/newsfirstlive-kannada/media/post_attachments/wp-content/uploads/2025/05/Chinnaswamy-1.jpg)
ಸಂಜೆ ಆಗುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಎಂದಿನಂತೆ ಮಳೆರಾಯನ ಕಾಟ ಶುರುವಾಗಿದೆ. ಇದರಿಂದ ಐಪಿಎಲ್ ಪಂದ್ಯಕ್ಕೂ ಅಡಚಣೆ ಆಗಿದೆ.
ನಗರದ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಇಂದು ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತ ನೈಟ್ ರೈಡರ್ಸ್ ಮುಖಾಮುಖಿ ಆಗ್ತಿವೆ. ಪಂದ್ಯ ಶುರುವಾಗಲು ಕೆಲವೇ ನಿಮಿಷಗಳು ಮಾತ್ರ ಬಾಕಿ ಇವೆ. ಸಂಜೆ 7 ಗಂಟೆಗೆ ಟಾಸ್ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಮಳೆ ಆರಂಭ ಆಗಿರೋ ಹಿನ್ನೆಲೆಯಲ್ಲಿ ಟಾಸ್​ ವಿಳಂಬ ಆಗಲಿದೆ.
/newsfirstlive-kannada/media/post_attachments/wp-content/uploads/2025/05/Chinnaswamy-2.jpg)
ಮಳೆ ನಿಂತ ನಂತರ ಮೈದಾನದಲ್ಲಿರುವ ನೀರು ಹೊರ ಹಾಕುವ ಕೆಲಸ ಆಗಲಿದೆ. ನಂತರ ಪಂದ್ಯದ ಭವಿಷ್ಯ ನಿರ್ಧಾರವಾಗಲಿದೆ. ಚಿನ್ನಸ್ವಾಮಿ ಸ್ಟೇಡಿಯಂ, ಚಿಕ್ಕಪೇಟೆ, ಶಿವಾನಂದ ಸರ್ಕಲ್, ಮೆಜಸ್ಟಿಕ್, ಲಾಲ್ ಬಾಗ್, ಕತ್ರಿಗುಪ್ಪೆ, ಎಂಜಿ ರಸ್ತೆ, ಕಾರ್ಪೊರೇಷನ್ ಸರ್ಕಲ್, ಟೌನ್ ಹಾಲ್ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಶುರುವಾಗಿದೆ.
ಇದನ್ನೂ ಓದಿ: ಕೊಹ್ಲಿಗೆ ಅಭಿಮಾನಿಗಳಿಂದ ಸರ್ಪ್ರೈಸ್ ಗಿಫ್ಟ್​.. ಎಕ್ಸೈಟಿಂಗ್ ಪಂದ್ಯಕ್ಕೆ ಫ್ಯಾನ್ಸ್ ತಯಾರಿ ಹೇಗಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us