ನಾಳೆ KKR ವಿರುದ್ಧ ಪಂದ್ಯ.. ಅಭಿಮಾನಿಗಳು ಮತ್ತೆ ಮತ್ತೆ ಬೇಡಿಕೊಳ್ತಿರೋದು ಏನು ಗೊತ್ತಾ..?

author-image
Ganesh
Updated On
ಟೆನ್ಶನ್.. ಟೆನ್ಶನ್.. ಟೆನ್ಶನ್.. ಆರ್​ಸಿಬಿ ಕ್ಯಾಂಪ್​ನ ಚಿಂತೆಗೆ ದೂಡಿದ ಒಬ್ಬ ಆಟಗಾರ..!
Advertisment
  • ನಾಳೆಯಿಂದ ಐಪಿಎಲ್​​ನ ಎರಡನೇ ಇನ್ನಿಂಗ್ಸ್ ಪುನರ್ ಆರಂಭ
  • ಭಾರತ-ಪಾಕ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಪಂದ್ಯ ಸ್ಥಗಿತಗೊಂಡಿತ್ತು
  • ನಾಳೆ ಗೆದ್ದರೆ ಆರ್​ಸಿಬಿ ನೇರವಾಗಿ ಪ್ಲೇ-ಆಫ್ ಪ್ರವೇಶ ಮಾಡಲಿದೆ

ಐಪಿಎಲ್ 2025ನಲ್ಲಿ ಕೋಲ್ಕತ್ತ ನೈಟ್​ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಒಂದು ವೇಳೆ ಆರ್​ಸಿಬಿ ನಾಳೆ ನಡೆಯಲಿರುವ ಪಂದ್ಯವನ್ನು ಗೆದ್ದರೆ ಅಧಿಕೃತವಾಗಿ ಪ್ಲೇ-ಆಫ್​ಗೆ ಲಗ್ಗೆ ಇಡಲಿದೆ. ಆದರೆ ಪಂದ್ಯಕ್ಕೂ ಮೊದಲು ಅಭಿಮಾನಿಗಳಿಗೆ ಆತಂಕವೊಂದು ಕಾಡಿದೆ.

ಮಳೆಯ ಸಾಧ್ಯತೆ..

ಅದು ಬೇರೇ ಏನೂ ಅಲ್ಲ. ನಾಳೆ ಐಪಿಎಲ್ ಪಂದ್ಯಕ್ಕೆ ಮಳೆಯ ಆತಂಕ ಇದೆ. ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ಇರೋದ್ರಿಂದ ಮಳೆ ಅಡ್ಡಿಪಡಿಸುವ ನಿರೀಕ್ಷೆ ಇದೆ. ಯಾಕೆಂದರೆ ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆಗೆ ಮಳೆಯಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯೂ ಮಳೆಯಾರ ಕಾಟ ಕೊಡುವ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ನಿಜಕ್ಕೂ ಉಗ್ರಂ ಮಂಜುಗೆ ಕನ್ಯೆ ಸಿಕ್ಕಾಯ್ತಾ? ಈ ಬಗ್ಗೆ ಗೌತಮಿ ಜಾಧವ್​ ಹೇಳಿದ್ದೇನು? VIDEO

publive-image

AccuWeather ಮಾಹಿತಿ ಪ್ರಕಾರ, ನಾಳೆಯೂ ಕೂಡ ಬೆಂಗಳೂರಿನಲ್ಲಿ ಮಳೆಯಾಗಲಿದೆ. ಸಂಜೆ 7 ಗಂಟೆ ವೇಳೆಗೆ ಶೇಕಡಾ 34 ಮಳೆ ಬರುವ ನಿರೀಕ್ಷೆ ಇದೆ. ಅದೇ ರೀತಿ 9 ಗಂಟೆ ಸುಮಾರಿಗೆ ಶೇಕಡಾ 40 ರಷ್ಟು, 10 ಗಂಟೆ ಸುಮಾರಿಗೆ ಶೇಕಡಾ 51 ರಷ್ಟು ಹಾಗೂ 11 ಗಂಟೆ ವೇಳೆಗೆ ಶೇಕಡಾ 47 ರಷ್ಟು ಮಳೆ ಬರುವ ನಿರೀಕ್ಷೆ ಮಾಡಲಾಗಿದೆ.

ಒಂದು ವೇಳೆ ಬೆಂಗಳೂರಿನಲ್ಲಿ ಮಳೆ ಬಂದರೂ ಅಭಿಮಾನಿಗಳು ಆತಂಕ ಪಡುವ ಅಗತ್ಯ ಇಲ್ಲ. ಮಳೆ ನಿಂತ ಅರ್ಧ ಗಂಟೆಯಲ್ಲಿ ಪಂದ್ಯ ಆರಂಭಿಸಲು ಬೇಕಾಗಿರುವ ಎಲ್ಲಾ ವ್ಯವಸ್ಥೆಗಳು ಇರೋದ್ರಿಂದ ಮಳೆ ಬಂದರೂ ಬೆಂಗಳೂರಿನಲ್ಲಿ ಪಂದ್ಯ ನಡೆಯೋದಂತೂ ಪಕ್ಕಾ.

ಇದನ್ನೂ ಓದಿ: ಪಾಕಿಸ್ತಾನ ಸೂಪರ್ ಲೀಗ್​ಗೆ ಗುಡ್​ಬೈ.. ಐಪಿಎಲ್​​ಗೆ ಹಾಯ್ ಹಾಯ್ ಹೇಳಿದ ಸ್ಟಾರ್ ಪ್ಲೇಯರ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment