/newsfirstlive-kannada/media/post_attachments/wp-content/uploads/2025/04/RCB_COACH.jpg)
ಆರ್ಸಿಬಿ ಅಭಿಮಾನಿಗಳಿಗೆ ದೊಡ್ಡ ನಿರಾಸೆ ಆಗಿದೆ. ಕೋಲ್ಕತ್ತ ವಿರುದ್ಧದ ಪಂದ್ಯವು ಟಾಸ್ ಕೂಡ ನಡೆಯದೇ ಮಳೆಯಿಂದಾಗಿ ರದ್ದುಗೊಂಡಿದೆ. ಆ ಮೂಲಕ ಆರ್ಸಿಬಿ ಪ್ಲೇ-ಆಫ್ ಪ್ರವೇಶದ ಕ್ಷಣ ಕುಣ್ತುಂಬಿಕೊಳ್ಳಲು ಮತ್ತೆ ಕಾಯಬೇಕಾಗಿದೆ.
ಕೋಲ್ಕತ್ತ ವಿರುದ್ಧ ಗೆದ್ದು ಆರ್ಸಿಬಿ ಇಂದು ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶ ಮಾಡಲಿದೆ ಎಂದು ಅಭಿಮಾನಿಗಳು ಕಾದು ಕೂತಿದ್ದರು. ಆದರೆ, ಇಂದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ಮಧ್ಯಾಹ್ನದ ವೇಳೆ ಬಿಟ್ಟು ಬಿಡದೇ ಸುರಿದ ಮಳೆಯಿಂದಾಗಿ ಪಂದ್ಯ ನಡೆಸಲು ಆಗದೇ ರದ್ದು ಗೊಂಡಿದೆ.
ಇದನ್ನೂ ಓದಿ: RCB ಮ್ಯಾಚ್ಗೂ ಅಡ್ಡಿ.. ಬೆಂಗಳೂರಲ್ಲಿ 20ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು.. ಎಲ್ಲೆಲ್ಲಿ ಏನೇನು ಆಯ್ತು..?
ಆ ಮೂಲಕ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ತಲಾ ಒಂದೊಂದು ಅಂಕವನ್ನು ಹಂಚಿಕೊಂಡಿವೆ. ಆ ಮೂಲಕ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ 17 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಹೀಗಾಗಿ ಆರ್ಸಿಬಿ ಪ್ಲೇ-ಆಫ್ಗೆ ಹೋಗಲು ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಮ್ಯಾಚ್ ಗೆಲ್ಲಲೇಬೇಕಿದೆ.
ಮತ್ತೊಂದು ಕಡೆ, ಕೋಲ್ಕತ್ತ ನೈಟ್ ರೈಡರ್ಸ್ ಒಟ್ಟು 12 ಅಂಕ ಪಡೆಯಿತು. ಬೆನ್ನಲ್ಲೇ ಕೋಲ್ಕತ್ತ ನೈಟ್ ರೈಡರ್ಸ್ನ ಈ ವರ್ಷದ ಐಪಿಎಲ್ ಜರ್ನಿ ಮುಕ್ತಾಯ ಆದಂತೆ ಆಗಿದೆ. ಕೆಕೆಆರ್ಗೆ ಇನ್ನು ಒಂದು ಪಂದ್ಯ ಮಾತ್ರ ಭಾಕಿ ಇದೆ. ಆ ಪಂದ್ಯ ಗೆದ್ದರೂ, ಪ್ಲೆ-ಆಫ್ ಪ್ರವೇಶ ಅಸಾಧ್ಯ.
ಇದನ್ನೂ ಓದಿ: ಅಭಿಮಾನದ ಹೆಸರಲ್ಲಿ ಚಾಲೆಂಜ್.. ಇದೆಂಥ ಪರಿಸ್ಥಿತಿ ತಂದ್ಕೊಂಡ್ರು ಬುದ್ಧಿಗೇಡಿಗಳು..! VIDEO
ಇಂದು ರದ್ದಾದ ಪಂದ್ಯವನ್ನು ಹೊರತುಪಡಿಸಿ ಕೆಕೆಆರ್ 12 ಪಂದ್ಯಗಳನ್ನ ಆಡಿದೆ. 12 ಪಂದ್ಯಗಳಲ್ಲಿ ಐದು ಮ್ಯಾಚ್ ಗೆದ್ದು, 6 ರಲ್ಲಿ ಸೋಲನ್ನು ಕಂಡಿದೆ. ಆ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿದೆ. ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು, ಈ ಬಾರಿ ಅಜಿಂಕ್ಯೆ ರಹಾನೆ ಲೀಡ್ ಮಾಡಿದ್ದರು. ಕಳೆದ ಬಾರಿ ಶ್ರೇಯಸ್ ಅಯ್ಯರ್ ನೆತೃತ್ವದಲ್ಲಿ ಚಾಂಪಿಯನ್ ಆಗಿತ್ತು.
ಇದನ್ನೂ ಓದಿ: ಆರ್ಸಿಬಿಯಲ್ಲಿ ಈಗ ಮತ್ತೊಬ್ಬ ಕನ್ನಡಿಗ.. ಬ್ಯಾಟಿಂಗ್ ವಿಭಾಗಕ್ಕೆ ಬಂದಿದೆ ಸೂಪರ್ ಪವರ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್