್ಲಿ ಇನ್ನೊಂದು ಬ್ಯಾಟ್ ಕೊಡಬೇಕಾ?.
ರಿಂಕು: ಇನ್ನೊಮ್ಮೆ ಯಾವಾಗಲೂ ಮುರಿದು ಹಾಕಲ್ಲ, ಬೇಕಾದ್ರೆ ನೀವು ಮೊದಲ ಕೊಟ್ಟ ಬ್ಯಾಟ್ ಮುರಿದು ಹೋಗಿದೆ, ತೋರಿಸ್ಲಾ?.

ವಿರಾಟ್ ಅವರ ಎರಡು ಬ್ಯಾಟ್​ಗಳನ್ನು ಟ್ರೈಯಲ್ ನೋಡಿದ ರಿಂಕು ಸಿಂಗ್ ಇವುಗಳನ್ನು ಮಾರಾಟ ಮಾಡುತ್ತಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ವಿರಾಟ್ ಯಾರಿಗೆ ಮಾರಾಟ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ರಿಂಕು ಜೊತೆ ಹಾಗೇ ಮಾತನಾಡುತ್ತಲೇ ಕಿಟ್ ಎಳೆದುಕೊಂಡು ವಿರಾಟ್ ಮುಂದೆ ಹೋಗಿದ್ದಾರೆ. ಇಂದು ಈಡನ್​ ಗಾರ್ಡನ್ಸ್​ ಮೈದಾನದಲ್ಲಿ 3:30ಕ್ಕೆ ಪಂದ್ಯ ನಡೆಯಲಿದೆ. ಇದಕ್ಕೂ ಮೊದಲು ರಿಂಕು ಬ್ಯಾಟ್ ಮುರಿದು ಹೋಗಿರುವ ಬಗ್ಗೆ ಕೊಹ್ಲಿ ಬಳಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿಯ ಬ್ಯಾಟ್​ ಮುರಿದು ಹಾಕಿದ ರಿಂಕು ಸಿಂಗ್.. KKR ಯಂಗ್ ಗನ್​ ವಿರುದ್ಧ ಗರಂ ಆದ್ರಾ ವಿರಾಟ್?

https://newsfirstlive.com/wp-content/uploads/2024/04/VIRAT_RINKU_SINGH.jpg

Load More